ಬ್ರೇಕಿಂಗ್ ನ್ಯೂಸ್
14-06-22 01:34 pm Mangalore Correspondent ಕರಾವಳಿ
ಮಂಗಳೂರು, ಜೂನ್ 14: ಮಂಗಳೂರು ನಗರದಲ್ಲಿ ಏಂಟಿ ಟೆರರಿಸಂ ಸ್ಕ್ವಾಡ್ ಅನ್ನುವ ಹೊಸ ಘಟಕವನ್ನು ಅಸ್ತಿತ್ವಕ್ಕೆ ತರಲಾಗಿದೆ. ನಗರ ಸಶಸ್ತ್ರ ಮೀಸಲು ಪಡೆಯಿಂದ ಆಯ್ದ 35 ಸಿಬಂದಿಯನ್ನು ಬೆಂಗಳೂರಿನಲ್ಲಿ ವಿಶೇಷ ತರಬೇತುಗೊಳಿಸಿ ಭಯೋತ್ಪಾದಕ ವಿರೋಧಿ ದಳವನ್ನು ಹೊಸತಾಗಿ ರಚಿಸಲಾಗಿದೆ.
ಪ್ರತೀ ಜಿಲ್ಲೆಯಲ್ಲಿ ಕ್ವಿಕ್ ರೆಸ್ಪಾನ್ಸ್ ಟೀಮ್ (ಕ್ಯುಆರ್ ಟಿ) ಅನ್ನುವ ವಿಭಾಗ ಇದೆ. ಸಿಎಆರ್ ಯೂನಿಟ್ ನಲ್ಲಿರುವ ಈ ಸಿಬಂದಿಯನ್ನು ಬೆಂಗಳೂರಿನಲ್ಲಿ ವಿಶೇಷ ತರಬೇತಿಗೆ ಕಳಿಸಲಾಗುತ್ತದೆ. ಕ್ವಿಕ್ ರೆಸ್ಪಾನ್ಸ್ ಟೀಮ್ ಸೇರಬೇಕಿದ್ದಲ್ಲಿ ಬೆಂಗಳೂರಿನ ಕೂಡ್ಲು ಎಂಬಲ್ಲಿ ಸೆಂಟರ್ ಫಾರ್ ಕೌಂಟರ್ ಟೆರರಿಸಂ (ಸಿಸಿಟಿ) ಅನ್ನುವ ಘಟಕದಲ್ಲಿ ತರಬೇತು ಪಡೆಯಬೇಕು. ಪ್ರತಿ ವರ್ಷ ಈ ರೀತಿಯ ತರಬೇತಿಗೆ 30 ಸಿಬಂದಿಯನ್ನು ಕಳಿಸಲಾಗುತ್ತದೆ. ಈ ಬಾರಿ ಮಂಗಳೂರಿನ ಸಿಎಆರ್ ವಿಭಾಗದಿಂದ 35 ಮಂದಿ ತರಬೇತಿ ಪಡೆದು ಬಂದಿದ್ದಾರೆ ಎಂದು ನಗರ ಕಾನೂನು ಸುವ್ಯವಸ್ಥೆ ವಿಭಾಗದ ಉಪಾಯುಕ್ತ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ನಗರ ಭಾಗದಲ್ಲಿ ಭಯೋತ್ಪಾದನಾ ಚಟುವಟಿಕೆಯಾದಲ್ಲಿ ಹೇಗೆ ಎದುರಿಸಬೇಕು, ಜನರ ಮಧ್ಯೆ ಕಾರ್ಯ ನಿರ್ವಹಿಸುವುದು ಹೇಗೆ ಎನ್ನುವ ಬಗ್ಗೆ ತರಬೇತಿ ನೀಡಲಾಗುತ್ತದೆ. ವಿಶೇಷವಾಗಿ ಸಶಸ್ತ್ರ ಬಳಕೆ ಬಗ್ಗೆ ಅವರಿಗೆ ತರಬೇತಿ ನೀಡಲಾಗುವುದು ಎಂದು ಡಿಸಿಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ತರಬೇತಿ ಮುಗಿಸಿ ಬಂದ 35 ಮಂದಿಯಿಂದ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ಗೌರವ ವಂದನೆ ಸ್ವೀಕರಿಸಿದರು. ಡಿಸಿಪಿಗಳಾದ ಹರಿರಾಮ್ ಶಂಕರ್, ದಿನೇಶ್ ಕುಮಾರ್ ಉಪಸ್ಥಿತರಿದ್ದರು.
ಮಾಹಿತಿ ಪ್ರಕಾರ, ಈ ಹಿಂದೆ ಇದ್ದ ಕ್ವಿಕ್ ರೆಸ್ಪಾನ್ಸ್ ತಂಡವನ್ನೇ ಸಿಸಿಟಿ ಎಂದು ಹೆಸರಿಸಲಾಗುತ್ತದೆ. ಹೊಸ ತಂಡಕ್ಕೆ ಸುಬ್ರಹ್ಮಣ್ಯ ಎಂ. ಚೀಫ್ ಆಗಿರುತ್ತಾರೆ. ತಲಾ 15 ಮಂದಿಯ ಎರಡು ತಂಡ ಇರುತ್ತದೆ. ಐದು ಜನ ಹೆಚ್ಚುವರಿ ಸಿಬಂದಿ ಇರುತ್ತಾರೆ. ಸಾಮಾನ್ಯವಾಗಿ ವಿಐಪಿಗಳು, ಮುಖ್ಯಮಂತ್ರಿ ಬರುವ ಸಂದರ್ಭದಲ್ಲಿ ಇವರನ್ನು ಭದ್ರತೆಗೆ ನಿಯೋಜನೆ ಮಾಡಲಾಗುತ್ತದೆ. ಇವರಿಗೆ ಪ್ರತ್ಯೇಕ ಸಮವಸ್ತ್ರವೂ ಇರುತ್ತದೆ.
City anti-terrorism squad under the internal security department is ready to serve the city as well as the limits of commissionerate. The team has 35 police personnel. The team undertook two months of training at Centre for Counter Terrorism (CCT) at Koodlu of Bengaluru.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm