ಸಮುದ್ರ ಮಧ್ಯೆ ಮೀನುಗಾರಿಕೆ ಬೋಟ್ ಮುಳುಗಡೆ ; ಹತ್ತು ಮಂದಿ ಕಾರ್ಮಿಕರ ರಕ್ಷಣೆ

07-08-22 08:59 pm       Mangalore Correspondent   ಕರಾವಳಿ

ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮಂಗಳೂರಿನಿಂದ 20 ನಾಟಿಕಲ್ ಮೈಲು ದೂರದಲ್ಲಿ ಸಮುದ್ರ ಮಧ್ಯೆ ಬಿರುಗಾಳಿಗೆ ಸಿಲುಕಿ ಮುಳುಗಡೆಯಾಗಿದೆ.

ಮಂಗಳೂರು, ಆಗಸ್ಟ್ 7: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮಂಗಳೂರಿನಿಂದ 20 ನಾಟಿಕಲ್ ಮೈಲು ದೂರದಲ್ಲಿ ಸಮುದ್ರ ಮಧ್ಯೆ ಬಿರುಗಾಳಿಗೆ ಸಿಲುಕಿ ಮುಳುಗಡೆಯಾಗಿದೆ.

ಕಳೆದ ಎರಡು ದಿನಗಳಿಂದ ಕರಾವಳಿಯಲ್ಲಿ ಮಳೆಯೊಂದಿಗೆ ಗಾಳಿ ಬೀಸುತ್ತಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಆದರೆ, ಎರಡು ತಿಂಗಳ ಮೀನುಗಾರಿಕೆ ರಜೆ ಮುಗಿಸಿ ಆಗಸ್ಟ್ ಮೊದಲ ವಾರದಲ್ಲಿ ಮೀನುಗಾರಿಕೆ ತೆರಳುವುದು ವಾಡಿಕೆ. ಅದರಂತೆ, ಕಾರ್ಮಿಕರ ಜೊತೆಗೆ ನಾಲ್ಕು ದಿನಗಳ ಮೊದಲೇ ಬೋಟ್ ಸಮುದ್ರಕ್ಕೆ ತೆರಳಿತ್ತು. ಅಂದಾಜು ನೂರು ಕಿಮೀ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗಲೇ ಅಲೆಗಳ ಭಾರೀ ಹೊಡೆತಕ್ಕೆ ಸಿಲುಕಿ ಬೋಟ್ ಒಳಗೆ ನೀರು ನುಗ್ಗಿದ್ದು, ಅವಘಡಕ್ಕೀಡಾಗಿದೆ.

ಬೋಟಿನಲ್ಲಿದ್ದ ಹತ್ತು ಮಂದಿ ಮೀನುಗಾರರು ಜೊತೆಗಿದ್ದ ಬೇರೊಂದು ಬೋಟಿನ ಮೂಲಕ ಪಾರಾಗಿದ್ದಾರೆ. ಮುಳುಗಡೆಯಾದ ಬೋಟ್ ಮಂಗಳೂರಿನ ಉರ್ವಾ ನಿವಾಸಿ ಕೃಷ್ಣ ಕುಮಾರ್ ಎಂಬವರಿಗೆ ಸೇರಿದ್ದಾಗಿದೆ. ದುರಂತದಿಂದಾಗಿ ಬೋಟ್ ಸೇರಿದಂತೆ ಅದರಲ್ಲಿದ್ದ ಮೀನು, ಇನ್ನಿತರ ಸಾಮಗ್ರಿಗಳೆಲ್ಲವೂ ಸಮುದ್ರ ಪಾಲಾಗಿದ್ದು, ಭಾರೀ ನಷ್ಟವಾಗಿದೆ.

A fishing boat capsized 20 nautical miles away from the Panambur sea shore here on Sunday, August 7.