ಪ್ರೀತಿಸಿ ಮದುವೆಯಾಗಿದ್ದ ಜೋಡಿ ನಾಪತ್ತೆ ; ಮೊಬೈಲ್ ಖರೀದಿಗೆಂದು ಮನೆಯಿಂದ ತೆರಳಿದ್ದರು ! 

07-08-22 01:50 pm       Udupi Correspondent   ಕರಾವಳಿ

ಎರಡೂವರೆ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿಯೊಂದು ದಿಢೀರ್ ನಾಪತ್ತೆಯಾಗಿದ್ದು ಪಡುಬಿದ್ರಿ ಠಾಣೆಯಲ್ಲಿ ದಂಪತಿ ನಾಪತ್ತೆ ಬಗ್ಗೆ ದೂರು ದಾಖಲಾಗಿದೆ. 

ಉಡುಪಿ, ಆಗಸ್ಟ್ 7 : ಎರಡೂವರೆ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿಯೊಂದು ದಿಢೀರ್ ನಾಪತ್ತೆಯಾಗಿದ್ದು ಪಡುಬಿದ್ರಿ ಠಾಣೆಯಲ್ಲಿ ದಂಪತಿ ನಾಪತ್ತೆ ಬಗ್ಗೆ ದೂರು ದಾಖಲಾಗಿದೆ. 

ನಂದಿಕೂರು ಅಡ್ವೆ ನಿವಾಸಿಗಳಾದ ಶಿಫಾಶೇಖ್‌ (25) ಹಾಗೂ ಆಕೆಯ ಪತಿ ರಿಯಾಜ್‌ (28) ನಾಪತ್ತೆಯಾದವರು. ಆಗಸ್ಟ್ 1ರಂದು ಉಡುಪಿಗೆ ಮೊಬೈಲ್‌ ಖರೀದಿಗೆಂದು ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

Missing Persons Alerts for Fyzabad teen and Chaguanas man | CNC3

ರಿಯಾಜ್‌ ಮಣಿಪಾಲದ ಮೊಬೈಲ್‌ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದರು. ಶಿಫಾ ಶೇಖ್‌ ತಂದೆ-ತಾಯಿ ಮದುವೆಗೆ ಮೊದಲೇ ತೀರಿಕೊಂಡಿದ್ದರು. ಆಗ ಬಿಎಎಂಎಸ್‌ ಅಂತಿಮ ವರ್ಷದಲ್ಲಿ ಕಲಿಯುತ್ತಿದ್ದ ಶಿಫಾ ತನ್ನ ಶಿಕ್ಷಣ ಮೊಟಕುಗೊಳಿಸಿ ಪ್ರಿಯಕರ ರಿಯಾಜ್‌ ಅವರನ್ನು ವಿವಾಹವಾಗಿದ್ದರು. ಇತ್ತೀಚೆಗಷ್ಟೇ ಶಿವಮೊಗ್ಗಕ್ಕೆ ಸಂಬಂಧಿಕರ ಮನೆಗೆ ಹೋಗಿದ್ದಾಗ ಎರಡೂವರೆ ತಿಂಗಳ ಅವರ ಮಗುವೂ ತೀರಿಕೊಂಡಿತ್ತು. ಆನಂತರ, ನಂದಿಕೂರಿನ ಮನೆಯಲ್ಲೇ ಇದ್ದರು. 

ಈಗ ರಿಯಾಜ್‌ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದು, ಶಿಫಾ ಮೊಬೈಲನ್ನು ಮನೆಯಿಂದ ತೆಗೆದುಕೊಂಡು ಹೋಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ದಂಪತಿ ಜೊತೆಯಾಗಿ ನಾಪತ್ತೆಯಾದ ಬಗ್ಗೆ ಸಂಶಯ ಉಂಟಾಗಿದ್ದು ಎಲ್ಲಿ ಹೋಗಿದ್ದಾರೆ ಎನ್ನುವ ಬಗ್ಗೆ ಸಂಬಂಧಿಕರಿಗೆ ಕುತೂಹಲ ಉಂಟಾಗಿದೆ.

A couple, who married after being in a relationship for two-and-half years, has gone missing since August 1. A case in this connection is filed in Padubidri police station. Shifa Sheikh (25) and Riyaz (28) went missing after they left their house at Nandikoor-Adve saying they were going to Udupi to buy a mobile phone.