ಬ್ರೇಕಿಂಗ್ ನ್ಯೂಸ್
13-06-22 10:45 pm Mangalore Correspondent ಕರಾವಳಿ
ಮಂಗಳೂರು, ಜೂನ್ 13: ಮಳಲಿ ಮಸೀದಿಯ ವಿವಾದದ ಕುರಿತು ಮಂಗಳೂರಿನ ಕೋರ್ಟಿನಲ್ಲಿ ಜಟಾಪಟಿ ನಡೆಯುತ್ತಿರುವ ನಡುವಲ್ಲೇ ವಿಶ್ವ ಹಿಂದು ಪರಿಷತ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲದೆ, ಮಸೀದಿ ಕಮಿಟಿಯಿಂದ ಸಲ್ಲಿಸಿರುವ ತಡೆಯಾಜ್ಞೆ ತೆರವು ಮತ್ತು ಅರ್ಜಿಯ ಸಿಂಧುತ್ವ ಪ್ರಶ್ನಿಸುವ ಅರ್ಜಿ ಪರಿಗಣಿಸಿ ಮಧ್ಯಂತರ ಆದೇಶ ನೀಡದಂತೆ ಮಂಗಳೂರಿನ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ ಎನ್ನುವ ಮಾಹಿತಿ ಲಭಿಸಿದೆ.
ಮಳಲಿ ಪೇಟೆಯ ಜುಮ್ಮಾ ಮಸೀದಿಯ ನವೀಕರಣ ಕಾಮಗಾರಿಗೆ ತಡೆ ವಿಧಿಸಿ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಎಪ್ರಿಲ್ 21ರಂದು ಆದೇಶ ಮಾಡಿತ್ತು. ಆದರೆ ಆ ತಡೆಯನ್ನು ತೆರವುಗೊಳಿಸಬೇಕೆಂದು ಮಸೀದಿ ಕಮಿಟಿ ಪರವಾಗಿ ಅರ್ಜಿ ಸಲ್ಲಿಸಲಾಗಿತ್ತು. ಅಲ್ಲದೆ, ವಿಶ್ವ ಹಿಂದು ಪರಿಷತ್ ಪರ ವಕೀಲರ ಅರ್ಜಿಯನ್ನು 1991ರ ಆರಾಧನಾ ಸ್ಥಳಗಳ ಕಾಯ್ದೆಯಂತೆ ಪರಿಗಣಿಸಬಾರದು. ವಕ್ಫ್ ಆಸ್ತಿಯೆಂದು ಪರಿಗಣಿಸಲ್ಪಟ್ಟ ಮಸೀದಿಯ ಕುರಿತು ಈ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲು ಅವಕಾಶ ಇಲ್ಲ ಎಂದು ಮಸೀದಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಅದೇ ಹಿನ್ನೆಲೆಯಲ್ಲಿ ವಕೀಲರು ಪ್ರಬಲ ವಾದ ಮಂಡಿಸಿದ್ದರು.

ಮಂಗಳೂರಿನ ಕೋರ್ಟಿನಲ್ಲಿ ಈ ಕುರಿತು ಎರಡೂ ಕಡೆಗಳಿಂದ ಏಳೆಂಟು ಅರ್ಜಿ ಸಲ್ಲಿಕೆಯಾಗಿರುವುದರಿಂದ ಯಾವ ಅರ್ಜಿಯನ್ನು ಮೊದಲು ಪರಿಗಣಿಸಬೇಕು ಅನ್ನುವ ಬಗ್ಗೆಯೇ ನ್ಯಾಯಾಧೀಶರು ನಿರ್ಧರಿಸಿರಲಿಲ್ಲ. ಇದರ ನಡುವೆ, ಎರಡೂ ಕಡೆಗಳಿಂದ ಭಾರೀ ವಾದ ಮಂಡನೆಯೂ ನಡೆದಿತ್ತು. ಹೀಗಾಗಿ ವಿಶ್ವ ಹಿಂದು ಪರಿಷತ್ ಮುಖಂಡರು ಹೈಕೋರ್ಟಿನಲ್ಲಿ ಹಿರಿಯ ವಕೀಲ ವಿವೇಕ್ ರೆಡ್ಡಿ ಮೂಲಕ ಶುಕ್ರವಾರ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಅನುಸರಿಸಿ ಮಧ್ಯಂತರ ಆದೇಶ ನೀಡಲು ಕೆಳಗಿನ ಕೋರ್ಟಿಗೆ ಅವಕಾಶ ನೀಡಬಾರದು ಎಂದು ವಾದಿಸಿದ್ದರು.

ಮಸೀದಿ ನವೀಕರಣದ ಕಾಮಗಾರಿಯ ತಡೆಯಾಜ್ಞೆ ತೆರವು ಮಾಡಿದಲ್ಲಿ ಕೋರ್ಟಿನಲ್ಲಿ ವಾದಿಸುವುದಕ್ಕೆ ಅರ್ಥ ಇರುವುದಿಲ್ಲ. ಹೀಗಾಗಿ ವಿವಿಧ ಅರ್ಜಿಗಳ ವಿಚಾರಣೆ ಪೂರ್ತಿಯಾಗದ ಹೊರತು ತಡೆಯಾಜ್ಞೆ ತೆರವು ಮಾಡಬಾರದು ಎಂದು ಸೋಮವಾರ ಹೈಕೋರ್ಟಿನಲ್ಲಿ ವಾದಿಸಲಾಗಿತ್ತು. ಅಲ್ಲದೆ, ಮಸೀದಿಯಲ್ಲಿ ದೇಗುಲ ಪತ್ತೆಯಾಗಿರುವ ವಿಚಾರದಲ್ಲಿ ಪರಿಶೀಲನೆಯಾಗಬೇಕು. ಪುರಾತನ ದೇಗುಲವಾಗಿದ್ದರಿಂದ ಅಲ್ಲಿಗೆ ಆರಾಧನಾ ಸ್ಥಳಗಳ ಕಾಯ್ದೆ ಅನ್ವಯ ಆಗಲ್ಲ. ಕೋರ್ಟ್ ಕಮಿಷನ್ ನೇಮಿಸಿ ಪರಿಶೀಲನೆಗೆ ಅವಕಾಶ ನೀಡಬೇಕು. ಅಲ್ಲಿಯ ವರೆಗೆ, ಅರ್ಜಿಯ ಸಿಂಧುತ್ವದ ಬಗ್ಗೆ ಮಧ್ಯಂತರ ಆದೇಶ ನೀಡದಂತೆ ಕೆಳಗಿನ ಕೋರ್ಟಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಮಳಲಿ ಮಸೀದಿ ವಿವಾದ ; ವಕ್ಫ್ ದಾಖಲೆ ಪ್ರಕಾರ ಮಸೀದಿಯೆಂದೇ ಇದೆ, ಸ್ಮಾರಕ ಎನ್ನಲು ನೋಟಿಫಿಕೇಶನ್ ಇಲ್ಲ ಎಂದು ಪ್ರತಿವಾದ
ಮಳಲಿ ಮಸೀದಿ ; ಐತಿಹಾಸಿಕ ಸ್ಮಾರಕವಾಗಿ ಉಳಿಸಿಕೊಳ್ಳಲು ಸರ್ವೆ ಆಗಲೇಬೇಕು – ವಿಎಚ್ ಪಿ ವಕೀಲರ ವಾದ
Malali Mosque temple row enters High court by VHP lawyer. High court orders Mangalore additional court not to permit interim orders to the reconstruction of Mosque at Malali in Mangalore.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 11:50 am
HK News Desk
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
14-11-25 03:34 pm
Mangalore Correspondent
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
14-11-25 11:16 am
Mangalore Correspondent
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm