ಉಳ್ಳಾಲ ಕಡಲಲ್ಲಿ ಮುಳುಗಿದ ಸಿರಿಯನ್ ಹಡಗು ; 220 ಟನ್ ತೈಲ ಸೋರಿಕೆ ಭೀತಿ, ಸಮಸ್ಯೆ ಎದುರಿಸಲು ಜಿಲ್ಲಾಡಳಿತ ಸಿದ್ಧತೆ

25-06-22 09:20 pm       Mangalore Correspondent   ಕರಾವಳಿ

ನಗರ ಹೊರವಲಯದ ಉಳ್ಳಾಲದ ಬಟ್ಟಂಪಾಡಿ ಬಳಿಯ ಕಡಲ ತೀರದಲ್ಲಿ ಮುಳುಗಡೆಯಾಗಿರುವ ಸಿರಿಯಾ ದೇಶದ ಮೂಲದ ಕಾರ್ಗೋ ಹಡಗಿನಿಂದ ತೈಲ ಸೋರಿಕೆಯಾಗದಂತೆ ತಡೆಯಲು ತಜ್ಞರು ಮುಂದಾಗಿದ್ದಾರೆ.

ಮಂಗಳೂರು, ಜೂನ್ 25: ನಗರ ಹೊರವಲಯದ ಉಳ್ಳಾಲದ ಬಟ್ಟಂಪಾಡಿ ಬಳಿಯ ಕಡಲ ತೀರದಲ್ಲಿ ಮುಳುಗಡೆಯಾಗಿರುವ ಸಿರಿಯಾ ದೇಶದ ಮೂಲದ ಕಾರ್ಗೋ ಹಡಗಿನಿಂದ ತೈಲ ಸೋರಿಕೆಯಾಗದಂತೆ ತಡೆಯಲು ತಜ್ಞರು ಮುಂದಾಗಿದ್ದಾರೆ. ಇದಕ್ಕಾಗಿ ಮುಂಬೈನಿಂದ ತಜ್ಞರ ತಂಡ ಆಗಮಿಸಿದ್ದು, ಹಡಗಿನಲ್ಲಿರುವ 220 ಟನ್ ತೈಲವನ್ನು ಸುರಕ್ಷಿತವಾಗಿ ಹೊರ ತೆಗೆಯಲು ಚಿಂತನೆ ನಡೆದಿದೆ.

ಹಾಗಿದ್ದರೂ, ಹಡಗಿನಿಂದ ತೈಲ ಸೋರಿಕೆಯಾದಲ್ಲಿ ಅದರಿಂದ ತೀರ ಪ್ರದೇಶಕ್ಕೆ ಯಾವುದೇ ಅಪಾಯ ಆಗದಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪಡೆ ಮತ್ತು ಅಗ್ನಿಶಾಮಕ ದಳವನ್ನು ಸನ್ನದ್ಧ ಇರಿಸಲಾಗಿದೆ. ಒಂದ್ವೇಳೆ ತೈಲ ಟ್ಯಾಂಕ್ ಒಡೆದು ಆಯಿಲ್ ತೀರ ಪ್ರದೇಶಕ್ಕೆ ಬಂದಲ್ಲಿ ಅದರಿಂದ ಸಮಸ್ಯೆ ಎದುರಾಗದಂತೆ ಹೇಗೆ ಮುಂಜಾಗ್ರತೆ ವಹಿಸಬೇಕು ಎನ್ನುವ ಬಗ್ಗೆ ಉಳ್ಳಾಲ ಕಡಲ ತೀರದಲ್ಲಿ ಸಿಬಂದಿ ಶನಿವಾರ ಅಣಕು ಕಾರ್ಯಾಚರಣೆ ನಡೆಸಿದ್ದಾರೆ.

ಇದೇ ವೇಳೆ, ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಸ್ಥಳಕ್ಕೆ ಭೇಟಿ ನೀಡಿದ್ದು ಅಣಕು ಕಾರ್ಯಾಚರಣೆ ನಡೆಸಿದ ತಂಡದ ಪ್ರಮುಖರ ಜೊತೆ ಸಮಾಲೋಚನೆ ನಡೆಸಿದರು. ಕಡಲ ತೀರದಲ್ಲಿ ತೈಲ ಹರಡಿಕೊಂಡಲ್ಲಿ ಅದನ್ನು ಯಾವ ರೀತಿ ಸಮಸ್ಯೆಯಾಗದಂತೆ ಸಂಗ್ರಹ ಮಾಡಬೇಕು, ಜಿಟ್ಟು ಕಟ್ಟದಂತೆ ನೋಡಿಕೊಳ್ಳಬೇಕು ಎಂಬ ಬಗ್ಗೆ ತಜ್ಞರು ಸ್ಥಳದಲ್ಲಿ ಸಿಬಂದಿ ಮತ್ತು ಸ್ಥಳೀಯ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.

 

140 ಜನರ ತಂಡಕ್ಕೆ ತರಬೇತಿ

ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ, 16 ಮೆಟ್ರಿಕ್ ಟನ್ ಇಂಧನ ಮತ್ತು 60 ಮೆಟ್ರಿಕ್ ಟನ ಇಂಜಿನ್ ಆಯಿಲ್ ಇದೆ. ಡಿಜಿ ಶಿಪ್ಪಿಂಗ್ ಕಂಪನಿ ಮೂಲಕ ತೆರವು ಮಾಡಲು ಸಿದ್ಧತೆ ನಡೆಸಲಾಗಿದೆ. ಇದಕ್ಕೆ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಇನ್ನಿತರ ಸರಕಾರದ ಅಂಗಸಂಸ್ಥೆಗಳು ನೆರವು ನೀಡಲಿವೆ. ಸದ್ಯಕ್ಕೆ ತೈಲ ಸೋರಿಕೆಯಾದಲ್ಲಿ ಅದರಿಂದ ಪರಿಸರಕ್ಕೆ ತೊಂದರೆ ಎದುರಾಗದಂತೆ ಯಾವ ರೀತಿ ನಿರ್ವಹಣೆ ಮಾಡಬೇಕು ಎನ್ನುವ ಬಗ್ಗೆ ತಜ್ಞರಿಂದ ತರಬೇತಿ ನೀಡಲಾಗಿದೆ. ಕೋಸ್ಟ್ ಗಾರ್ಡ್, ಡಿಜಿ ಶಿಪ್ಪಿಂಗ್ ಏಜನ್ಸಿ, ಕಂದಾಯ ಇಲಾಖೆ, ಅಗ್ನಿಶಾಮಕ ದಳ ಹೀಗೆ ಹಲವು ವಿಭಾಗದ ಒಟ್ಟು 140 ಜನರಿಗೆ ತರಬೇತಿ ನೀಡಿದ್ದು, ಇದರ ಬಗ್ಗೆ ಅಣಕು ಕಾರ್ಯಾಚರಣೆಯನ್ನು ನಡೆಸಿ ಸಿದ್ಧತೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಪೋರ್ ಬಂದರಿನಿಂದ ಹಡಗು ಆಗಮನ  

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಯಂತ್ರವನ್ನು ಸನ್ನದ್ಧ ಇರಿಸಲಾಗಿದೆ. ಅಲ್ಲದೆ, ರಕ್ಷಣಾ ಕಾರ್ಯಾಚರಣೆಗೆ ಐಸಿಜಿಎಸ್ ಸಮುದ್ರ ಪಾವಕ್ ಎನ್ನುವ ವಿಶೇಷ ಹಡಗನ್ನು ಗುಜರಾತಿನ ಪೋರ್ ಬಂದರಿನಿಂದ ತರಿಸಲಾಗಿದೆ. ಕೋಸ್ಟ್ ಗಾರ್ಡ್ ಪಡೆಯ 9 ಹಡಗುಗಳು, ಮೂರು ಹೆಲಿಕಾಪ್ಟರ್, ರಕ್ಷಣಾ ಕಾರ್ಯಾಚರಣೆಯ ಏಜನ್ಸಿಗಳು, ಎನ್ಎಂಪಿಟಿ ಅಧಿಕಾರಿಗಳು ತೈಲ ಸೋರಿಕೆ ತಡೆಯುವ ಬಗ್ಗೆ ನಿಗಾ ಇಟ್ಟಿದ್ದಾರೆ. ಕೋಸ್ಟ್ ಗಾರ್ಡ್ ಪಡೆಯ ಮಾಲಿನ್ಯ ನಿಯಂತ್ರಣ ವಿಭಾಗದ ಅಧಿಕಾರಿಗಳು ನಿಗಾ ಇಟ್ಟಿದ್ದು, ತೈಲ ಸೋರಿಕೆಯಾದಲ್ಲಿ ಯಾವೆಲ್ಲ ಮುಂಜಾಗ್ರತೆ ವಹಿಸಬೇಕು ಎನ್ನುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.

Officials of the Indian Coast Guard (ICG) continued to monitor the situation around the grounded merchant ship MV Princess Miral of New Mangalore for any probable leakage of oil from the ship. Along with district administration and other stakeholders, it is also being coordinated for shoreline clean-up in case of any oil spill. Constant surveillance has been undertaken by Coast Guard aircraft and ships in the area around the vessel and onshore for pollution response since June 21.