ಬ್ರೇಕಿಂಗ್ ನ್ಯೂಸ್
03-05-22 07:32 pm Source: Vijayakarnataka ಡಾಕ್ಟರ್ಸ್ ನೋಟ್
ಒಮ್ಮೆ ಮಧುಮೇಹ ವ್ಯಕ್ತಿಗೆ ಬಂದರೆ ಮತ್ತೆ ಹೋಗುವ ಮಾತೇ ಇಲ್ಲ. ಮಧುಮೇಹವನ್ನು ನಿಯಂತ್ರಿಸಬಹುದೇ ವಿನಃ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಶುಗರ್ ಅಥವಾ ಮಧುಮೇಹ ಸಾಮಾನ್ಯವಾದ ಕಾಯಿಲೆ ಎಂದು ಮಾತ್ರ ನಿರ್ಲಕ್ಷ್ಯ ಧೋರಣೆಯನ್ನು ಹೊಂದದಿರಿ.
ಏಕೆಂದರೆ ಅತಿಯಾದ ಮಧುಮೇಹದ ಪರಿಸ್ಥಿತಿಯು ಪಾರ್ಶ್ವವಾಯು, ಹೃದ್ರೋಗದಂತಹ ಅಪಾಯವನ್ನು ತಂದೊಡ್ಡಬಹುದು. ಮಧುಮೇಹ ಹೊಂದಿರುವವರು ಮೊದಲು ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿರ್ವಹಿಸಲು ಪ್ರಯತ್ನಿಸಬೇಕು. ಬಹುತೇಕರಿಗೆ ಮಧುಮೇಹಕ್ಕೆ ಯಾವ ರೀತಿಯ ಹಣ್ಣುಗಳು ಉತ್ತಮ ಎಂಬ ಗೊಂದಲದಲ್ಲಿರುತ್ತಾರೆ.
ಲೇಖನದಲ್ಲಿ ಹೇಳಲಾಗುವ ಹಣ್ಣುಗಳು ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿರುವುದು ಮಾತ್ರವಲ್ಲದೆ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ.ಹಾಗಾದರೆ ಯಾವೆಲ್ಲಾ ಹಣ್ಣುಗಳನ್ನು ಮಧುಮೇಹ ಹೊಂದಿರುವವರು ನಿಸ್ಸಂಶಯವಾಗಿ ಸೇವನೆ ಮಾಡಬಹುದು ಎಂಬುದನ್ನು ಲೇಖನದಲ್ಲಿ ನೀಡಲಾಗಿದೆ ಓದಿ.
ಪೀಚ್ ಹಣ್ಣು
ರುಚಿಕರವಾದ ಪೀಚ್ ಹಣ್ಣು ಮಧುಮೇಹ ಹೊಂದಿರುವವರಿಗೆ ಬಹಳ ಒಳ್ಳೆಯದು. ಈ ಹಣ್ಣಿನಲ್ಲಿ ಫೈಬರ್ನ ಅತ್ಯುತ್ತಮವಾದ ಮೂಲವನ್ನು ಹೊಂದಿದೆ. ಅಲ್ಲದೆ, ವಿಟಮಿನ್ ಸಿ, ವಿಟಮಿನ್ ಎ ಮತ್ತು ಪೊಟ್ಯಾಶಿಯಮ್ನಿಂದ ತುಂಬಿದೆ.
ಪೀಚ್ ಹಣ್ಣಿನಲ್ಲಿ ಜೈವಿಕ ಸಕ್ರಿಯ ಸಂಯುಕ್ತವು ಅಡಕವಾಗಿದೆ. ಇದು ಮಧುಮೇಹದ ಪರಿಣಾಮ ಉಂಟಾಗುವ ಬೊಜ್ಜು ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳ ವಿರುದ್ಧ ಹೋರಾಡುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಸ್ವಾದಿಷ್ಟವಾದ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಉರಿಯೂತವನ್ನು ಕಡಿಮೆ ಮಾಡಿ, ಜೀರ್ಣಕ್ರಿಯೆಯನ್ನು ಸುಧಾರಿಸಲು ಉತ್ತೇಜಿಸುತ್ತದೆ.
ನೇರಳೆ ಹಣ್ಣು
ನೇರಳೆ ಹಣ್ಣು ಮಧುಮೇಹ ಹೊಂದಿರುವವರಿಗೆ ಬಹಳ ಒಳ್ಳೆಯದು ಎಂದು ನೀವು ಈಗಾಗಲೇ ತಿಳಿದಿದ್ದೀರಿ. ಶತಮಾನಗಳಿಂದಲೂ ಮಧುಮೇಹಕ್ಕೆ ರಾಮಬಾಣವಾಗಿ ನೇರಳೆ ಹಣ್ಣನ್ನು ಆಯುರ್ವೇದದಲ್ಲಿ ಬಳಸಲಾಗುತ್ತಿದೆ. ಈ ರಸಭರಿತ ಹಣ್ಣಿನಲ್ಲಿ ಸಕ್ಕರೆಯ ಅಂಶ ಕಡಿಮೆ ಇದ್ದು, ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಪರಿಣಾಮಕಾರಿಯಾಗಿ ತಗ್ಗಿಸುತ್ತದೆ. ಪ್ರತಿನಿತ್ಯ ಮಧುಮೇಹಿಗಳು ನಿಸ್ಸಂದೇಹವಾಗಿ ಈ ಹಣ್ಣನ್ನು ಸೇವನೆ ಮಾಡಬಹುದು.ನೇರಳೆ ಹಣ್ಣಿನಲ್ಲಿರುವ ಸಂಯುಕ್ತವು ಹಲವಾರು ಸೂಕ್ಷ್ಮ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ.
ಸೇಬು
ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರಿಂದ ದೂರವಿರಬಹುದು ಎಂಬ ಮಾತು ಕೇಳಿರಬಹುದು ಅಲ್ಲವೇ? ಇದು ಅಕ್ಷರಶಃ ನಿಜ. ಸೇಬು ಫೈಬರ್ನ ಉತ್ತಮವಾದ ಮೂಲವನ್ನು ಹೊಂದಿದೆ. ಹೆಚ್ಚಿನ ಪೋಷಕಾಂಶಗಳು ಹೊಂದಿರುವ ಸೇಬನ್ನು ಮಧುಮೇಹ ಹೊಂದಿರುವವರು ಸೇವನೆ ಮಾಡಬಹುದು.
ಕರಗುವ ಮತ್ತು ಕರಗದ ಫೈಬರ್ ಎರಡನ್ನೂ ಹೊಂದಿರುವ ಸೇಬುಗಳು ಮಲಬದ್ಧತೆಯನ್ನು ತಡೆಯಲು ಉತ್ತೇಜಿಸುತ್ತದೆ. ಅಲ್ಲದೆ, ಇದರಲ್ಲಿರುವ ಫೈಬರ್ ದೀರ್ಘಕಾಲದವರೆಗೆ ನಿಮ್ಮ ಹಸಿವನ್ನು ನಿಗ್ರಹಿಸುವ ಮೂಲಕ ಹೆಚ್ಚು ತಿನ್ನುವುದು ತಪ್ಪಿಸುತ್ತದೆ.
ಪಪ್ಪಾಯಿ
ಪಪ್ಪಾಯಿ ಅತ್ಯಂತ ಆರೋಗ್ಯಕರವಾದ ಹಣ್ಣುಗಳಲ್ಲಿ ಒಂದಾಗಿದೆ. ಮಧುಮೇಹ ಹೊಂದಿರುವವರು ಪಪ್ಪಾಯಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ವರದಿಗಳ ಪ್ರಕಾರ, ಪಪ್ಪಾಯಿ ಹಣ್ಣು ದೇಹದ ಮೇಲೆ ಹೈಪೊಗ್ಲಿಸಿಮಿಕ್ ಪರಿಣಾಮವನ್ನು ಬೀರಬಹುದು. ಅಲ್ಲದೆ, ಈ ಹಣ್ಣಿನಲ್ಲಿ ಫ್ಲೇವನಾಯ್ಡ್ಗಳಿದ್ದು, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಉತ್ತೇಜಿಸುತ್ತದೆ.
ಪಪ್ಪಾಯಿಯು ಕಡಿಮೆ ಕ್ಯಾಲೋರಿ ಹಣ್ಣಾಗಿದ್ದು, ವಿಟಮಿನ್ ಬಿ, ಫೋಲೇಟ್, ಪೊಟ್ಯಾಶಿಯಂ ಮತ್ತ ಮೆಗ್ನೀಸಿಯಮ್ನಿಂದ ತುಂಬಿದೆ. ಒಟ್ಟಾರೆ ಇರದಲ್ಲಿರುವ ಉತ್ಕರ್ಷಣ ನಿರೋಧಕಗಳು ಜೀವಕೋಶದ ಹಾನಿಯನ್ನು ತಡೆಯುತ್ತದೆ ಮತ್ತು ತೂಕವನ್ನು ನಿರ್ವಹಿಸುತ್ತದೆ.
ಪೇರಲ ಹಣ್ಣು
ಸೇಬಿಗಿಂತ ದ್ವಿಗುಣ ಪೋಷಕಾಂಶಗಳನ್ನು ಹೊಂದಿರುವ ಪೇರಲ ಹಣ್ಣು ಮಧುಮೇಹ ಹೊಂದಿರುವವರಿಗೆ ಉತ್ತಮವಾದ ಹಣ್ಣಾಗಿದೆ. ಈ ಹಣ್ಣಿನಲ್ಲಿ ಫೈಬರ್ ತುಂಬಿದೆ. ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಈ ಹಣ್ಣು ನಿಧಾನವಾಗಿ ಜೀರ್ಣಸಿಕೊಳ್ಳಬಹುದಾಗಿದೆ. ಪೇರಲ ಹಣ್ಣು ಕಡಿಮೆ ಸಕ್ಕರೆಯ ಅಂಶವನ್ನು ಹೊಂದಿರುವುದರಿಂದ ಮಧುಮೇಹಿಗಳಿಗೆ ಒಳ್ಳೆಯದು.
ಹೆಚ್ಚಿನ ಪೊಟ್ಯಾಶಿಯಂ ಹೊಂದಿರುವ ಈ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲ ಅಪಾಯಕಾರಿ ಕಾಯಿಲೆಗಳನ್ನು ಹುಟ್ಟಿನಲ್ಲಿಯೇ ತಡೆಯುತ್ತದೆ.
5 Fruit Will Reduce Blood Sugar Level Naturally In Kannada.
20-08-25 10:54 pm
Bangalore Correspondent
Congress MP Sasikanth Senthil, Janardhana Red...
20-08-25 09:54 pm
Heart Attack, Mangalore, Bangalore: 3 ವರ್ಷದಲ್...
20-08-25 12:33 pm
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
20-08-25 10:56 pm
HK News Desk
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
20-08-25 10:19 pm
Mangalore Correspondent
Ananya–Sujatha Bhatt Case, Lawyer Manjunath:...
20-08-25 04:28 pm
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm