ಬ್ರೇಕಿಂಗ್ ನ್ಯೂಸ್
07-06-22 09:13 pm Mangalore Correspondent ಕರಾವಳಿ
ಮಂಗಳೂರು, ಜೂನ್ 7: ಯಾರಾದ್ರೂ ಹೇಳಿದ್ದು ಕೇಳದೇ ಇದ್ದರೆ, ಏಯ್ ಕತ್ತೆ ಅಂತ ಬೈಯ್ಯುವುದನ್ನು ಕೇಳಿರಬಹುದು. ಆದರೆ ಇನ್ನು ಕತ್ತೆಗಳನ್ನು ಆ ರೀತಿ ಬೈಕೋಳ್ಳೇಬಾರ್ದು. ಯಾಕೆ ಗೊತ್ತಾ.. ಹಸುವನ್ನು ಕಾಮಧೇನು ಅಂತಿದ್ದ ಜನರ ನಡುವೆ, ಕತ್ತೆ ಅದಕ್ಕಿಂತ ದೊಡ್ಡ ಡಿಮ್ಯಾಂಡ್ ಇರೋ ಪ್ರಾಣಿ ಅನ್ನೋ ಸುದ್ದಿಗಳು ಹರಡುತ್ತಾ ಇದೆ. ವಿದೇಶಗಳಲ್ಲಿ ಕತ್ತೆಯ ಬೈ ಪ್ರಾಡಕ್ಟ್, ಕತ್ತೆಯ ಹಾಲು, ಕತ್ತೆಯ ಮೂತ್ರಕ್ಕೂ ಭಾರೀ ಬೇಡಿಕೆ ಇದೆಯಂತೆ. ಕತ್ತೆ ಸಾಕಿದರೇ, ಲಕ್ಷಾಂತರ ರೂಪಾಯಿ ಗಳಿಕೆ ಮಾಡುವಷ್ಟು ಬೇಡಿಕೆ ಇದ್ಯಂತೆ. ಹಾಗಾಗಿ, ಇನ್ಮುಂದೆ ಯಾರನ್ನಾದ್ರೂ ಏಯ್ ಕತ್ತೆ ಅಂದ್ರೆ, ಜೋಕೆ ಅನ್ನುವ ಕಾಲ ಬರಲೂ ಬಹುದು.
ಇದೆಲ್ಲಾ ಪೀಠಿಕೆ ಯಾಕಂದ್ರೆ, ನಮ್ಮ ಮಂಗಳೂರು ಹೊರವಲಯದ ಕೋಣಾಜೆ ಬಳಿಯ ಇರಾದಲ್ಲಿ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಕತ್ತೆ ಫಾರ್ಮ್ ಆರಂಭ ಆಗ್ತಿದೆ. ದೇಶದಲ್ಲಿ ಎರಡನೇ ಕತ್ತೆ ಫಾರ್ಮ್ ಇದಾಗಿದ್ದು, ಅಳಿವಿನಂಚಿನಲ್ಲಿರುವ ಕತ್ತೆಗಳನ್ನು ಮತ್ತೆ ಬದುಕಿಸಬೇಕು. ಮತ್ತು ಅದರ ಭರಪೂರ ಪ್ರಯೋಜನೆಗಳನ್ನು ಜನರು ತಿಳ್ಕೋಬೇಕು ಅನ್ನುವ ಉದ್ದೇಶದಿಂದ ಕೃಷಿ ವಿವಿಯ ಡಾ.ಶ್ರೀನಿವಾಸ ಗೌಡ ಅವರ ಗರಡಿಯಲ್ಲಿ ಐದು ಮಂದಿ ಉತ್ಸಾಹಿ ಐಟಿ ಉದ್ಯೋಗಿಗಳು ಕೋಣಾಜೆ ಬಳಿಯ ಇರಾದಲ್ಲಿ ಕತ್ತೆ ಫಾರ್ಮ್ ರೆಡಿ ಮಾಡಿದ್ದಾರೆ.
ಕೊರೊನಾ ಕಾಲದಲ್ಲಿ ತನ್ನ ಐಟಿ ಉದ್ಯೋಗಕ್ಕೆ ಕತ್ತರಿ ಬಿದ್ದಾಗ ಬೆಂಗಳೂರಿನ ಜೆಪಿ ನಗರದಲ್ಲಿ ನೆಲೆಸಿದ್ದ ಶ್ರೀನಿವಾಸ ಗೌಡರು ತಡ ಮಾಡಲಿಲ್ಲ. ಏನಾದ್ರೂ ಕೃಷಿ ಮಾಡಬೇಕು ಎಂಬ ಆಸಕ್ತಿ, ಯೋಚನೆ ಹೊಂದಿದ್ದ ಗೌಡರು, ತನ್ನ ಐವರು ಸ್ನೇಹಿತರ ಜೊತೆ ಸೇರಿ ನೇರವಾಗಿ ಕೃಷಿ ಕಾರ್ಯಕ್ಕೆ ಧುಮುಕಿದ್ದರು. ಸ್ನೇಹಿತರ ಸಲಹೆಯಂತೆ, ಕೋಣಾಜೆ ಬಳಿಯ ಇರಾದಲ್ಲಿ 2.35 ಎಕ್ರೆ ಜಾಗವನ್ನು ಲೀಸ್ ಪಡೆದು ಕುರಿ ಮತ್ತು ಆಡು ಸಾಕಣೆ ಆರಂಭಿಸಿದ್ದರು. ಎರಡು ವರ್ಷಗಳ ದುಡಿಮೆಯ ಬಳಿಕ ಇದೀಗ ಅಪರೂಪದ ಕೆಲಸಕ್ಕೆ ಕೈಹಾಕಿದ್ದಾರೆ. ಗುಜರಾತ್ ಮತ್ತು ಆಂಧ್ರಪ್ರದೇಶದಿಂದ 20 ಕತ್ತೆಗಳನ್ನು ತಂದು ಅದೇ ಎರಡೂವರೆ ಎಕ್ರೆ ಜಾಗದಲ್ಲಿ ಪ್ರತ್ಯೇಕ ಕೊಟ್ಟಿಗೆ ಮಾಡಿದ್ದಾರೆ. ಅವರು ಹೇಳೋ ಪ್ರಕಾರ, ಕತ್ತೆ ಹಾಲಿನಲ್ಲಿ ಅತಿ ಹೆಚ್ಚು ಪ್ರೋಟೀನ್ ಇದ್ದು, ಮಕ್ಕಳಲ್ಲಿ ಬುದ್ಧಿಶಕ್ತಿ ಬೆಳೆಯಲು, ಅಪೌಷ್ಟಿಕತೆಯಿಂದ ನರಳುವ ಮಕ್ಕಳಿಗೆ ಇದನ್ನು ಕುಡಿದರೆ ಅತ್ಯಂತ ಸಹಕಾರಿಯಂತೆ.
ಕತ್ತೆ ಹಾಲಿನಲ್ಲಿ ಹೆಚ್ಚಿದೆ ರೋಗ ನಿರೋಧಕ ಶಕ್ತಿ
ಮಧುಮೇಹ, ರಕ್ತಹೀನತೆ, ಅಲರ್ಜಿ ಇತ್ಯಾದಿ ಚರ್ಮ ರೋಗಗಳಿಗೂ ರಾಮಬಾಣವಂತೆ. ಹಾಲಿನಲ್ಲಿ ಅತಿ ಹೆಚ್ಚು ರೋಗ ನಿರೋಧಕ ಗುಣಗಳಿರುವುದರಿಂದ ಇದನ್ನು ವಾರಕ್ಕೊಮ್ಮೆ ಹತ್ತು ಎಂ.ಎಲ್ ನಷ್ಟು ಕುಡಿಯಲು ಬಳಸಿದರೆ, ಮೂರು ತಿಂಗಳಲ್ಲಿ ದೇಹದಲ್ಲಿರುವ ಸಾಮಾನ್ಯ ರೋಗಗಳು ವಾಸಿಯಾಗುವುದಂತೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಂಡಿರುವ ಡಾ.ಶ್ರೀನಿವಾಸ ಗೌಡರ ಮಾರ್ಗದರ್ಶನದಲ್ಲಿ ಹಾಲನ್ನು ಸಣ್ಣ ಸಣ್ಣ ಪ್ಯಾಕೆಟ್ ಮಾಡಿ, ಮಂಗಳೂರಿನಲ್ಲಿ ಸ್ಥಳೀಯವಾಗಿ ಮಾರಲು ರೆಡಿ ಮಾಡುತ್ತಿದ್ದಾರೆ. ಅಂದಹಾಗೆ, ವಿದೇಶಿ ಮಾರುಕಟ್ಟೆಯಲ್ಲಿ ಕತ್ತೆ ಹಾಲಿಗೆ 5ರಿಂದ 7 ಸಾವಿರ ರೂ. ದರವಿದ್ದು, ಇಲ್ಲಿನ ಐಸಿರಿ ಫಾರ್ಮ್ ನಿಂದ ಸಣ್ಣ ಪ್ಯಾಕೆಟ್ ರೂಪದಲ್ಲಿ ಕೊಡಲಾಗುತ್ತಿದೆ. 30 ಎಂ.ಎಲ್, 50 ಎಂ.ಎಲ್, 100, 200 ಎಂಎಲ್ ಹೀಗೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಲು ಪ್ಯಾಕೆಟ್ ಮಾಡಲಾಗಿದೆ. 30 ಎಂ.ಎಲ್. ಪ್ಯಾಕೆಟಿಗೆ 150 ರೂ. ದರ ವಿಧಿಸಲಾಗಿದೆ.
ಈ ಹಿಂದೆ ಕೇರಳದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಕತ್ತೆ ಫಾರ್ಮ್ ಮಾಡಲಾಗಿತ್ತು. ಅಲ್ಲಿ ಅತ್ಯಂತ ಯಶಸ್ವಿಯಾಗಿ ಫಾರ್ಮ್ ನಡೆಯುತ್ತಿದ್ದರೂ, ಹಾಲನ್ನು ಮಾರಾಟ ಮಾಡುತ್ತಿಲ್ಲ. ಹಾಲಿನಿಂದ ಉಪ ಉತ್ಪನ್ನಗಳನ್ನು ತಯಾರಿಸಿ ನೇರವಾಗಿ ಯುರೋಪ್ ದೇಶಗಳಿಗೆ ರವಾನೆ ಮಾಡಲಾಗುತ್ತಿದೆ. ಯುರೋಪ್ ದೇಶಗಳಲ್ಲಿ ಕತ್ತೆ ಹಾಲಿನಿಂದ ಮಾಡಲಾಗುವ ಸಾಬೂನು, ತುಪ್ಪ, ಬೆಣ್ಣೆಗಳಿಗೆ ಭಾರೀ ಬೇಡಿಕೆಯಿದ್ದು ನೇರ ಮಾರುಕಟ್ಟೆ ಹೊಂದಿದ್ದಾರೆ ಎಂದು ಹೇಳುತ್ತಾರೆ, ಐಟಿ ಉದ್ಯೋಗ ಬಿಟ್ಟು ಹೈನುಗಾರಿಕೆಯಲ್ಲಿ ತೊಡಗಿರುವ ಶ್ರೀನಿವಾಸ್ ಗೌಡ.
ದೇಶದಲ್ಲಿ ಅಳಿವಿನಂಚಿನಲ್ಲಿವೆ ಕತ್ತೆಗಳು
ವಿಶೇಷ ಅಂದ್ರೆ, 2012ರಲ್ಲಿ ಕತ್ತೆಗಳ ಬಗ್ಗೆ ಅಧ್ಯಯನ ನಡೆಸಿದ ವೇಳೆ ದೇಶದಲ್ಲಿ 3.60 ಲಕ್ಷ ಕತ್ತೆಗಳಿದ್ದವು ಅನ್ನುವುದು ಗಣತಿಗೆ ಸಿಕ್ಕಿತ್ತು. ಆನಂತರ, 2019ರಲ್ಲಿ ಗಣತಿ ನಡೆಸಿದಾಗ, ಕತ್ತೆಗಳ ಸಂಖ್ಯೆ 1.32 ಲಕ್ಷಕ್ಕೆ ಇಳಿಕೆಯಾಗಿತ್ತು. ಹೀಗಾಗಿ ದೇಶದಲ್ಲಿ ಕತ್ತೆಗಳ ಸಂಖ್ಯೆ ತೀವ್ರ ಇಳಿಮುಖವಾಗುತ್ತಿದ್ದು, ಜನರು ಆಸಕ್ತಿ ಹೊಂದಿಲ್ಲದಿರುವುದು ಮತ್ತು ಕತ್ತೆಗಳ ಹಾಲು, ಮೂತ್ರದ ಪ್ರಯೋಜನ ತಿಳಿಯದಿರುವುದು ಕಾರಣ ಎನ್ನಲಾಗುತ್ತಿದೆ. ಕತ್ತೆಗಳ ಬಗ್ಗೆ ಅಧ್ಯಯನ ಕೈಗೊಂಡಿದ್ದ ಆಗ ಅಗ್ರಿಕಲ್ಚರಲ್ ವಿವಿಯಲ್ಲಿದ್ದ ಡಾ.ಶ್ರೀನಿವಾಸ ಗೌಡರು, 2016ರಲ್ಲಿ ಪ್ರಧಾನಿ ಮೋದಿಯವರಿಗೂ ಕತ್ತೆಗಳ ಸಂರಕ್ಷಣೆಗಾಗಿ ಮನವಿ ಮಾಡಿದ್ದರು. ಮೋದಿಯವರು ಕೂಡಲೇ ಎಚ್ಚೆತ್ತುಕೊಂಡು ಕತ್ತೆ ಮತ್ತು ಕುದುರೆಗಳ ಸಂರಕ್ಷಣೆಗಾಗಿ ಹರ್ಯಾಣದ ಹಿಸ್ಸಾರ್ ನಲ್ಲಿ 132 ಎಕ್ರೆ ಪ್ರದೇಶದಲ್ಲಿ ಸರಕಾರದ ವತಿಯಿಂದಲೇ ಫಾರ್ಮ್ ಮಾಡಿದ್ದರು. ಹಾಗಿದ್ದರೂ, ಕರ್ನಾಟಕ ಆಗಲೀ, ಯಾವುದೇ ರಾಜ್ಯಗಳು ಕತ್ತೆಗಳ ಸಂರಕ್ಷಣೆ ಅಥವಾ ಪೋಷಣೆಗೆ ಕ್ರಮ ಕೈಗೊಂಡಿಲ್ಲ. ರಾಜ್ಯ ಸರಕಾರದ ಪಶು ಸಂಗೋಪನಾ ಇಲಾಖೆಯಲ್ಲೂ ಕತ್ತೆಗಳ ಬಗ್ಗೆ ಕೇಳಿದರೆ, ಏನೂ ತಿಳಿಯದಂತೆ ವರ್ತಿಸುತ್ತಾರೆ.
ಕತ್ತೆಗಳ ಮೂತ್ರದಲ್ಲೂ ಇದೆ ಔಷಧೀಯ ಗುಣ
ಕತ್ತೆಗಳ ಹಾಲಿಗಿಂತಲೂ ಮೂತ್ರದಲ್ಲಿ ಭಾರೀ ಔಷಧೀಯ ಗುಣಗಳಿವೆಯಂತೆ. ರಕ್ತ ಹೆಪ್ಪುಗಟ್ಟುವುದು, ಕೆಟ್ಟ ರಕ್ತ ಶೇಖರ ಆಗುವುದು, ಹಿಮೋಗ್ಲೋಬಿನ್ ಕಡಿಮೆಯಾಗುವುದು ಈ ರೀತಿಯ ರಕ್ತ ಸಂಬಂಧೀ ಕಾಯಿಲೆಗಳಿಗೆ ಕತ್ತೆಗಳ ಮೂತ್ರ ಔಷಧಿಯಂತೆ. 5 ಎಂ.ಎಲ್ ಅಥವಾ ಹತ್ತು ಎಂಎಲ್ ನಷ್ಟು ಮೂತ್ರವನ್ನು ಸಂಸ್ಕರಿಸಿ, ಕುಡಿದಲ್ಲಿ ಈ ರೀತಿಯ ಕಾಯಿಲೆಗಳು ವಾಸಿಯಾಗುವುದಂತೆ. ಇವೆಲ್ಲವೂ ವೈಜ್ಞಾನಿಕವಾಗಿ ಸಾಬೀತು ಆಗಿದ್ದು, ಕರ್ನಾಟಕ ರಾಜ್ಯ ಸರಕಾರದಿಂದಲೇ ಕತ್ತೆ ಫಾರ್ಮ್ ನಡೆಸುವುದಕ್ಕೆ ಪ್ರೋತ್ಸಾಹ ಸಿಕ್ಕಿದೆಯಂತೆ. ಇದರ ಪಕ್ಕದಲ್ಲೇ ಮತ್ತೊಂದು ಮೂರೂವರೆ ಎಕ್ರೆ ಜಾಗವನ್ನು ಲೀಸ್ ಪಡೆದು ಅಲ್ಲಿ ಹಣ್ಣುಗಳನ್ನು ಬೆಳೆಯಲು ತೊಡಗಿದ್ದಾರೆ. ಒಟ್ಟಿನಲ್ಲಿ ಕರಾವಳಿಯಲ್ಲಿ ಅತ್ಯಂತ ವಿಶಿಷ್ಟ ಎನಿಸಿರುವ ಕತ್ತೆ ಫಾರ್ಮ್ ಚಾಲ್ತಿಗೆ ಬಂದಿದ್ದು, ಸದ್ಯದಲ್ಲೇ ಕತ್ತೆ ಹಾಲು ಮಂಗಳೂರಿನ ಮಾರುಕಟ್ಟೆಗೂ ಬರಲಿದೆ.
All preparations are underway for the inauguration of huge donkey farming and model training centre, first-of-its-kind in Karnataka and second only in the country, at Ira in the taluk on June 8. This centre will have comprehensive agriculture and animal husbandry, veterinary services, training and fodder development through Isiri farms. The centre will run under the ownerships of Srinivas Gowda, software engineer of Ramanagara origin. Donkey milk is very nutritious and highly expensive. It has got huge demand among health conscious people.
06-05-25 11:23 pm
Bangalore Correspondent
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
Hassan Suicide, Police Constable Harrasment:...
05-05-25 01:30 pm
07-05-25 12:20 pm
HK News Desk
India strikes terror camps in Pak; ಪಾಕಿಸ್ತಾನದ...
07-05-25 09:54 am
ವಿಶ್ವಸಂಸ್ಥೆಯಲ್ಲಿ ಬೆತ್ತಲಾದ ಪಾಕ್ ; ಚೀನಾ ಬಿಟ್ಟು...
06-05-25 02:45 pm
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm