ಬ್ರೇಕಿಂಗ್ ನ್ಯೂಸ್
23-06-25 06:56 pm Mangalore Correspondent ಕರಾವಳಿ
ಮಂಗಳೂರು, ಜೂನ್ 23 : ಮಂಗಳೂರು ಮಹಾನಗರ ಪಾಲಿಕೆಯ ಲಾಲ್ ಬಾಗ್ ಪ್ರಧಾನ ಕಚೇರಿಗೆ ಸರ್ಚ್ ವಾರಂಟ್ ಸಹಿತ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಪಾಲಿಕೆಯ ಕಂದಾಯ, ಆರೋಗ್ಯ, ಎಂಜಿನಿಯರ್ ವಿಭಾಗ, ಲೆಕ್ಕಪತ್ರ, ನಗರ ಯೋಜನಾ ವಿಭಾಗ, ಆಯುಕ್ತರ ಕಚೇರಿಯಲ್ಲಿ ಕಡತ ವಿಲೇವಾರಿ, ಲೈಸನ್ಸ್ ನೀಡಿಕೆ ಸೇರಿದಂತೆ ಹಲವಾರು ಪ್ರಕ್ರಿಯೆಗಳಲ್ಲಿ ನ್ಯೂನತೆ ಇರುವುದನ್ನು ಪತ್ತೆಹಚ್ಚಿದ್ದಾರೆ.
ಕಂದಾಯ ಮತ್ತು ನಗರ ಯೋಜನಾ ವಿಭಾಗದ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ಬ್ರೋಕರ್ ಒಬ್ಬರ ಬಳಿ ರೂ. 5 ಲಕ್ಷ ಹಣ ಪತ್ತೆಯಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ವ್ಯಕ್ತಿಯೊಬ್ಬರು ನಿವೃತ್ತರಾಗಿ 15 ವರ್ಷ ಕಳೆದರೂ ಇಲ್ಲಿಯವರೆಗೆ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಇದು ಮಹಾನಗರ ಪಾಲಿಕೆಯ ಆಡಳಿತಾತ್ಮಕ ದುರವಸ್ಥೆಗೆ ನಿದರ್ಶನವಾಗಿದೆ. ಆರೋಗ್ಯ ವಿಭಾಗದಲ್ಲಿ ಹಲವಾರು ಉದ್ದಿಮೆ ಪರವಾನಿಗೆಯ ಕಡತಗಳು ಎಂಸಿಸಿ ಟ್ರೇಡ್ ಲೈಸನ್ಸ್ ವೆಬ್ಸೈಟ್ನಲ್ಲಿ ಬಾಕಿ ಇರುವುದು ಕಂಡುಬಂದಿದೆ. ವ್ಯಾಪಾರ ಪರವಾನಿಗೆಗಳನ್ನು ನವೀಕರಿಸಿರುವುದಿಲ್ಲ ಮತ್ತು ಅದಕ್ಕೆ ಅನುಗುಣವಾದ ಶುಲ್ಕವನ್ನು ಸಂಗ್ರಹಿಸಿರುವುದಿಲ್ಲ.
ಇಂಜಿನಿಯರಿಂಗ್ ವಿಭಾಗದಲ್ಲಿ ಹಳೆಯ ಕಡತಗಳನ್ನು ಬಾಕಿ ಇರಿಸಿರುವುದು ಕಂಡುಬರುತ್ತದೆ. ಲೆಕ್ಕಪತ್ರ ವಿಭಾಗದಲ್ಲಿ ಕಾಲ ಮಿತಿಯೊಳಗೆ ಬಿಲ್ಗಳನ್ನು ವಿಲೇವಾರಿಗೊಳಿಸದೆ ಬಾಕಿ ಇರಿಸಲಾಗಿದೆ. ನಗರ ಯೋಜನಾ ವಿಭಾಗದಲ್ಲಿ ಕಟ್ಟಡ ಪರವಾನಿಗೆ ನೀಡುವ ಸಮಯ ಯಾವುದೇ ನಿಬಂಧನೆಗಳನ್ನು ಪಾಲಿಸದೇ ಪರವಾನಿಗೆ ನೀಡುತ್ತಿದ್ದಾರೆ. ಬಿಲ್ಡಿಂಗ್ ಬೈಲಾ ನಿಯಮಗಳನ್ನು ಉಲ್ಲಂಘಿಸಿದ ಕಟ್ಟಡಗಳಿಗೆ ಡೆಮೋಲಿಷನ್ ಆರ್ಡರ್ ಹೊರಡಿಸಿದ್ದರೂ ಟೌನ್ ಪ್ಲಾನಿಂಗ್ ವಿಭಾಗದ ಇಂಜಿನಿಯರ್ ಗಳು ಮತ್ತು ಆಯುಕ್ತರು ಇಂತಹ ಕಟ್ಟಡಗಳಿಗೆ ಕಾನೂನುಬಾಹಿರ ಅನುಮತಿ ನೀಡಿರುವುದಾಗಿ ಮಾಹಿತಿ ಇರುತ್ತದೆ.
ನಗರದ ಒಳಚರಂಡಿ ಮೇಲುಸ್ತುವಾರಿ ವಿಭಾಗದ ಅಧಿಕಾರಿಗಳಾದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಒಳಚರಂಡಿ ವಿಭಾಗದ ಅಧಿಕಾರಿಗಳು ನಗರದ ರಾಜಕಾಲುವೆ, ತೋಡುಗಳಿಗೆ ಕಟ್ಟಡಗಳಿಂದ ನೀರು ಅನಧಿಕೃತವಾಗಿ ಹರಿಯಲು ಅವಕಾಶ ಮಾಡಿಕೊಟ್ಟು ಇದರ ಉಲ್ಲಂಘನೆಯ ಕುರಿತು ಯಾವುದೇ ಕ್ರಮ ಕೈಗೊಳ್ಳದೇ ಮಳೆಗಾಲದ ಸಮಯದಲ್ಲಿ ಹಲವಾರು ಪ್ರದೇಶಗಳಲ್ಲಿ ಚರಂಡಿ ನೀರು ಜನವಸತಿ ಪ್ರದೇಶಗಳಿಗೆ ಹರಿದು ಹೋಗಿ ಅನಾರೋಗ್ಯಕರವಾದ ವಾತಾವರಣ ಸೃಷ್ಟಿಸಿರುತ್ತಾರೆ ಎಂದು ಮಾಹಿತಿ ತಿಳಿದುಬಂದಿದೆ. ಎಸ್ಟಿಪಿ ಮತ್ತು ವೆಟ್ ವೆಲ್ ಗಳ ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ನಡೆಸದೆ ಅಸ್ತಿತ್ವದಲ್ಲಿರುವ ಯುಜಿಡಿ ನೆಟ್ವರ್ಕ್ಗೆ 25 ಕ್ಕಿಂತ ಹೆಚ್ಚಿನ ಯುನಿಟ್ ಗಳಿರುವ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ಗಳಿಂದ ಹೊರಬರುವ ಕೊಳಚೆ ನೀರನ್ನು ಸಂಸ್ಕರಿಸುವ ಸಾಮರ್ಥ್ಯ ಇಲ್ಲದೇ ಇದ್ದರೂ ಹಲವಾರು ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ಗಳಿಗೆ ಎಸ್ ಟಿಪಿ ನಿರ್ಮಿಸಲು ಒತ್ತಾಯಿಸದೆ ಅನುಮತಿ ನೀಡಿರುವುದು ಪತ್ತೆಯಾಗಿದೆ. ನದಿಗಳ ಹಾಗೂ ತೋಡುಗಳ ಮಾಲಿನ್ಯಕ್ಕೆ ಕಟ್ಟಡ ನಿರ್ಮಾಣ ಸಮಯ ಯುಜಿಡಿಗೆ ಸಂಬಂಧಿಸಿದ ಷರತ್ತುಗಳನ್ನು ಪಾಲನೆ ಮಾಡಲು ಒತ್ತಾಯಿಸದೆ ನಿರ್ಲಕ್ಷ್ಯ ತೋರಿರುವುದಾಗಿ ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ಸಮಗ್ರ ವರದಿಯನ್ನು ಲೋಕಾಯುಕ್ತ ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು ಎಂಬುದಾಗಿ ದಕ್ಷಿಣ ಕನ್ನಡ ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ತಿಳಿಸಿದ್ದಾರೆ.
ಮಂಗಳೂರು ಲೋಕಾಯುಕ್ತ ಉಪಾಧೀಕ್ಷಕರಾದ ಡಾ.ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ ಹಾಗೂ ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ಮತ್ತು ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ, ರಾಜೇಂದ್ರ ನಾಯ್ಕ್ ಎಂ.ಎನ್ ಮಂಗಳೂರು ಮತ್ತು ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯ ಸಿಬ್ಬಂದಿಯೊಂದಿಗೆ ದಾಳಿ ಕಾರ್ಯಾಚರಣೆ ನಡೆಸಿದ್ದರು.
A major raid conducted by the Lokayukta officials at the Mangaluru City Corporation (MCC) office in Lalbagh has revealed alarming levels of administrative irregularities and corruption. The search, carried out with a warrant, targeted various departments including Revenue, Health, Engineering, Accounts, Urban Planning, and the Commissioner’s Office.
11-07-25 05:41 pm
HK News Desk
24 ಗಂಟೆಯಲ್ಲಿ ಭಟ್ಕಳ ನಗರವನ್ನು ಸ್ಫೋಟಿಸುತ್ತೇನೆ ;...
11-07-25 04:36 pm
Heart Attack, Belagavi, Bidar: ಹೃದಯಾಘಾತ ; ರಸ್...
11-07-25 04:22 pm
ನಾನೇ ಐದು ವರ್ಷಕ್ಕೆ ಸಿಎಂ ; ದೆಹಲಿ ಅಂಗಳದಲ್ಲೂ ಹೂಂಕ...
10-07-25 09:53 pm
ED Raid Congress MLA Subba Reddy: ಮಲೇಶ್ಯಾ, ಬ್...
10-07-25 12:45 pm
11-07-25 12:08 pm
HK News Desk
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
Bangle Seller, Changur Baba Arrest, Uttar Pra...
10-07-25 03:24 pm
Amit Shah; ರಾಜಕೀಯ ನಿವೃತ್ತಿ ಬಳಿಕ ವೇದ, ಉಪನಿಷತ್...
10-07-25 01:00 pm
ಗೋಮಾಂಸ ತಿನ್ನಿಸಿ ಮತಾಂತರಕ್ಕೆ ಯತ್ನ ; ಫೇಸ್ಬುಕ್ಕಲ್...
07-07-25 08:45 pm
10-07-25 07:23 pm
Mangalore Correspondent
Mangalore, Traffic Constable, Lokayukta, Tasl...
10-07-25 04:01 pm
ಮಂಗಳೂರಿನ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ನವ...
09-07-25 10:25 pm
Mangalore Home Minister Parameshwara, Peace M...
09-07-25 10:17 pm
Peace Meeting, Mangalore, Brijesh Chowta, Ash...
09-07-25 09:01 pm
10-07-25 08:09 pm
HK News Desk
Kerala Couple, Chit Fund Scam; ಚಿಟ್ ಫಂಡ್ ಹೆಸರ...
10-07-25 01:05 pm
Double Murder Hassan, crime: ಆಸ್ತಿ ವಿಚಾರಕ್ಕೆ...
10-07-25 12:04 pm
Drugs News, Mangalore: ಮಂಗಳೂರಿಗೆ ಡ್ರಗ್ಸ್ ಪೂರೈ...
09-07-25 10:56 pm
Kerala Chit Fund, Fraud, Mangalore: 20 ವರ್ಷಗಳ...
08-07-25 10:01 pm