ಬ್ರೇಕಿಂಗ್ ನ್ಯೂಸ್
06-05-22 07:45 pm Source: Vijayakarnataka ಡಾಕ್ಟರ್ಸ್ ನೋಟ್
ಮಧುಮೇಹ ಹೊಂದಿರುವವರಿಗೆ ಪದೇ ಪದೇ ಹಸಿವಾಗುತ್ತಿರುತ್ತದೆ. ಆದ ಕಾರಣ ಅಡುಗೆ ಮನೆಯಲ್ಲಿ ಏನಾದರೂ ತಿನ್ನಲು ಮನಸ್ಸು ಹಾತೊರೆಯಬಹುದು. ವೈದ್ಯರು ಕೂಡ ಮಧುಮೇಹ ಹೊಂದಿರುವವರು ನಿಯಮಿತವಾಗಿ ದಿನಕ್ಕೆ 4 ಬಾರಿ ತಿನ್ನಬೇಕು ಎಂದು ಸಲಹೆ ನೀಡುತ್ತಾರೆ.
ಮಧುಮೇಹ ಬಂದಾಕ್ಷಣ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಶುರು ಮಾಡುತ್ತಾರೆ. ಈ ಸಮಯದಲ್ಲಿ ಸಂಪೂರ್ಣವಾಗಿ ಸಿಹಿ ತಿಂಡಿ, ಅನ್ನ, ಕೂಲ್ ಕೂಲ್ ಡ್ರಿಂಕ್ಸ್ಗಳಿಂದ ದೂರವಿರುತ್ತಾರೆ. ಒಟ್ಟಾರೆ ಆರೋಗ್ಯಕರವಾದ ಆಹಾರವನ್ನು ಸೇವಿಸಲು ಇಷ್ಟ ಪಡುತ್ತಾರೆ. ಬೆಳಗಿನ ಮತ್ತು ಮಧ್ಯಾಹ್ನದ ಊಟದ ನಂತರ ಸಂಜೆಯ ಸಮಯದಲ್ಲಿ ಹಸಿವಾಗುವುದು ಸಹಜ. ಆದರೆ ಏನು ತಿನ್ನಬೇಕು? ಎಂದು ಗೊಂದಲ ನಿಮ್ಮಲ್ಲಿದೆಯೇ? ಸಂಜೆಯ ಸಮಯದಲ್ಲಿ ಯಾವ ರೀತಿಯ ಸ್ನಾಕ್ಸ್ ತಿನ್ನಬೇಕು ಎಂದು ಗೊಂದಲದಲ್ಲಿರುವವರಿಗೆ ಲೇಖನವು ಮಾಹಿತಿ ನೀಡುತ್ತದೆ ನೋಡಿ.
ಹುರಿದ ಕಚ್ಚಾ ಬೀಜಗಳು ಮತ್ತು ಒಣ ಹಣ್ಣುಗಳು
ಹುರಿದ ಕಚ್ಚಾ ಬೀಜಗಳನ್ನು ಆರೋಗ್ಯಕರವಾದ ಆಹಾರಗಳಲ್ಲಿ ಒಂದಾಗಿದೆ. ಈ ಬೀಜಗಳಲ್ಲಿ ಕೆಲವು ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತವೆ. ಇಂತಹ ಆಹಾರಗಳು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದಿಲ್ಲ.
ಉದಾಹರಣೆಗೆ ಪಿಸ್ತಾ, ಬಾದಾಮಿ, ವಾಲ್ನಟ್ಸ್ ಮತ್ತು ಗೋಡಂಬಿಯಂತಹ ಒಣ ಹಣ್ಣುಗಳನ್ನು ಸಣ್ಣ ಉರಿಯಲ್ಲಿ ಹುರಿದು ಅದಕ್ಕೆ ಉಪ್ಪು ಮತ್ತು ಕಾರವನ್ನು ಸೇರಿಸಿ ಸಂಜೆಯ ಸಮಯದಲ್ಲಿ ಸೇವನೆ ಮಾಡಬಹುದು. ಇವು ಪೋಷಕಾಂಶಗಳಿಂದ ತುಂಬಿದ್ದು, ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುವುದರ ಮೂಲಕ ಹೆಚ್ಚು ಕಾಲ ತುಂಬಿರುವಂತೆ ಮಾಡುತ್ತದೆ. ಬೆರಳಣಿಕೆಯಷ್ಟು ಕುಂಬಳಕಾಯಿ ಬೀಜಗಳು ಅಥವಾ ಸೂರ್ಯಕಾಂತಿ ಬೀಜಗಳನ್ನು ಕೂಡ ನೀವು ಆಯ್ಕೆ ಮಾಡಿಕೊಳ್ಳಬಹುದು.
ಮಧುಮೇಹ ಹೊಂದಿರುವವರು ಉಪವಾಸ ಮಾಡಬಾರದು ಏಕೆ?
ಮಧುಮೇಹ ಹೊಂದಿರುವವರು ದೀರ್ಘಾವಧಿಯ ಉಪವಾಸವು ಕೆಲವು ಸಂದರ್ಭಗಳಲ್ಲಿ ಯಕೃತ್ತಿನ ಗ್ಲೂಕೋಸ್ ಅನ್ನು ಅಧಿಕವಾಗಿ ಉತ್ಪಾದಿಸುವಂತೆ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸಬಹುದು. ಹಾಗಾಗಿ ಸಂಜೆಯ ವೇಳೆ ಆರೋಗ್ಯಕರವಾದ ಲಘು ಆಹಾರವನ್ನು ಸೇವನೆ ಮಾಡಿ. ಯಾವುದೇ ಕಾರಣಕ್ಕೂ ಉಪವಾಸವನ್ನು ಮಾಡಬೇಡಿ.
ಆಲಿವ್
ಮಧುಮೇಹ ಹೊಂದಿರುವವರು ತಮ್ಮ ಆಹಾರದಲ್ಲಿ ಆಲಿವ್ ಅಥವಾ ಆಲಿವ್ ಎಣ್ಣೆಯನ್ನು ಬಳಸಿ ಸೇವನೆ ಮಾಡಬಹುದು. ಇದು ಪೋಷಕಾಂಶದಿಂದ ತುಂಬಿರುವ ಪದಾರ್ಥವಾಗಿದೆ.
ಕಡಿಮೆ ಕಾರ್ಬೋಹೈಡ್ರೇಟ್ಗಳು ಮತ್ತು ಹೆಚ್ಚಿನ ಕೊಬ್ಬಿನಂಶ ಹೊಂದಿರುವ ಆಲಿವ್ಗಳು, ಮಧುಮೇಹ ಟೈಪ್ 2 ಹೊಂದಿರುವವರಿಗೆ ಬಹಳ ಒಳ್ಳೆಯದು ಎಂದು ಸಂಶೋಧನೆಗಳೇ ಸಾಬೀತು ಪಡಿಸಿವೆ.
ವಾಸ್ತವವಾಗಿ, ಆಲಿವ್ ಎಣ್ಣೆಯು ತಾಮ್ರ, ಕಬ್ಬಿಣ, ಫೈಬರ್ ಮತ್ತು ವಿಟಮಿನ್ ಇ ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇಷ್ಟೇ ಅಲ್ಲ, ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿದೆ.
ಹಣ್ಣು ಮತ್ತು ತರಕಾರಿಗಳು
ಹಣ್ಣುಗಳ ರಸವನ್ನು ಸಕ್ಕರೆಯೊಂದಿಗೆ ಮಿಶ್ರಣ ಮಾಡಿ ಸೇವಿಸುವುದರ ಬದಲಾಗಿ ತಾಜಾ ಹಣ್ಣುಗಳನ್ನು ಸೇವನೆ ಮಾಡುವುದು ಬಹಳ ಒಳ್ಳೆಯದು. ಹಣ್ಣಿನ ರಸದಲ್ಲಿ ಉಪ್ಪು ಮತ್ತು ಪೆಪ್ಪರ್ ಪುಡಿಯನ್ನು ಬೆರಸಿ ಸಂಜೆಯ ಸಮಯದಲ್ಲಿ ನೀವು ಸೇವನೆ ಮಾಡಬಹುದು.
ಎಣ್ಣೆಯಲ್ಲಿ ಕರಿದ ಆಹಾರಗಳಿಂದ ಆದಷ್ಟು ದೂರವಿರಿ. ಹಸಿ ತರಕಾರಿಗಳನ್ನು ಸಲಾಡ್ನಂತೆ ಸೇವನೆ ಮಾಡಿ. ಪ್ರೋಟೀನ್ನಿಂದ ತುಂಬಿರುವ ತರಕಾರಿಗಳೊಂದಿಗೆ ಸಂಪೂರ್ಣ ಮೊಟ್ಟೆಯನ್ನು ತಿನ್ನಿರಿ. ಪ್ರೋಟೀನ್ ಸೇವನೆಯು ಹಸಿವಿನ ಕಡುಬಯಕೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ.
ಮೊಸರು
ಸಂಜೆಯ ಸಮಯದಲ್ಲಿ ತಾಜಾ ಮೊಸರಿನೊಂದಿಗೆ ಕಡಿಮೆ ಸಕ್ಕರೆಯುಳ್ಳ ಹಣ್ಣುಗಳನ್ನು ಸೇರಿಸಿ ಸೇವಿಸಿ. ಮೊಸರು ಮಧುಮೇಹ ಹೊಂದಿರುವವರಿಗೆ ನಿಸ್ಸಂದೇಹವಾಗಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಪ್ರೋಟೀನ್ನ ಅತ್ಯುತ್ತಮವಾದ ಮೂಲವಾಗಿದೆ.
ಮೊಸರು ಒತ್ತಡ, ನಿದ್ದಾಹೀನತೆಗೆ ಚಿಕಿತ್ಸೆ ನೀಡುತ್ತದೆ. ಹಾಗಾಗಿ ದೇಹದ ಆರೋಗ್ಯದ ಜೊತೆ ಜೊತೆಗೆ ಹಸಿವಿನ ಕಡುಬಯಕೆಯನ್ನು ನೀಗಿಸಲು ಇವು ಅತ್ಯುತ್ತಮವಾದ ಸಂಜೆಯ ಆಹಾರವಾಗಿದೆ.
Healthy Evening Snacks For Diabetics In Kannada.
20-08-25 10:54 pm
Bangalore Correspondent
Congress MP Sasikanth Senthil, Janardhana Red...
20-08-25 09:54 pm
Heart Attack, Mangalore, Bangalore: 3 ವರ್ಷದಲ್...
20-08-25 12:33 pm
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
20-08-25 10:56 pm
HK News Desk
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
20-08-25 10:19 pm
Mangalore Correspondent
Ananya–Sujatha Bhatt Case, Lawyer Manjunath:...
20-08-25 04:28 pm
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm