ಬ್ರೇಕಿಂಗ್ ನ್ಯೂಸ್
04-06-22 10:01 pm Mangalore Correspondent ಕರಾವಳಿ
ಮಂಗಳೂರು, ಜೂನ್ 4: ಕರಾವಳಿಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಕೊರತೆ ಇಲ್ಲ. ಶಿಕ್ಷಣಕ್ಕೂ ಕೊರತೆ ಇಲ್ಲ. ಹಾಗಿದ್ದರೂ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವುದು, ಅದರಲ್ಲಿ ತೇರ್ಗಡೆಯಾಗುವುದು ತುಂಬ ಕಡಿಮೆ. ಈ ಬಗ್ಗೆ ಅರಿತ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಂಗಳೂರಿನ ಪುರಭವನದಲ್ಲಿ ಐಎಎಸ್, ಐಪಿಎಸ್, ಇನ್ನಿತರ ಪೊಲೀಸ್ ಸೇವೆಗಳಿಗೆ ಹೇಗೆ ತಯಾರಾಗಬೇಕು, ಯಾವ ರೀತಿ ತಯಾರಿ ನಡೆಸಬೇಕು ಎನ್ನುವ ಬಗ್ಗೆ ಕಾರ್ಯಾಗಾರ ನಡೆಸಿದ್ದಾರೆ.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಪೊಲೀಸ್ ಕಮಿಷನರ್ ಶಶಿಕುಮಾರ್, ಕರಾವಳಿ ಜಿಲ್ಲೆಗಳು ಶಿಕ್ಷಣ ಕಾಶಿಯೆಂದೇ ಹೆಸರು ಮಾಡಿದೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆಗೆ ಹೋಲಿಸಿದರೆ ಈ ಭಾಗದ ಮಂದಿ ತುಂಬ ಹಿಂದೆ ಇದ್ದಾರೆ. ಇಂತಹ ಪರೀಕ್ಷೆಗಳನ್ನು ಹೇಗೆ ತಯಾರಿ ಎದುರಿಸಬೇಕು ಎನ್ನುವ ಬಗ್ಗೆಯೇ ಇಲ್ಲಿನ ಮಂದಿಗೆ ಮಾಹಿತಿ ಇಲ್ಲ. ವರ್ಷದ ಹಿಂದೆ ಒಂದು ತಿಂಗಳ ಕಾಲ ಆಸಕ್ತರಿಗಾಗಿ ಕಾರ್ಯಾಗಾರ ನಡೆಸಿದ್ದೆವು. ಕಾರ್ಯಾಗಾರಕ್ಕೆ ಪಾಲ್ಗೊಳ್ಳಲು 706 ಅರ್ಜಿಗಳು ಬಂದಿದ್ದವು. ಅದರಲ್ಲಿ ಅಂತಿಮಗೊಳಿಸಿ 100 ಮಂದಿಗೆ ತರಬೇತಿ ಕೊಡಲಾಗಿತ್ತು. ಆ ಪೈಕಿ 11 ಮಂದಿ ಪೊಲೀಸ್ ಕಾನ್ಸ್ ಟೇಬಲ್ ಆಗಿ ಆಯ್ಕೆಯಾಗಿದ್ದಾರೆ.
ಪರೀಕ್ಷೆಗೆ ತಯಾರಿ ನಡೆಸುವ ಅಭ್ಯರ್ಥಿಗಳು ಯಾವತ್ತೂ ತಮ್ಮ ಪ್ರಯತ್ನ ವೇಸ್ಟ್ ಅಂತ ಖಿನ್ನರಾಗಬಾರದು. ಕಠಿಣ ಪರಿಶ್ರಮ ಮಾಡಿದರೆ ಒಂದಲ್ಲೊಂದು ಒಂದು ಕಡೆ ಸಾಧನೆ ಮಾಡಿಯೇ ತೀರುತ್ತೀರಿ. ಯಾವತ್ತೂ ಉತ್ತಮ ಶ್ರಮಕ್ಕೆ ಪರ್ಯಾಯ ಅನ್ನುವುದೇ ಇಲ್ಲ. ಕರಾವಳಿ ಮಂದಿ ಸರಿಯಾಗಿ ಪ್ರಯತ್ನಪಟ್ಟರೆ 70 ಶೇಕಡಾ ಇಲ್ಲಿನ ಮಂದಿಯೇ ಪಾಸ್ ಆಗಬಹುದು ಎಂದು ಹೇಳಿದರು.
ವೈದ್ಯಕೀಯ ಓದಿ ಐಪಿಎಸ್ ಪೂರೈಸಿದ ಪುತ್ತೂರು ಡಿವೈಎಸ್ಪಿ ಗಾನ ಕುಮಾರ್ ಮಾತನಾಡಿ, ನನಗೆ ಫಾರೆಸ್ಟ್ ಅಧಿಕಾರಿ ಆಗಬೇಕೆಂಬ ಆಸಕ್ತಿಯಿಂದ ಒಂದು ವರ್ಷ ಕಾಲ ಓದಿದ್ದೆ. ಆನಂತರ ಪರೀಕ್ಷೆಗೆ ಕುಳಿತುಕೊಳ್ಳಬೇಕು ಎಂದಾಗ, ವೈದ್ಯರಾದವರು ಫಾರೆಸ್ಟ್ ಅಧಿಕಾರಿ ಆಗೋಕೆ ಅವಕಾಶ ಇಲ್ಲ ಎಂದು ನಿರಾಕರಿಸಿದ್ದಾರೆ. ನನಗೆ ನಿರಾಸೆ ಆಗಿತ್ತು. ಆದರೆ ಕೆಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದೆ. ಸತತ ಮೂರು ವರ್ಷಗಳ ಕಾಲ ಅಧ್ಯಯನ ನಡೆಸಿ, ಐಪಿಎಸ್ ಪಾಸ್ ಆಗಿದ್ದೆ. ನೀವು ಎಷ್ಟು ಸಮಯ ಓದಿದ್ರಿ ಅನ್ನೋದು ಮುಖ್ಯವಲ್ಲ. ಹೇಗೆ ತಯಾರಿ ನಡೆಸುತ್ತೀರಿ ಅನ್ನೋದು ಮುಖ್ಯವಾಗುತ್ತದೆ. ಕರ್ನಾಟಕದ ಈಗಿನ ಬೆಳವಣಿಗೆ, ಇತಿಹಾಸ, ಭೌಗೋಳಿಕ ವಿಚಾರಗಳೇ ಪ್ರಮುಖವಾದ್ದು. ಯುಪಿಎಸ್ಸಿ ಹಳೆ ಪ್ರಶ್ನೆ ಪತ್ರಿಕೆಗಳು, ಅದನ್ನು ಸತತವಾಗಿ ಉತ್ತರಿಸುವುದು, ಹಳೆಯದು ಮತ್ತು ಈಗಿನದನ್ನು ತಾಳೆ ಹಾಕಿ ನೋಡುವುದು ಹಾಗೂ ಪರೀಕ್ಷೆ ಸಂದರ್ಭದಲ್ಲಿ ಸೂಕ್ತವಾಗಿ ಅಧ್ಯಯನ ಮಾಡುವುದರಿಂದ ಪರೀಕ್ಷೆ ಗೆಲ್ಲಲು ಸಹಾಯವಾಗುತ್ತದೆ ಎಂದು ಹೇಳಿದರು.
ಎಸ್ಪಿ ಋಷಿಕೇಶ್ ಸೋನವಾಣೆ ಮಾತನಾಡಿ, ನೀವು ಏನಾಗಬೇಕೆಂದು ಬಯಸುತ್ತೀರಿ, ಅದರ ಬಗ್ಗೆ ಸ್ಪಷ್ಟ ಗುರಿ ಇಟ್ಟುಕೊಳ್ಳಬೇಕು. ಆನಂತರ ಅದಕ್ಕಾಗಿ ಕಠಿಣ ಶ್ರಮ ಹಾಕಬೇಕು. ನೀವು ಒಮ್ಮೆ ಐಪಿಎಸ್ ಪಾಸ್ ಆದಮಾತ್ರಕ್ಕೆ ಮುಗಿಯಲ್ಲ. ಸಮಾಜಕ್ಕಾಗಿ ಏನು ಕೊಡುಗೆ ಕೊಡಬಹುದು ಅನ್ನೋದನ್ನು ಆಲೋಚಿಸಬೇಕು. ಎರಡು ತೆರನಾದ ಪರೀಕ್ಷೆ ಆನಂತರ ಇಂಟರ್ವ್ಯೂ ಇರುತ್ತದೆ. ನಿದ್ದೆಗೆಟ್ಟು ಓದುವುದು ಒಳ್ಳೆಯದಲ್ಲ. ಏನು ಓದಬೇಕು ಅನ್ನೋದನ್ನು ಗುರಿ ಇಟ್ಟುಕೊಂಡು ಅಧ್ಯಯನ ಕೈಗೊಳ್ಳಬೇಕು ಎಂದರು.
ಬಂಟ್ವಾಳ ಎಎಸ್ಪಿ ಅವಿನಾಶ್ ರಜಪೂತ್ ಮಾತನಾಡಿ, ಓದಿದ ಮಾತ್ರಕ್ಕೆ ಪರೀಕ್ಷೆ ಪಾಸ್ ಆಗಲ್ಲ. ತುಂಬ ಶ್ರಮ ಪಡಬೇಕಾಗುತ್ತದೆ. ನಾನು ಐದನೇ ಬಾರಿಯ ಪ್ರಯತ್ನದಲ್ಲಿ ಪಾಸ್ ಆಗಿದ್ದೆ. ಪ್ರತಿ ಬಾರಿಯೂ ಸಂದರ್ಶನದ ವರೆಗೆ ಹೋಗುತ್ತಿದ್ದೆ. ಫೇಲ್ ಆಗುತ್ತಿದ್ದೆ. ಆಗೋದಿಲ್ಲ ಅಂತ ಇದ್ದುಬಿಟ್ಟಿದ್ದರೆ ಈ ಮಟ್ಟಿಗೆ ಬರಲು ಆಗುತ್ತಿರಲಿಲ್ಲ. ಸಾಮಾನ್ಯ ಮಧ್ಯಮ ವರ್ಗದವನಾಗಿದ್ದರೂ, ನನಗೆ ಪರೀಕ್ಷೆ ಪಾಸ್ ಮಾಡುವುದು ಕಷ್ಟವಾಗಲಿಲ್ಲ. ಅಬ್ಜೆಕ್ಟಿವ್ ಪ್ರಶ್ನೆಗಳನ್ನು ಉತ್ತರಿಸಲು ನಮ್ಮ ಸಮಾಜದಲ್ಲಿ ಏನೇನು ಆಗುತ್ತಿವೆ ಅನ್ನೋದನ್ನು ಓದಿ ತಿಳ್ಕೋಬೇಕು. ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮಂಗಳೂರು ನಗರ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಮ್ ಶಂಕರ್ ಸ್ವಾಗತಿಸಿ, ತನ್ನ ಅನುಭವ ಹೇಳಿಕೊಂಡರು. ಕೊನೆಯಲ್ಲಿ ಇತ್ತೀಚೆಗೆ ಸಬ್ ಇನ್ ಸ್ಪೆಕ್ಟರ್ ಹುದ್ದೆ ಗಿಟ್ಟಿಸಿಕೊಂಡವರು ತಮ್ಮ ಪರೀಕ್ಷೆ ಗೆದ್ದ ಅನುಭವಗಳನ್ನು ಹೇಳಿಕೊಂಡರು. ಕರ್ನಾಟಕ ಪೊಲೀಸ್ ಸೇವೆಯಲ್ಲಿ ಐದಾರು ವಿಭಾಗ ಇದೆ, ಎಲ್ಲದಕ್ಕೂ ಬೇರೆಯದೇ ಅರ್ಹತೆಗಳಿವೆ. ಪಿಯುಸಿ, ಪದವಿ, ಸೈನ್ಸ್ ಓದಿದವರಿಗೆ ಹೀಗೆ ಎಲ್ಲ ವಿಭಾಗದವರಿಗೂ ಆಯ್ಕೆಗಳಿವೆ. ಸೈನ್ಸ್ ಆದವರು ಫಾರೆನ್ಸಿಕ್ ವಿಭಾಗದಲ್ಲಿ, ಸಿಐಡಿ ವಿಭಾಗದ ಡಿಟೆಕ್ಟಿವ್ ಆಗಲು ಅವಕಾಶ ಇದೆ. ಇದರ ಬಗ್ಗೆ ತಿಳಿದುಕೊಂಡು ಪರೀಕ್ಷೆಗೆ ತಯಾರಿ ಆಗಬೇಕು ಎಂದು ಆರ್ ಎಸ್ಐ ಗಿರೀಶ್ ಹೇಳಿದರು.
City police organized an orientation programme for the aspirants of civil service examinations on Saturday June 4 at town hall under the aegis of police commissioner N Shashi Kumar.
06-05-25 11:23 pm
Bangalore Correspondent
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
Hassan Suicide, Police Constable Harrasment:...
05-05-25 01:30 pm
07-05-25 12:20 pm
HK News Desk
India strikes terror camps in Pak; ಪಾಕಿಸ್ತಾನದ...
07-05-25 09:54 am
ವಿಶ್ವಸಂಸ್ಥೆಯಲ್ಲಿ ಬೆತ್ತಲಾದ ಪಾಕ್ ; ಚೀನಾ ಬಿಟ್ಟು...
06-05-25 02:45 pm
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm