ಬ್ರೇಕಿಂಗ್ ನ್ಯೂಸ್
06-08-22 06:01 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 6: ಅತ್ತ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪ್ರಕರಣವನ್ನು ರಾಜ್ಯ ಸರಕಾರ ಎನ್ಐಎ ತನಿಖೆಗೆ ಒಪ್ಪಿಸಿದ್ದರೆ, ಇತ್ತ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತ್ರ ವ್ಯತಿರಿಕ್ತ ಹೇಳಿಕೆ ಕೊಟ್ಟಿದ್ದಾರೆ. ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಯಾವುದೇ ಕೇರಳ ಲಿಂಕ್ ಇಲ್ಲ, ಸ್ಥಳೀಯರೇ ಮಾಡಿದ್ದಾರೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಪ್ರವೀಣ್ ಹತ್ಯೆ ಬೆನ್ನಲ್ಲೇ ಪ್ರಕರಣದಲ್ಲಿ ಕೇರಳ ಲಿಂಕ್ ಇದೆಯೆಂದು ಹೇಳಿ ರಾಜ್ಯದ ನಾಯಕರು ಕೇಂದ್ರ ಸರಕಾರದತ್ತ ಮುಗಿ ಬಿದ್ದಿದ್ದರು. ಕೇರಳದ ಪಾತಕಿಗಳೇ ಬಂದು ಈ ಕೃತ್ಯ ಎಸಗಿದ್ದಾರೆ, ಹಾಗಾಗಿ ಎನ್ಐಎ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹ ಮಾಡಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯಂತೂ ಹತ್ಯೆಯಾದ ಬೆನ್ನಲ್ಲೇ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ಎನ್ಐಎ ತನಿಖೆ ನಡೆಸಲು ಕೋರಿದ್ದರು. ಆನಂತರ ಅಮಿತ್ ಷಾ ಅವರನ್ನೇ ಭೇಟಿಯಾಗಿ ಪ್ರಕರಣದಲ್ಲಿ ಕೇರಳ ಲಿಂಕ್ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಲ್ಲದೆ, ಕೂಡಲೇ ಎನ್ಐಎ ತನಿಖೆ ನಡೆಸುವಂತೆ ಶೋಭಾ ಕೋರಿದ್ದರು. ಇದರ ಬೆನ್ನಲ್ಲೇ ಅಮಿತ್ ಷಾ ಪ್ರಕರಣದ ತನಿಖೆಯನ್ನು ಎನ್ಐಎಗೆ ಒಪ್ಪಿಸಿ ಗೃಹ ಸಚಿವಾಲಯದಿಂದ ಆದೇಶ ಮಾಡಿದ್ದರು.

ಇದಕ್ಕೂ ಮೊದಲೇ ಅಮಿತ್ ಷಾ ಸೂಚನೆಯಂತೆ ಎನ್ಐಎ ಅಧಿಕಾರಿಗಳು ಪುತ್ತೂರಿಗೆ ಬಂದು ತನಿಖೆಯನ್ನೂ ಆರಂಭಿಸಿದ್ದಾರೆ. ಆದರೆ ಇದರ ನಡುವೆಯೇ, ರಾಜ್ಯದ ಗೃಹ ಸಚಿವರು ಮಾತ್ರ ಸ್ಥಳೀಯರೇ ಹಂತಕರು, ಕೇರಳದ ಲಿಂಕ್ ಇಲ್ಲ ಎನ್ನುವ ಮೂಲಕ ಇಡೀ ಪ್ರಕರಣದಲ್ಲಿ ಗೊಂದಲ ಮೂಡಿಸಿದ್ದಾರೆ. ಸ್ಥಳೀಯರೇ ಹತ್ಯೆ ನಡೆಸಿದ್ದಾರೆ. ಯಾರು ಅನ್ನೋದು ಗೊತ್ತಾಗಿದೆ. ಯಾವ ಸಂಘಟನೆಯವರೆಂದು ಪತ್ತೆ ಮಾಡುತ್ತೇವೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇಷ್ಟಕ್ಕೂ ಸ್ಥಳೀಯರೇ ಹಂತಕರು ಆಗಿದ್ದರೆ, ತನಿಖೆಯನ್ನು ಎನ್ಐಎಗೆ ಒಪ್ಪಿಸುವ ಅಗತ್ಯ ಏನಿದೆ ಎನ್ನುವ ಪ್ರಶ್ನೆಯೂ ಮೂಡಿದೆ. ಸ್ಥಳೀಯ ಹಂತಕರನ್ನು ಹಿಡಿಯಲು ಕರ್ನಾಟಕ ಪೊಲೀಸ್ ಇಲಾಖೆಯಿಂದ ಸಾಧ್ಯವಿಲ್ಲವೇ? ಸ್ಥಳೀಯ ಪೊಲೀಸರಿಗೆ ತಿಳಿದಿರಲೇಬೇಕಾದ ಮತ್ತು ಈಗ ಅಡಗಿ ಕುಳಿತಿರುವ ಹಂತಕರನ್ನು ಹಿಡಿಯಲು ದೂರದ ಎನ್ಐಎ ಅಧಿಕಾರಿಗಳನ್ನು ಕರೆತರಬೇಕೇ..? ಎನ್ನುವ ಪ್ರಶ್ನೆ ಮೂಡಿದೆ.

ಕೇರಳದ ಹಂತಕರು ಅನ್ನುವ ಸಂಶಯ ಮೂಡಲು ಕಾರಣವಾಗಿದ್ದುದು ಜುಲೈ 26ರ ರಾತ್ರಿ ಪ್ರವೀಣ್ ಹತ್ಯೆಗೆ ಬಳಸಿದ್ದ ಬೈಕು. ಅದರಲ್ಲಿ ಕೇರಳ ನೋಂದಣಿಯ ನಂಬರ್ ಪ್ಲೇಟ್ ಇತ್ತು ಎನ್ನುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಕೃತ್ಯ ನಡೆದ ಎರಡೇ ದಿನದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಅವರಿಬ್ಬರು ನೀಡಿದ ಮಾಹಿತಿ ಆಧರಿಸಿ, ವಾರದ ನಂತರ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಈವರೆಗೂ ಕೃತ್ಯಕ್ಕೆ ಬಳಸಿರುವ ಬೈಕನ್ನು ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಆಗಸ್ಟ್ 6ಕ್ಕೆ ಪ್ರವೀಣ್ ಹತ್ಯೆ ನಡೆದು 11 ದಿನಗಳಾಗಿದ್ದು, ಪೊಲೀಸರ ಸಾಧನೆ ನೋಡಿದರೆ ಹೇಳಿಕೊಳ್ಳುವ ಮಟ್ಟಿನದ್ದಿಲ್ಲ. ಎರಡು ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಪ್ರಮುಖ ಆರೋಪಿಗಳು ಯಾರೆಂದು ಗೊತ್ತಾಗಿದೆ, ಕರ್ನಾಟಕ ಪೊಲೀಸರೇ ಬಂಧಿಸುತ್ತಾರೆ ಎಂದಿದ್ದರು.
ಎಡಿಜಿಪಿ ಮಂಗಳೂರಿನಿಂದ ಬೆಂಗಳೂರಿಗೆ ಹಿಂದಿರುಗಿದ ಬೆನ್ನಲ್ಲೇ ಆರಗ ಜ್ಞಾನೇಂದ್ರ ಅವರು ಬೆಂಗಳೂರಿನಲ್ಲಿ ಕುಳಿತು ಸ್ಥಳೀಯರೇ ಹಂತಕರು ಅನ್ನುವ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಆಮೂಲಕ ಈವರೆಗೂ ಇದ್ದ ಅನುಮಾನ, ಸಂಶಯಗಳನ್ನೆಲ್ಲ ಅಳಿಸಿ ಹಾಕಿದ್ದಾರೆ. ಎನ್ಐಎ ತನಿಖೆಯ ಆಯಾಮಗಳ ಬಗ್ಗೆಯೂ ಸಂಶಯದ ಗೆರೆ ಎಳೆದಿದ್ದಾರೆ. ಆರೋಪಿಗಳ ಬಂಧನ ಆಗೋ ಮೊದಲೇ ಪೊಲೀಸ್ ಇಲಾಖೆಯ ಮುಖ್ಯಸ್ಥರಾದವರು ಈ ರೀತಿ ಹೇಳಿಕೆ ಕೊಟ್ಟು ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆಯೇ ಅಥವಾ ಕಾರ್ಯಕರ್ತರ ಆಕ್ರೋಶ ಶಮನಕ್ಕೆ ಯತ್ನಿಸುತ್ತಿದ್ದಾರೆಯೇ ಎನ್ನುವ ಅನುಮಾನ ಮೂಡಿಸಿದೆ.

ಎನ್ಐಎ ಸ್ಥಾಪನೆ ಹಿಂದಿನ ಉದ್ದೇಶ ಮರೆತರೇ ?
ಎನ್ಐಎ ಅನ್ನೋದು ದೇಶದ ಆಂತರಿಕ ಭದ್ರತೆಗೆ ಸವಾಲಾಗಬಲ್ಲ, ಅತ್ಯಂತ ಮಹತ್ವದ ಪ್ರಕರಣಗಳನ್ನು ಮಾತ್ರ ತನಿಖೆ ನಡೆಸುವ ಉನ್ನತ ಮಟ್ಟದ ಏಜನ್ಸಿ. ಹಿಂದೆ ಸಿಬಿಐ ಈ ರೀತಿಯ ತನಿಖೆಗಳನ್ನು ನಡೆಸುತ್ತಿದ್ದರೆ, 2008ರಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಎಂದು ಪ್ರತ್ಯೇಕ ತನಿಖಾ ತಂಡವನ್ನು ರಚಿಸಲಾಗಿತ್ತು. ಭಯೋತ್ಪಾದಕ ಸಂಘಟನೆಗಳು, ಅವುಗಳ ವಿಧ್ವಂಸಕ ಕೃತ್ಯಗಳು, ಅಂತಾರಾಜ್ಯ ಲಿಂಕ್ ಇರುವ ಪ್ರಕರಣಗಳನ್ನು ಎನ್ಐಎ ತನಿಖೆಗೆ ವಹಿಸಲಾಗುತ್ತದೆ. ಸಾಮಾನ್ಯ ಕೊಲೆ ತನಿಖೆಗಳನ್ನು ಮಾಡುವುದು ಎನ್ಐಎ ಕೆಲಸ ಆಗಿರುವುದಿಲ್ಲ. ಅದಕ್ಕಾಗಿ ಎನ್ಐಎ ನೇಮಕಾತಿಯೂ ಅಷ್ಟೇ ವಿಶೇಷವಾಗಿರುತ್ತದೆ. ಐಪಿಎಸ್ ದರ್ಜೆಯ ಅಧಿಕಾರಿಗಳನ್ನು ಕೇವಲ ಎರಡು- ಮೂರು ವರ್ಷಗಳಿಗೆ ನಿಯೋಜನೆ ಮೇರೆಗೆ ಮಾತ್ರ ತೆಗೆದುಕೊಳ್ಳಲಾಗುತ್ತದೆ. ದಕ್ಷರಾಗಿ ಕೆಲಸ ಮಾಡಬೇಕು, ಅಧಿಕಾರಸ್ಥರಿಂದ ಪ್ರಭಾವಕ್ಕೆ ಒಳಗಾಗಬಾರದು ಎನ್ನುವ ಕಾರಣಕ್ಕೆ ಅಲ್ಲಿ ಯಾವುದೇ ಅಧಿಕಾರಿಯನ್ನು ಪರ್ಮನೆಂಟ್ ಆಗಿ ಇಟ್ಟುಕೊಳ್ಳುವುದಿಲ್ಲ. ಸ್ಥಳೀಯವಾಗಿ ತನಿಖೆ ಮಾಡಬಲ್ಲ ಕೇಸುಗಳನ್ನು ಆ ತಂಡಕ್ಕೆ ಕೊಟ್ಟರೆ, ಚುರುಕಿನ ಅಧಿಕಾರಿಗಳನ್ನು ಬಿಲ ತೋಡುವ ಕೆಲಸಕ್ಕೆ ವಹಿಸಿದಂತಾಗುತ್ತದೆ ಅನ್ನೋದನ್ನು ಅಧಿಕಾರಸ್ಥರು ತಿಳಿದಿರಬೇಕು.
Karnataka Home Minister Araga Jnanendra said on Saturday that the killers of BJP youth worker Praveen Nettaru were locals and not from Kerala. Jnanendra’s statement follows Chief Minister Basavaraj Bommai’s decision to hand over the case to the National Investigation Agency (NIA), citing an inter-state link.Jnanendra said in Shivamogga that Nettaru’s killers are from Dakshina Kannada district and will be arrested in two or three days.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 09:10 pm
HK News Desk
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
14-11-25 11:01 pm
Mangalore Correspondent
Kumpala, Dog, Crime, Mangalore: ಬೀದಿ ನಾಯಿಗಳ ದ...
14-11-25 10:10 pm
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ; ಮಕ್ಕ...
14-11-25 09:03 pm
ಡಿಸಿಸಿ ಬ್ಯಾಂಕ್ ಸಾಲಕ್ಕೆ ಜಾಮೀನು ನಿಂತು ಚೆಕ್ ನೀಡಿ...
14-11-25 03:34 pm
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm