ಸುಬ್ರಹ್ಮಣ್ಯ ; ಮನೆ ಮೇಲೆ ಗುಡ್ಡ ಕುಸಿದು ದುರಂತ ; ಇಬ್ಬರು ಮಕ್ಕಳು ಮಣ್ಣಿನಡಿಗೆ ! 

01-08-22 10:37 pm       Mangalore Correspondent   ಕರಾವಳಿ

ಸುಬ್ರಹ್ಮಣ್ಯ ಆಸುಪಾಸಿನಲ್ಲಿ ರಣಭೀಕರ ಮಳೆಯಾಗಿದ್ದು ಮನೆಯೊಂದರ ಮೇಲೆ ಗುಡ್ಡ ಕುಸಿದು ಬಿದ್ದು ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ಅಪಾಯಕ್ಕೀಡಾದ ಘಟನೆ ನಡೆದಿದೆ.

ಪುತ್ತೂರು, ಆಗಸ್ಟ್ 1 : ಸುಬ್ರಹ್ಮಣ್ಯ ಆಸುಪಾಸಿನಲ್ಲಿ ರಣಭೀಕರ ಮಳೆಯಾಗಿದ್ದು ಮನೆಯೊಂದರ ಮೇಲೆ ಗುಡ್ಡ ಕುಸಿದು ಬಿದ್ದು ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ಅಪಾಯಕ್ಕೀಡಾದ ಘಟನೆ ನಡೆದಿದೆ.

ಪರ್ವತಮುಖಿ ಎಂಬಲ್ಲಿ ಕುಶಾಲಪ್ಪ ಎಂಬವರ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದಿದ್ದು ಇಬ್ಬರು ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ. ಶ್ರುತಿ (11) ಹಾಗೂ ಗಾನ (6) ಮಣ್ಣಿನಡಿ ಬಿದ್ದಿದ್ದು ಸ್ಥಳಕ್ಕೆ ದೌಡಾಯಿಸಿರುವ ಪೊಲೀಸ್ ಇಲಾಖೆ ಹಾಗೂ ಇತರೇ ಅಧಿಕಾರಿಗಳು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. 

ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಭಾರೀ ಮಳೆ ಶುರುವಾಗಿತ್ತು. ನಿರಂತರ ಮಳೆಗೆ ಅನಾಹುತ ಉಂಟಾಗಿದ್ದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಲಾಡ್ಜ್ , ಹೊಟೇಲುಗಳಿಗೆಲ್ಲ ನೆರೆ ನೀರು ನುಗ್ಗಿದೆ. ಇದರಿಂದಾಗಿ ದೂರದಿಂದ ಬಂದಿರುವ ಭಕ್ತರು ಕಂಗೆಟ್ಟಿದ್ದಾರೆ.

Two children trapped after Landslide due to heavy rains at Subrahamanya.