ಬ್ರೇಕಿಂಗ್ ನ್ಯೂಸ್
02-04-22 09:33 pm Source: Vijayakarnataka ಡಾಕ್ಟರ್ಸ್ ನೋಟ್
ಭಾರತಿಯ ಅಡುಗೆ ಮನೆ ಒಂದು ರಿತಿಯಲ್ಲಿ ಔಷಧಗಳ ಆಗರ ಎಂದೇ ಹೇಳಬಹುದು. ಪ್ರತಿದಿನ ಅಡುಗೆಯಲ್ಲಿ ಬಳಸುವ ಒಂದೊಂದು ಗಿಡಮೂಲಿಕೆಗಳೂ ಕೂಡ ಹಲವು ಆರೋಗ್ಯ ಗುಣಗಳನ್ನು ಹೊಂದಿರುತ್ತವೆ. ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ಅನಾದಿ ಕಾಲದಿಂದಲೂ ಹಲವು ಆರೋಗ್ಯ ಸಮಸ್ಯೆಗಳಿಗೆ ಗಿಡಮೂಲಿಕೆಗಳನ್ನೇ ಬಳಸಲಾಗುತ್ತಿದೆ. ಅಂತಹ ಗಿಡಮೂಲಿಕೆಗಳಲ್ಲಿ ಮಜ್ಜಿಗೆ ಹುಲ್ಲು ಅಥವಾ ನಿಂಬೆಹುಲ್ಲು ಕೂಡ ಒಂದು. ದಕ್ಷಿಣ ಭಾರತ ಮತ್ತು ಶ್ರೀಲಂಕಾ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ನಿಂಬೆಹುಲ್ಲುಗಳು ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಮೆಡಿಕಲ್ ಟುಡೆ ವರದಿಯ ಪ್ರಕಾರ ಸರಿಸುಮಾರು 55 ಬಗೆಯ ನಿಂಬೆಹುಲ್ಲು ಕಾಣಸಿಗುತ್ತವೆ. ಆದರೆ ಪೂರ್ವ ಮತ್ತು ಪಶ್ಚಿಮ ಭಾರತದಲ್ಲಿ ಕಾಣಸಿಗುವ ನಿಂಬೆಹುಲ್ಲು ಮಾತ್ರ ಬಳಕೆಗೆ ಯೋಗ್ಯ ಎನ್ನಲಾಗಿದೆ. ಈ ನಿಂಬು ಹುಲ್ಲಿನ ಚಹಾ ಆರೋಗ್ಯಕ್ಕೆ ಹೆಚ್ಚು ಉತ್ತಮ ಎಂದು ಹಲವು ಸಂಶೋಧನೆಗಳು ತಿಳಿಸಿವೆ. ಅದೇ ಪ್ರಕಾರ ಆಯುರ್ವೇದದಲ್ಲಿಯೂ ನಿಂಬೆಹುಲ್ಲು ಅಥವಾ ಸ್ಥಳೀಯವಾಗಿ ಮಜ್ಜಿಗೆ ಹುಲ್ಲು ಎಂತಲೂ ಕರೆಯುವ ಈ ಮೂಲಿಕೆಯ ಬಗ್ಗೆ ಉಲ್ಲೇಖಿಸಲಾಗುತ್ತದೆ. ಹಾಗಾದರೆ ಈ ನಿಂಬೆಹುಲ್ಲಿನ ಚಹಾದ ಸೇವನೆಯಿಂದಾಗುವ ಪ್ರಯೋಜನಗಳೇನು? ಇಲ್ಲಿದೆ ನೋಡಿ ಮಾಹಿತಿ.
ಒತ್ತಡ ಮತ್ತು ಆತಂಕ ದೂರವಾಗುತ್ತದೆ
ಬದಲಾದ ಜೀವನಶೈಲಿಯಲ್ಲಿ ಕೆಲಸ, ಸಾಂಕ್ರಾಮಿಕ ರೋಗ ಸೇರಿದಂತೆ ಹಲವು ಕಾರಣಗಳಿಂದ ಒತ್ತಡ, ಆತಂಕಗಳು ದಿನನಿತ್ಯದ ಭಾಗವಾಗಿದೆ. ಒತ್ತಡದಿಂದ ಹೊರಬರಲು ಹಲವು ವಿಧಾನಗಳನ್ನು ಹುಡಕುತ್ತೇವೆ. ಇದಕ್ಕೆ ನಿಂಬೆಹುಲ್ಲಿನ ಚಹಾ ಸಹಕಾರಿಯಾಗಿದೆ. ನಿಂಬೆಹುಲ್ಲಿನ ಚಹಾದ ಸೇವನೆಯಿಂದ ಒತ್ತಡ ನಿವಾರಣೆಯಾಗಿ ಮನಸ್ಸು ನಿರಾಳವಾಗುತ್ತದೆ. ಉದ್ದವಾದ ಎಲೆಗಳನ್ನು ಹೊಂದಿರುವ ಈ ಮೂಲಿಕೆ ನಿಂಬೆಹಣ್ಣಿನ ಘಮವನ್ನೇ ಹೊಂದಿದೆ. ಇದೇ ಕಾರಣಕ್ಕೆ ಇದಕ್ಕೆ ನಿಂಬೆಹುಲ್ಲು ಎನ್ನುತ್ತಾರೆ. ಇದರ ಸುವಾಸನೆ ಒತ್ತಡವನ್ನು ನಿವಾರಿಸುತ್ತದೆ.
ರಕ್ತಪರಿಚಲನೆಗೆ ಸಹಕಾರಿ:
ದೇಹ ಆರೋಗ್ಯಯುತವಾಗಿರಲು ರಕ್ತಪರಿಚಲನೆ ಮುಖ್ಯವಾಗಿರುತ್ತದೆ. ರಕ್ತ ಶುದ್ಧವಾಗಿದ್ದರೆ ರೋಗಗಳು ಸುಲಭವಾಗಿ ದೇಹವನ್ನು ಆಕ್ರಮಿಸಲು ಸಾಧ್ಯವಿಲ್ಲ. ದೇಹದಲ್ಲಿನ ರಕ್ತವನ್ನು ಶುದ್ಧಗೊಳಿಸಲು ನಿಂಬೆಹುಲ್ಲಿನ ಚಹಾ ಅತ್ಯುತ್ತಮ ಪದಾರ್ಥವಾಗಿದೆ. ದಿನಕ್ಕೊಂದು ಬಾರಿಯಾದರೂ ನಿಂಬೆಹುಲ್ಲಿನ ಚಹಾದ ಸೇವನೆ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ವಯಸ್ಸಾದಂತೆ ರಕ್ತ ಹೆಪ್ಪುಗಟ್ಟದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇಂತಹ ಸಮಸ್ಯೆಗಳನ್ನು ತಡೆಯಲು ಲೆಮನ್ ಗ್ರಾಸ್ ಟೀ ಸಹಾಯಕ ಎನ್ನುತ್ತದೆ ವೈದ್ಯಲೋಕ.
ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣ
ಜಂಕ್ ಫುಡ್, ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದೆ ಇರುವುದರಿಂದ ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಣೆಯಾಗುತ್ತದೆ. ನಿಂಬೆಹುಲ್ಲಿನ ಚಹಾದ ಸೇವನೆಯಿಂದ ದೇಹದಲ್ಲಿನ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದಾಗಿದೆ. ಅಲ್ಲದೆ ನಿಂಬೆಹುಲ್ಲಿನ ಚಹಾದ ಸೇವನೆಯಿಂದ ತಲೆನೋವನ್ನು ಕಡಿಮೆ ಮಾಡಬಹುದಾಗಿದೆ. ಈ ಕುರಿತು ಇನ್ನು ಹೆಚ್ಚಿನ ಅಧ್ಯಯನಗಳನ್ನು ನಡೆಸುವ ಅಗತ್ಯವಿದೆ. ಆದರೆ ಪ್ರಾಥಮಿಕ ಹಂತದ ಸಂಶೋಧನೆಯ ವರದಿಯು ನಿಂಬೆಹುಲ್ಲು ತಲೆನೋವಿನ ನಿವಾರಣೆಗೆ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿ ಎಂದಿದೆ.
ಹಲ್ಲುಗಳನ್ನು ಸದೃಢವಾಗಿಸುತ್ತದೆ
ದಂತ ಆರೋಗ್ಯ ದೇಹದ ಉಳಿದ ಭಾಗಗಳಂತೆ ಅತೀ ಮುಖ್ಯವಾಗಿದೆ. ಹೆಚ್ಚು ಸಿಹಿ, ಗುಟಕಾ ಪದಾರ್ಥಗಳ ಸೇವನೆಯಿಂದ ಹಲ್ಲಿನಲ್ಲಿ ಹುಳುಕು ಕಾಣಿಸಿಕೊಳ್ಳುತ್ತದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಸಿಗುವ ಈ ನಿಂಬೆಹುಲ್ಲು ಹಲ್ಲು ಮತ್ತು ವಸಡಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ನಿಂಬುಹುಲ್ಲನ್ನು ಬಾಯಿಗೆ ಹಾಕಿ ಜಗಿದರೆ ಬ್ಯಾಕ್ಟೀರಿಯಾ, ಕ್ಯಾವಿಟೀಸ್ ಸಮಸ್ಯೆಯಿಂದ ದೂರವಿರಬಹುದಾಗಿದೆ. ಈ ಕುರಿತು ಫುಡ್ ಕೆಮಿಸ್ಟ್ರಿ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ವರದಿ ತಿಳಿಸಿದೆ.
ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ
ಅಸಮತೋಲಿತ ಆಹಾರ ಸೇವನೆಯಿಂದ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಉಂಟಾಗಬಹುದು. ಇದಕ್ಕೆ ನಿಂಬೆಹುಲ್ಲಿನ ಚಹಾ ಪರಿಹಾರ ನೀಡುತ್ತದೆ. ನಿಂಬುಹುಲ್ಲಿನ ಚಹಾದ ಸೇವನೆಯಿಂದ ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ. ಜೊತೆಗೆ ಕಿಡ್ನಿ ಆರೋಗ್ಯವನ್ನೂ ಇದು ಉತ್ತಮವಾಗಿಡುತ್ತದೆ. ಪ್ರತಿದಿನ ಎರಡು ಬಾರಿಯಾದರೂ ನಿಂಬೆಹುಲ್ಲಿನ ಚಹಾದ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ದೇಹಕ್ಕೆ ಬೇಕಾದ ದ್ರವದ ಪ್ರಮಾಣವನ್ನು ನಿಂಬೆ ಹುಲ್ಲಿನ ಚಹಾ ನೀಡುತ್ತದೆ. ಇದರಿಂದ ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತದೆ, ಮೂತ್ರಪಿಂಡ ಸುರಕ್ಷಿತವಾಗಿರುತ್ತದೆ ಎಂದು ಹೇಳಲಾಗುತ್ತದೆ.
ನಿಂಬೆಹುಲ್ಲಿನ ಚಹಾ ಮಾಡುವುದು ಹೇಗೆ?
ನಿಂಬೆ ಹುಲ್ಲಿನ ಉದ್ದವಾದ 2 ಎಲೆಗಳನ್ನು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿ. ನಂತರ ಒಂದು ಪಾತ್ರೆಗೆ 2 ಲೋಟ ನೀರು ಹಾಕಿ ಚೆನ್ನಾಗಿ ಕುದಿಸಿ. ಬಳಿ ಅದಕ್ಕೆ ಕತ್ತರಿಸಿಟ್ಟ ನಿಂಬೆಹುಲ್ಲನ್ನು ಹಾಕಿ 5 ನಿಮಿಷ ಕುದಿಸಿ. ಗಾಢ ಬಣ್ಣದ ನಿಂಬೆ ಹುಲ್ಲಿನ ಟೀ ಸಿದ್ಧವಾಗುತ್ತದೆ. ಅಗತ್ಯವಿದ್ದರೆ ಸಕ್ಕರೆ ಹಾಕಿಕೊಂಡು ಪ್ರತಿದಿನ ಸೇವಿಸಬಹುದಾಗಿದೆ.
Here Is The Benefits Of Lemongrass Tea.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 08:29 pm
Mangalore Correspondent
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am