ಕೊಲೆ ಕೃತ್ಯಗಳಿಗೆ ಒಂದಕ್ಕೊಂದು ಲಿಂಕ್ ಇದೆಯೇ ಎಂಬ ಬಗ್ಗೆ ತನಿಖೆ ; ಡಿಜಿಪಿ ಪ್ರವೀಣ್ ಸೂದ್ 

01-08-22 06:09 pm       Mangalore Correspondent   ಕರಾವಳಿ

ಶವಗಳಿಗೆ ಯಾವುದೇ ಜಾತಿ ಇರುವುದಿಲ್ಲ. ನಮಗೆ ಎಲ್ಲಾ ಸಾವುಗಳು ಕೂಡ ಒಂದೇ. ಮೂರು ಕೊಲೆ ಕೃತ್ಯಗಳಿಗೆ ಸಾಮ್ಯತೆ ಇದೆಯೇ, ಒಂದಕ್ಕೊಂದು ಲಿಂಕ್ ಇದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ. 

ಮಂಗಳೂರು, ಆಗಸ್ಟ್ 1: ಶವಗಳಿಗೆ ಯಾವುದೇ ಜಾತಿ ಇರುವುದಿಲ್ಲ. ನಮಗೆ ಎಲ್ಲಾ ಸಾವುಗಳು ಕೂಡ ಒಂದೇ. ಮೂರು ಕೊಲೆ ಕೃತ್ಯಗಳಿಗೆ ಸಾಮ್ಯತೆ ಇದೆಯೇ, ಒಂದಕ್ಕೊಂದು ಲಿಂಕ್ ಇದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ. 

ಸರಣಿ ಕೊಲೆ ಪ್ರಕರಣಗಳ ತನಿಖೆಗೆ ಚುರುಕು ಮುಟ್ಟಿಸುವ ಸಲುವಾಗಿ ಮಂಗಳೂರಿಗೆ ಆಗಮಿಸಿದ್ದ ಪ್ರವೀಣ್ ಸೂದ್, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿ ಘಟನೆಗಳು ನಡೆದಾಗ ಸಾರ್ವಜನಿಕರ ಸಹಕಾರ ಮುಖ್ಯವಾಗುತ್ತದೆ. ಘಟನೆಯನ್ನು ನೋಡಿದವರು ಆರೋಪಿಗಳ ಪರಿಚಯ ಇರುವವರು ಇಲಾಖೆ‌ ಜೊತೆಗೆ ಸಹಕರಿಸಬೇಕು. ಸಾರ್ವಜನಿಕರು ಇಲಾಖೆಗೆ ಸಹಕರಿಸಿದರೆ ಈ ರೀತಿಯ ಪ್ರಕರಣಗಳನ್ನು ಶೀಘ್ರದಲ್ಲಿ ಭೇದಿಸಬಹುದು ಎಂದು ಹೇಳಿದರು. 

Praveen Nettar Murder: Was BJP leader Praveen murdered on this Facebook  post supporting Kanhaiyalal? – praveen nettaru murder case bjym leader fb  post in support of kanhaiya lal

ಪ್ರವೀಣ್ ಹತ್ಯೆಯ ಆರೋಪಿಗಳಲ್ಲಿ ಪ್ರಮುಖರು ಸಿಕ್ಕಿಬಿದ್ದಿದ್ದಾರೆ. ಉಳಿದವರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ, ಎನ್ಐಎ  ಮೊದಲಾದ ಏಜೆನ್ಸಿಗಳು ತನಿಖೆಗೆ ಸಹಕರಿಸುತ್ತಿವೆ ಎಂದು ಹೇಳಿದ ಅವರು, ಮಸೂದ್ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಯಾಕಾಗಿ ಕೊಲೆ ಕೃತ್ಯ ನಡೆಸಿದ್ದಾರೆ ಎಂಬ ಬಗ್ಗೆ ಕಾರಣ ಪತ್ತೆ ಮಾಡಲಾಗುವುದು.‌ ಫಾಸಿಲ್ ಹತ್ಯೆಗೆ ಬಳಸಲಾದ ಕಾರು ವಶಪಡಿಸಿಕೊಂಡಿದ್ದೇವೆ. ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಈ ಮೂರು ಕೊಲೆಗಳ ಮಧ್ಯೆ ಲಿಂಕ್ ಇದೆಯೇ ಎನ್ನುವುದನ್ನು ಈ ಹಂತದಲ್ಲಿ ಹೇಳಲಾಗುವುದಿಲ್ಲ.‌ ಆ ಬಗ್ಗೆ ತನಿಖೆ ಆಗ್ತಾ ಇದೆ ಎಂದರು.‌

ಕೇರಳ ಗಡಿಭಾಗದಲ್ಲಿ ಚೆಕ್ ಪೋಸ್ಟ್ ಗಳನ್ನು ಈಗಾಗಲೇ ಬಿಗಿಗೊಳಿಸಲಾಗಿದೆ. ಹೊರ ರಾಜ್ಯದಿಂದ ಬಂದು ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಗಡಿಯಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ಡಿಜಿಪಿ ಮಾಹಿತಿ ನೀಡಿದರು.

We are trying to find the links with continuous killings in Mangaluru says DG Praveen Sood. DG who has come to Mangalore to conduct a review meeting speaking to media said that we are yet to nab the culprits and later then we can decide if Fazil murder was a murder for the revenge of Praveen in Bellare.