ಎಡಿಜಿಪಿ ಮತ್ತೆ ಮಂಗಳೂರಿಗೆ ; ಸುರತ್ಕಲ್, ಕಾಟಿಪಳ್ಳ ಪ್ರದೇಶಕ್ಕೆ ಭೇಟಿ, ದ.ಕ., ಉಡುಪಿಯಲ್ಲಿ ಅಲರ್ಟ್ ಇರಲು ಪೊಲೀಸರಿಗೆ ಸೂಚನೆ

04-08-22 01:16 pm       Mangalore Correspondent   ಕರಾವಳಿ

ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮತ್ತೆ ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರಿನಲ್ಲಿ ಅತಿ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲ್ಪಟ್ಟಿರುವ ಸುರತ್ಕಲ್ ಪೇಟೆ ಮತ್ತು ಕಾಟಿಪಳ್ಳ ಪ್ರದೇಶಗಳಿಗೆ ತೆರಳಿ ಅಲ್ಲಿ ಸಾರ್ವಜನಿಕರನ್ನು ಮಾತನಾಡಿಸಿದ್ದಾರೆ.

ಮಂಗಳೂರು, ಆಗಸ್ಟ್ 4: ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮತ್ತೆ ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರಿನಲ್ಲಿ ಅತಿ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲ್ಪಟ್ಟಿರುವ ಸುರತ್ಕಲ್ ಪೇಟೆ ಮತ್ತು ಕಾಟಿಪಳ್ಳ ಪ್ರದೇಶಗಳಿಗೆ ತೆರಳಿ ಅಲ್ಲಿ ಸಾರ್ವಜನಿಕರನ್ನು ಮಾತನಾಡಿಸಿದ್ದಾರೆ.

ಅಂಗಡಿಗಳು, ವ್ಯಾಪಾರ ಸಂಕೀರ್ಣಗಳಿಗೂ ತೆರಳಿ ಸಾಮಾನ್ಯ ಜನರ ಜೊತೆ ಸಂವಹನ ನಡೆಸಿದ್ದಾರೆ. ಅಲ್ಲದೆ, ಅಲ್ಲಿ ನಿಯೋಜನೆಗೊಂಡ ಪೊಲೀಸರ ಜೊತೆಗೂ ಮಾತುಕತೆ ನಡೆಸಿದ್ದಾರೆ. ಪೊಲೀಸರನ್ನು ಅಲರ್ಟ್ ಇರುವಂತೆ ಸೂಚನೆ ನೀಡಿದ್ದಾರೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಿದ್ದರೂ, ಅಹಿತಕರ ಘಟನೆಗಳಿಗೆ ಪ್ರಯತ್ನ ನಡೆಯುತ್ತಿದೆ ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಒಂದೇ ವಾರದಲ್ಲಿ ಎರಡನೇ ಬಾರಿಗೆ ಎಡಿಜಿಪಿ ಭೇಟಿ ನೀಡಿದ್ದಾರೆ.

Dakshina Kannada: Fazil, Nettar were random targets, police probe reveals

ಇದಲ್ಲದೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲೂ ಪೊಲೀಸರನ್ನು ಅಲರ್ಟ್ ಇರುವಂತೆ ಎಡಿಜಿಪಿ ಸೂಚನೆ ನೀಡಿದ್ದಾರೆ. ಇಂದು ಮಂಗಳೂರಿನ ಕಮಿಷನರೇಟ್ ಕಚೇರಿಯಲ್ಲಿ ಎರಡು ಜಿಲ್ಲೆಗಳ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಎಡಿಜಿಪಿ ಸಭೆ ನಡೆಸಿದ್ದು, ಯಾವುದೇ ಕಾರಣಕ್ಕೂ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂಬ ಸೂಚನೆ ನೀಡಿದ್ದಾರೆ. ಪ್ರವೀಣ್ ನೆಟ್ಟಾರು ಮತ್ತು ಫಾಜಿಲ್ ಕೊಲೆ ಪ್ರಕರಣದ ಬಗ್ಗೆಯೂ ತನಿಖಾಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಇದರ ನಡುವೆಯೇ, ಎಡಿಜಿಪಿ ಅಲೋಕ್ ಕುಮಾರ್ ಬೆಳಗ್ಗೆ ದಿಢೀರ್ ಆಗಿ ಮಂಗಳೂರು ಜೈಲಿಗೂ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಎರಡೂ ಪ್ರಕರಣದ ಆರೋಪಿಗಳನ್ನು ಮಂಗಳೂರಿನ ಜೈಲಿನಲ್ಲಿ ಇರಿಸಲಾಗಿದ್ದು, ಅವರ ಬಗ್ಗೆ ನಿಗಾ ಇರಿಸುವಂತೆ ಜೈಲಧಿಕಾರಿಗಳಿಗೂ ಸೂಚನೆ ನೀಡಿದ್ದಾರೆ.

Additional director general of police (ADGP) Law and Order, Alok Kumar visited several areas of Surathkal and Bajpe police station limits.During his visit, he also interacted with the police personnel and general public. He gathered details about the situation from the senior officials. Later, the ADGP held a meeting with the senior police officials to review the situation of law and order and preparedness for restoration of normalcy under Mangaluru city police commissionerate and Dakshina Kannada police limits.