ಫಾಜಿಲ್ ಹಂತಕರನ್ನು ಹೀರೋಗಳೆಂದು ಬಿಂಬಿಸಿ ಪೋಸ್ಟ್ ; ಪ್ರಕರಣ ದಾಖಲು 

04-08-22 08:46 pm       Udupi Correspondent   ಕರಾವಳಿ

ಸುರತ್ಕಲ್ ನಲ್ಲಿ ಹತ್ಯೆಯಾದ ಫಾಜಿಲ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರೋಪಿಗಳನ್ನು ಹೀರೋಗಳೆಂದು ಬಿಂಬಿಸಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಯುವಕನ ವಿರುದ್ಧ ಉಡುಪಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

ಉಡುಪಿ, ಆಗಸ್ಟ್ 4 : ಸುರತ್ಕಲ್ ನಲ್ಲಿ ಹತ್ಯೆಯಾದ ಫಾಜಿಲ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರೋಪಿಗಳನ್ನು ಹೀರೋಗಳೆಂದು ಬಿಂಬಿಸಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಯುವಕನ ವಿರುದ್ಧ ಉಡುಪಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

ಕೋಮು ಸಾಮರಸ್ಯ ಕದಡುವ ರೀತಿ ಪೋಸ್ಟ್ ಮಾಡಿದ್ದಕ್ಕಾಗಿ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿದ್ದಾರೆ. ಲಕ್ಷ್ಮಿಕಾಂತ್ ಬೈಂದೂರು ಎಂಬಾತನ ವಿರುದ್ಧ ಕೇಸು ದಾಖಲಾಗಿದೆ. ‌

ಹಂತಕರನ್ನು ಹೀರೋಗಳೆಂದು ಬಿಂಬಿಸಿ ಪೋಸ್ಟ್ ಮಾಡಿದ್ದಲ್ಲದೆ, ಪ್ರವೀಣ್ ಕೊಲೆಗೆ ಪ್ರತೀಕಾರ. ಆದರೆ ಒಬ್ಬ ಫಾಜಿಲ್ ಪ್ರವೀಣ್ ಗೆ ಸಮವಲ್ಲ. ಇನ್ನೂ ಒಂದಷ್ಟು ಬೇಕು ಎಂದು ಬರೆದುಕೊಂಡಿದ್ದ. ಒಂದು ಕೋಮಿನ ಜನರನ್ನು ಪ್ರಚೋದಿಸುವ ರೀತಿ ಪೋಸ್ಟ್ ಹಾಕಿದ್ದಕ್ಕಾಗಿ ಪೊಲೀಸರು ಕೇಸು ದಾಖಲಿಸಿದ್ದಾರೆ. ‌ಉಡುಪಿ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

A case is filed on a man in CEN police station of the city on the accusation of posting communally inciting writing on social media. Laxmikantha Byndoor is the person agaisnt whom the case is booked. He has glorified the assailants of Fazil as heroes on his Facebook account.