ಉತ್ತರ ಪ್ರದೇಶ ರೀತಿ ಬುಲ್ಡೋಜರ್ ಪ್ರಯೋಗಿಸುವ ಸ್ಥಿತಿ ರಾಜ್ಯಕ್ಕೆ ಬಂದಿಲ್ಲ ; ಗೃಹ ಸಚಿವ ಆರಗ ಜ್ಞಾನೇಂದ್ರ

14-06-22 09:58 pm       Udupi Correspondent   ಕರಾವಳಿ

ಉತ್ತರ ಪ್ರದೇಶದ ಮಾದರಿಯಲ್ಲಿ ಬುಲ್ಡೋಜರ್ ಪ್ರಯೋಗಿಸುವ ಸ್ಥಿತಿ ರಾಜ್ಯಕ್ಕೆ ಬಂದಿಲ್ಲ. ಅಂತಹ ಪರಿಸ್ಥಿತಿ ರಾಜ್ಯದಲ್ಲಿ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಉಡುಪಿ, ಜೂನ್ 14: ಉತ್ತರ ಪ್ರದೇಶದ ಮಾದರಿಯಲ್ಲಿ ಬುಲ್ಡೋಜರ್ ಪ್ರಯೋಗಿಸುವ ಸ್ಥಿತಿ ರಾಜ್ಯಕ್ಕೆ ಬಂದಿಲ್ಲ. ಅಂತಹ ಪರಿಸ್ಥಿತಿ ರಾಜ್ಯದಲ್ಲಿ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಂವಿಧಾನ, ಕಾನೂನು ಪಾಲನೆಯಲ್ಲಿ ಕೊರತೆಯಾಗಿಲ್ಲ. ಎಲ್ಲವೂ ಸರಾಗವಾಗಿ ನಡೆಯುತ್ತಿದೆ. ಬುಲ್ಡೋಜರ್ ಅಸ್ತ್ರ ಪ್ರಯೋಗಿಸುವ ಅಗತ್ಯ ಬಂದಿಲ್ಲ ಎಂದು ಹೇಳಿದ್ದಾರೆ.

Rahul Gandhi set to appear before ED today in National Herald case | Latest  News India - Hindustan Times

ರಾಹುಲ್ ಗಾಂಧಿ ಇಡಿ ವಿಚಾರಣೆ ಬಗ್ಗೆ ಕೇಳಿದ ಪ್ರಶ್ನೆಗೆ, ದೇಶದ ಕಾನೂನು ಎಲ್ಲರಿಗೂ ಒಂದೇ. ನ್ಯಾಯಾಲಯ ವಿಚಾರಣೆಗೆ ಕರೆದಾಗ ಹಾಜರಾಗಬೇಕು. ಅಪರಾಧ ಸಾಬೀತಾದರೆ ಶಿಕ್ಷೆಯಾಗುತ್ತದೆ. ಆದರೆ ಕಾಂಗ್ರೆಸ್ ನಾಯಕರು ನೆಲದ ಕಾನೂನುಗಳಿಗೆ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಈ ರೀತಿ ಅಡ್ಡಮಾರ್ಗ ಹಿಡಿದಿರುವ ಕಾರಣದಿಂದಲೇ ದೇಶದಿಂದಲೇ ಮಾಯವಾಗುತ್ತಿದೆ ಎಂದು ಟೀಕಿಸಿದರು.

ಪಿಎಫ್ಐ, ಸಿಎಫ್ಐ ಹಾಗೂ ಎಸ್ಡಿಪಿಐನಂತಹ ಮತಾಂಧ ಶಕ್ತಿಗಳನ್ನು ಮಟ್ಟ ಹಾಕಲು ಸರಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಹೇಳಿದ ಸಚಿವರು, ಈ ಸಂಘಟನೆಗಳನ್ನು ನಿಷೇಧಿಸಲು ಕೇಂದ್ರಕ್ಕೆ ವರದಿ ನೀಡಿದ್ದೀರಾ ಎಂಬ ಪ್ರಶ್ನೆಗೆ, ಅಂತಹ ವರದಿಯನ್ನೇನೂ ನಾವು ಕೊಟ್ಟಿಲ್ಲ. ಅವರ ಅತಿರೇಕದ ನಡೆಗಳನ್ನು ಆಧರಿಸಿ ನಿಷೇಧ ಮಾಡಬೇಕೆಂಬ ಒತ್ತಾಯ ಇದೆ. ಆ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.

UP Bulldozer Action situation has not come in Karnataka says Home Minister Araga Jnanendra in Udupi.