ಬ್ರೇಕಿಂಗ್ ನ್ಯೂಸ್
21-06-25 08:50 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 21: 168 ಪ್ರಯಾಣಿಕರನ್ನು ಹೊಂದಿದ್ದ ಗುವಾಹಟಿಯಿಂದ ಚೆನ್ನೈ ತೆರಳುತ್ತಿದ್ದ ಇಂಡಿಗೋ ವಿಮಾನವು ಹಾರಾಟದ ಸಮಯದಲ್ಲೇ ‘ಮೇಡೇ’ ಘೋಷಿಸಿದ್ದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಲ್ಯಾಂಡ್ ಆಗಿದೆ.
ಇಂಡಿಗೋ ವಿಮಾನದಲ್ಲಿ ತೈಲ ಕಡಿಮೆಯಾಗಿದ್ದು ಇದರಿಂದಾಗಿ ವಿಮಾನದ ಸ್ಥಿತಿ ಡೇಂಜರ್ ಆಗಿದೆ ಎನ್ನುವುದನ್ನು ಸೂಚಿಸುವ ಮೇ ಡೇ ಘೋಷಣೆಯನ್ನು ಪೈಲಟ್ ಮಾಡಿದ್ದರು. ಇತ್ತೀಚೆಗೆ ಅಹ್ಮದಾಬಾದ್ ಏರ್ಪೋರ್ಟ್ ನಲ್ಲಿ ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ಏರ್ ಇಂಡಿಯಾ ಬೋಯಿಂಗ್ ವಿಮಾನ ಅಪಘಾತಕ್ಕೀಡಾಗಿತ್ತು. ಅದರಲ್ಲೂ ಪೈಲಟ್ ‘ಮೇಡೇ’ ಘೋಷಿಸಿದ್ದು ಕೆಲ ಹೊತ್ತಿನಲ್ಲೇ ದುರಂತ ಸಂಭವಿಸಿತ್ತು.
ಗುವಾಹಟಿಯಿಂದ ಗುರುವಾರ ಸಂಜೆ 4.40 ಕ್ಕೆ ಹೊರಟಿದ್ದ ಇಂಡಿಗೋ ವಿಮಾನವು 7.45ಕ್ಕೆ ಚೆನ್ನೈ ತಲುಪಬೇಕಿತ್ತು. ಆದರೆ ಇಂಧನ ಪ್ರಮಾಣ ತೀರಾ ಕಡಿಮೆ ಇದ್ದ ಕಾರಣ ಪೈಲಟ್ ತುರ್ತು ಸ್ಥಿತಿಯ ಎಲರ್ಟ್ ಸೂಚನೆ ನೀಡಿದ್ದರು. ವಿಪತ್ತಿನ ಕರೆ ಬಂದ ನಂತರ, ಬೆಂಗಳೂರು ಏರ್ಪೋರ್ಟ್ ಎಟಿಸಿ (ವಾಯು ಸಂಚಾರ ನಿಯಂತ್ರಣ) ಸಿಬ್ಬಂದಿಗೆ ಮಾಹಿತಿ ನೀಡಿದ್ದು ಕೂಡಲೇ ಅಲರ್ಟ್ ಆಗಿದ್ದರು. ವೈದ್ಯಕೀಯ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿದ್ದರು. ವಿಮಾನವು ಬಳಿಕ ರಾತ್ರಿ 8.20ಕ್ಕೆ ಬೆಂಗಳೂರು ಏರ್ಪೋರ್ಟ್ ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತು. ಕೇವಲ ಇಂಧನ ಕಡಿಮೆಯಾಗಿದ್ದೋ, ತಾಂತ್ರಿಕ ವೈಫಲ್ಯ ಎದುರಾಗಿತ್ತೋ ಎನ್ನುವ ಬಗ್ಗೆ ತನಿಖೆ ನಡೆಸಿದೆ. ಪೈಲಟ್ ಮೇ ಡೇ ಘೋಷಣೆ ಮಾಡಿದ್ದರಿಂದ ಪ್ರಯಾಣಿಕರು ಭಯಗೊಂಡು ಬಾಗಿಲ ಬಳಿ ನಿಂತುಕೊಂಡಿದ್ದರು. ಒಬ್ಬಾತ ಹೊರಕ್ಕೆ ಹಾರುವುದಕ್ಕೂ ರೆಡಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ, ಡಿಜಿಸಿಎ ಏರ್ ಇಂಡಿಯಾ ವಿಮಾನಗಳ ಸುರಕ್ಷತೆ ಬಗ್ಗೆ ಅತೀವ ಕಾಳಜಿ ವಹಿಸಿದ್ದು ಯಾವುದೇ ತಾಂತ್ರಿಕ ದೋಷ ಇರುವ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಲಾಗದು ಎಂದಿದೆ. ಅಲ್ಲದೆ, ಮೂವರು ಏರ್ ಇಂಡಿಯಾ ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಮಾಡಿದೆ. ಅಹ್ಮದಾಬಾದ್ ವಿಮಾನ ದುರಂತ ಬಳಿಕ ಏರ್ ಇಂಡಿಯಾ ವಿಮಾನಗಳನ್ನು ಪೂರ್ತಿ ತಪಾಸಣೆ ಮಾಡಲಾಗಿದ್ದು ಕಳೆದೊಂದು ವಾರದಲ್ಲಿ ಏಳು ವಿಮಾನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.
An IndiGo flight from Guwahati to Chennai with 168 passengers on board made an emergency landing at Bengaluru's Kempegowda International Airport (KIA) after the captain gave a 'Mayday' call -- a distress call via radio communication - citing insufficient fuel in the plane. The incident comes on the heels of an Air India plane crash in Ahmedabad that claimed the lives of 241 passengers, leaving one survivor. The Air India Boeing 787-8 Dreamliner had issued a Mayday call shortly before it crashed.
28-02-26 11:49 am
HK News Desk
ರಾಜ್ಯದಲ್ಲಿ ಆಸ್ತಿ ಖರೀದಿದಾರರಿಗೆ ಮತ್ತೊಂದು ಶಾಕ್ !...
27-02-26 10:17 pm
ಧಾರವಾಡ ಪ್ರತಿಭಟನೆ ಎಫೆಕ್ಟ್ ; ರಾಜ್ಯದಲ್ಲಿ 60 ಸಾವಿ...
26-02-26 10:01 pm
ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ, ಮಗಳು ನ್ಯಾ...
26-02-26 12:58 pm
Moral Policing, Mangalore: ಮೋರಲ್ ಪೊಲೀಸ್ ; ರೈಲ...
26-02-26 10:26 am
28-02-26 10:54 pm
HK News Desk
ಗಲ್ಫ್ ರಾಷ್ಟ್ರಗಳಿಗೆ ವಿಮಾನ ಸಂಚಾರ ವ್ಯತ್ಯಯ ; ಏರ್...
28-02-26 07:17 pm
ಇರಾನ್ ಮೇಲೆ ಮುಗಿಬಿದ್ದ ಅಮೆರಿಕ-ಇಸ್ರೇಲ್ ಪಡೆಗಳು ;...
28-02-26 05:28 pm
ತ್ರಿಷಾ ಬಿರುಗಾಳಿ ; ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್...
28-02-26 01:08 pm
ದೆಹಲಿ ಅಬಕಾರಿ ನೀತಿ ಹಗರಣ ; ಕೇಜ್ರಿವಾಲ್, ಸಿಸೋಡಿಯಾ...
27-02-26 03:55 pm
28-02-26 08:53 pm
HK News Desk
Mangaluru Muscat Flight: ಮಂಗಳೂರು- ಮಸ್ಕತ್ ನಡುವ...
27-02-26 08:59 pm
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
Leopard Mangalore, MLA Vedavyas Kamath: ಕದ್ರಿ...
27-02-26 08:40 pm
Justice Veerappa, Udupi: ಉಪ ಲೋಕಾಯುಕ್ತ ನ್ಯಾ.ವೀ...
27-02-26 08:36 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm