ಬ್ರೇಕಿಂಗ್ ನ್ಯೂಸ್
21-09-20 05:43 pm Mangalore Correspondent ಲೀಡರ್ಸ್ ರಿಪೋರ್ಟ್
ಮಂಗಳೂರು, ಸೆಪ್ಟಂಬರ್ 21: ಕೇಂದ್ರ ಸರಕಾರ ಕೃಷಿಕರ ಸ್ಥಿತಿ ಸುಧಾರಣೆ ನಿಟ್ಟಿನಲ್ಲಿ ಜಾರಿಗೆ ತಂದಿರುವ ತಿದ್ದುಪಡಿ ಮಸೂದೆಯಿಂದ ರೈತರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ವಿಪಕ್ಷಗಳು ಕೃಷಿಕರನ್ನು ತಪ್ಪು ದಾರಿಗೆಳೆಯುವ ಕೆಲಸ ಮಾಡುತ್ತಿದೆ. ಕಾಯ್ದೆ ಬಗ್ಗೆ ರೈತರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಮನೆ, ಮನೆಗೆ ಭೇಟಿ ನೀಡಿ ಅರ್ಥ ಮಾಡಿಸುವ ಪ್ರಯತ್ನ ಮಾಡುವುದಾಗಿ ರಾಜ್ಯ ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾರ್ಣಿಕ್, ನೂತನ ಮಸೂದೆ ಅನ್ವಯ ರೈತರಿಗೆ ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶವಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಕೇಂದ್ರಗಳಲ್ಲಿಯೇ ಮಾರಾಟ ಮಾಡಬೇಕಂತಿಲ್ಲ. ರಾಜ್ಯ ಅಥವಾ ಅಂತಾರಾಜ್ಯ ವ್ಯಾಪಾರಕ್ಕೆ ಉತ್ತೇಜನ ದೊರೆಯಲಿದೆ. ಆನ್ ಲೈನ್ ಮೂಲಕ ಖಾಸಗಿ ಕಂಪನಿಗಳ ಜೊತೆಗೂ ವ್ಯಾಪಾರ ಮಾಡುವುದಕ್ಕೆ ಅವಕಾಶ ಸಿಗಲಿದೆ ಎಂದು ಹೇಳಿದರು.

ಇನ್ನು ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗುವುದಿಲ್ಲ ಎನ್ನುವುದು ವಿಪಕ್ಷಗಳ ಆರೋಪ ಅಷ್ಟೇ. ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮುಂದೆಯೂ ಮುಂದುವರಿಯಲಿದೆ. ಅಲ್ಲದೆ, ಎಪಿಎಂಸಿ ವ್ಯವಸ್ಥೆಯೂ ಇದ್ದ ಹಾಗೇ ಮುಂದುವರಿಯುತ್ತದೆ. ಆದರೆ ರೈತರ ಉತ್ಪನ್ನಗಳ ಮಾರಾಟಕ್ಕೆ ಸ್ಪರ್ಧೆಯ ಅವಕಾಶ ಸಿಗುವುದರಿಂದ ಉತ್ತಮ ದರ ಸಿಗಲಿದೆ. ಇದರಿಂದ ರೈತನ ಆದಾಯವೂ ಸಹಜವಾಗಿ ಹೆಚ್ಚಲಿದೆ. ಇದರಿಂದ ಕೃಷಿ ಬೆಳೆಗಳ ರಫ್ತಿಗೂ ಉತ್ತೇಜನ ಸಿಗಲಿದೆ ಎಂದರು ಬೆಂಗಳೂರಿನಲ್ಲಿ ಕಾಯ್ದೆ ಬಗ್ಗೆ ಗೊತ್ತಿಲ್ಲದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯ ಹಿಂದೆ ವಿಪಕ್ಷಗಳ ಕೈವಾಡ ಇದೆ ಎಂದು ಪ್ರಶ್ನೆಯೊಂದಕ್ಕೆ ಕಾರ್ಣಿಕ್ ಉತ್ತರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಉಪಾಧ್ಯಕ್ಷೆ ಕಸ್ತೂರಿ ಪಂಜ ಉಪಸ್ಥಿತರಿದ್ದರು.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
02-11-25 05:13 pm
HK News Desk
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm