ಹಂಪನಕಟ್ಟೆ ಕಾಲೇಜಿನಲ್ಲಿ 'ಭಾರತ್ ಮಾತಾ ಪೂಜನ' ; ತನಗೇನು ಮಾಹಿತಿ ಇಲ್ಲ ಎಂದ ಪ್ರಾಂಶುಪಾಲರು, ವಿವಾದಕ್ಕೆ ತುಪ್ಪ ಸುರಿದ ಕ್ಯಾಂಪಸ್ ಫ್ರಂಟ್ ! 

10-08-22 10:35 pm       Mangalore Correspondent   ಕರಾವಳಿ

ಹಂಪನಕಟ್ಟೆ ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಿನಲ್ಲಿ ವಿದ್ಯಾರ್ಥಿ ಘಟಕದ ವತಿಯಿಂದ ಹಮ್ಮಿಕೊಂಡಿರುವ ‘ಭಾರತ ಮಾತಾ ಪೂಜನಾ’ ಕಾರ್ಯಕ್ರಮದ ಬಗ್ಗೆ ತನಗೇನು ಮಾಹಿತಿ ಇಲ್ಲ.

ಮಂಗಳೂರು, ಆ.10:  ಹಂಪನಕಟ್ಟೆ ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಿನಲ್ಲಿ ವಿದ್ಯಾರ್ಥಿ ಘಟಕದ ವತಿಯಿಂದ ಹಮ್ಮಿಕೊಂಡಿರುವ ‘ಭಾರತ ಮಾತಾ ಪೂಜನಾ’ ಕಾರ್ಯಕ್ರಮದ ಬಗ್ಗೆ ತನಗೇನು ಮಾಹಿತಿ ಇಲ್ಲ. ಅಂತಹ ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲೆ ಅನುಸೂಯ ರೈ ತಿಳಿಸಿದ್ದಾರೆ.‌

ಆ.11ರಂದು ಕಾಲೇಜಿನ ಆಡಳಿತ ಮಂಡಳಿ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಕಾರ್ಯಕ್ರಮ ನಡೆಸುವ ಬಗ್ಗೆ ಯಾರೂ ತನ್ನನ್ನು ಅಥವಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿಲ್ಲ ಎಂದವರು ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದಾರೆ. ಕಾಲೇಜಿನ ವಿದ್ಯಾರ್ಥಿ ಸಂಘದ ವತಿಯಿಂದ ‘ಭಾರತ ಮಾತಾ ಪೂಜನಾ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿದಾಡುತ್ತಿತ್ತು. ಈ ಕ್ಯಾಂಪಸ್ ಫ್ರಂಟ್, ಎಸ್ಎಫ್ಐ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ಕ್ಯಾಂಪಸ್ ಫ್ರಂಟ್ ಘಟಕದ ಪ್ರಮುಖರು ಜಿಲ್ಲಾಧಿಕಾರಿ ಭೇಟಿಯಾಗಿ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದೆಂದು ದೂರು ನೀಡಿದ್ದರು.

ಎಬಿವಿಪಿ ವಿದ್ಯಾರ್ಥಿ ಘಟಕದ ವತಿಯಿಂದ ಭಾರತ್ ಮಾತಾ ಪೂಜನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಬಗ್ಗೆ ಜಾಲತಾಣದಲ್ಲಿ ಪೋಸ್ಟ್ ಕೂಡ ವೈರಲ್ ಆಗಿತ್ತು.‌ ಆದರೆ ಇತ್ತೀಚೆಗೆ ಹಿಜಾಬ್ ಕುರಿತ ತೀರ್ಪು ಸಂದರ್ಭದಲ್ಲಿ ಯಾವುದೇ ಧಾರ್ಮಿಕ ಸಂಕೇತಗಳನ್ನು ಧರಿಸಲು ಅವಕಾಶ ಇಲ್ಲ ಎಂದು ಹೇಳಲಾಗಿತ್ತು. ಅದರಂತೆ, ಈಗ ಕೇಸರಿ ಧ್ವಜ ಇಟ್ಟು ಭಾರತ್ ಮಾತೆಯನ್ನು ಸರಕಾರಿ ಕಾಲೇಜಿನಲ್ಲಿ ಪೂಜಿಸಲು ಹೇಗೆ ಸಾಧ್ಯ ಎಂದು ಕ್ಯಾಂಪಸ್ ಫ್ರಂಟ್ ಸಂಘಟನೆ ನಾಯಕರು ಪ್ರಶ್ನೆ ಮಾಡಿದ್ದರು. ಇತ್ತೀಚೆಗಷ್ಟೇ ಹಂಪನಕಟ್ಟೆ ಕಾಲೇಜಿನಲ್ಲಿ ಹಿಜಾಬ್ ವಿವಾದ ಕಾಣಿಸಿಕೊಂಡಿದ್ದಲ್ಲದೆ, ಆರು ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧಾರಣೆಗೆ ಪಟ್ಟು ಹಿಡಿದಿದ್ದು ಚರ್ಚೆಗೆ ಕಾರಣವಾಗಿತ್ತು.

Mangalore Saffron flag on poster for Bharat mata pooja at Mangalore University sparks controversy. A row has erupted over a poster announcing a pooja for ‘Bharat Mata’ at Mangalore University in Karnataka, with the Campus Front of India (CFI) and Social Democratic Party of India (SDPI) questioning the use depiction of Bharat Mata holding up a saffron flag with saffron-coloured ‘Akhand Bharat’ map in the background. The poster, circulated by the student union of Mangalore University, states that a ‘Bharat Mata Pooja’ will be organised on August 11, to ignite the spirit of nationalism.