ದಕ್ಷಿಣ ಕನ್ನಡ ; ಮತ್ತೆರಡು ದಿನ ರಾತ್ರಿ ನಿರ್ಬಂಧ, ಮದ್ಯದಂಗಡಿ ನಿಷೇಧ ಮುಂದುವರಿಕೆ 

02-08-22 08:20 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆರಡು ದಿನಗಳ ಕಾಲ ರಾತ್ರಿ ನಿರ್ಬಂಧ ಮುಂದುವರಿಸಲಾಗಿದೆ. ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ರಾತ್ರಿ ನಿರ್ಬಂಧ ವಿಸ್ತರಣೆ ಮಾಡುವಂತೆ ಪೊಲೀಸರು ಕೋರಿದ್ದರು. 

ಮಂಗಳೂರು, ಆಗಸ್ಟ್ 2 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆರಡು ದಿನಗಳ ಕಾಲ ರಾತ್ರಿ ನಿರ್ಬಂಧ ಮುಂದುವರಿಸಲಾಗಿದೆ. ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ರಾತ್ರಿ ನಿರ್ಬಂಧ ವಿಸ್ತರಣೆ ಮಾಡುವಂತೆ ಪೊಲೀಸರು ಕೋರಿದ್ದರು. 

ಆ ಕಾರಣದಿಂದ ಸಂಜೆ 6ರಿಂದ ಬೆಳಗ್ಗೆ 6ರ ವರೆಗೆ ಅಂಗಡಿ‌, ವ್ಯಾಪಾರ ಸಂಕೀರ್ಣ ಮುಚ್ಚುವ ಆದೇಶವನ್ನು ಮತ್ತೆರಡು ದಿನ ಅಂದರೆ ಆಗಸ್ಟ್ 3 ಮತ್ತು 4ರ ರಾತ್ರಿಗೆ ವಿಸ್ತರಣೆ ಮಾಡಲಾಗಿದೆ. ‌ಇದೇ ವೇಳೆ, ದ.ಕ. ಜಿಲ್ಲೆಯಲ್ಲಿ ಮದ್ಯದ ಅಂಗಡಿ ನಿಷೇಧ ಆದೇಶವನ್ನೂ ಮತ್ತೆರಡು ದಿನಕ್ಕೆ ವಿಸ್ತರಿಸಲಾಗಿದೆ. ಈಗಾಗಲೇ ಆ.6ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ವಿಧಿಸಿ ಆದೇಶ ಮಾಡಲಾಗಿದೆ. ಆ ಕಾರಣ ಯಾವುದೇ ಸಭೆ, ಸಮಾರಂಭ, ಪ್ರತಿಭಟನೆ ನಡೆಸುವಂತಿಲ್ಲ.

Night curfew to continue for the next two days in Mangalore orders Dc Rajendra Kumar after the request of Mangalore police.