ಬ್ರೇಕಿಂಗ್ ನ್ಯೂಸ್
01-04-22 08:45 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ನೈಸರ್ಗಿಕವಾಗಿ ಸಿಗುವ ಹಣ್ಣುಗಳು ಹಾಗೂ ತರಕಾರಿಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎನ್ನುವ ವಿಚಾರ ನಮಗೆಲ್ಲಾ ಗೊತ್ತೇ ಇದೆ. ಹೀಗಾಗಿ ಇವುಗಳನ್ನು ನಿಯಮಿತವಾಗಿ ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿ ಕೊಂಡು ಹೋಗುವುದರಿಂದ ಅನೇಕ ರೀತಿಯ ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆಯಬಹುದು.
ಇದಕ್ಕೆ ಮುಖ್ಯ ಕಾರಣ, ಇದರಲ್ಲಿರುವ ಪೋಷಕಾಂಶಗಳು, ವಿಟಮಿನ್ಗಳು ಹಾಗೂ ಖನಿಜಾಂಶಗಳು ನಮ್ಮ ದೇಹಕ್ಕೆ ಬೇಕಾಗುವಷ್ಟು ಪ್ರಮಾಣದಲ್ಲಿ ಸಿಗುವುದರಿಂದ, ನಮ್ಮ ಆರೋಗ್ಯ ವೃದ್ಧಿಸುವಲ್ಲಿ ತುಂಬಾನೇ ಸಹಕಾರಿಯಾಗುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ತನ್ನಲ್ಲಿ ಹಲವಾರು ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಬೀಟ್ರೂಟ್ ಜ್ಯೂಸ್ನ ಆರೋಗ್ಯಕಾರಿ ಪ್ರಯೋಜನಗಳು ಏನು ಎಂಬುದನ್ನು ನೋಡೋಣ...
ಬೀಟ್ರೂಟ್ನ ಆರೋಗ್ಯ ಪ್ರಯೋಜನಗಳು
ನೋಡಲು ಹಾಗೂ ಕತ್ತರಿಸಿದಾಗ ಕಡುಕೆಂಪು ಬಣ್ಣ ಎನ್ನುವ ಒಂದೇ ಕಾರಣಗಳು ಬಿಟ್ಟರೆ, ಆರೋಗ್ಯದ ವಿಷ್ಯಕ್ಕೆ ಬಂದಾಗ, ಈ ತರಕಾರಿಯನ್ನು ಎಷ್ಟು ಹೊಗಳಿದರೂ ಸಾಲದು! ತನ್ನಲ್ಲಿ ಹೇರಳವಾಗ ವಿಟಮಿನ್ ಸಿ, ಮ್ಯಾಂಗನೀಸ್, ಪೊಟಾಶಿಯಂ, ಕಬ್ಬಿನಾಂಶ, ಕ್ಯಾಲ್ಸಿಯಂ ಹಾಗೂ ನಾರಿನಾಂಶವನ್ನು ಒಳಗೊಂಡಿರುವ ಈ ತರಕಾರಿ, ಮನುಷ್ಯನ ಆರೋಗ್ಯ ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಸಾಮಾನ್ಯವಾಗಿ ರುಚಿಯಾಗಿರುವ ಈ ತರಕಾರಿಯನ್ನು ಅನೇಕರು ಹಸಿಯಾಗಿಯೇ ಸೇವಿಸುತ್ತಾರೆ, ಇನ್ನು ಕೆಲವರು ಇದರ ಪಲ್ಯ ಅಥವಾ ಸಾಂಬರ್ ಮಾಡಿ ಸೇವಿಸಿದರೆ, ಇಲ್ಲಾಂದ್ರೆ ವೆಜಿಟೇಬಲ್ ಸಲಾಡ್ ರೀತಿ ಮಾಡಿ ಸೇವಿಸುತ್ತಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಈ ತರಕಾರಿಯನ್ನು ಹೇಗೆ ಸೇವಿಸಿದರೂ, ಆರೋಗ್ಯಕ್ಕೆ ಸಿಗುವ ಪೋಷಕಾಂಶಗಳು ಮಾತ್ರ ಕಡಿಮೆ ಆಗುವುದಿಲ್ಲ! ಅದರಲ್ಲೂ ಬೀಟ್ರೂಟ್ನ ಜ್ಯೂಸ್ ಕೂಡ ಇಂದಿನ ದಿನಗಳಲ್ಲಿ ತುಂಬಾ ಜನಪ್ರಿಯವಾಗುತ್ತಿದೆ. ಈ ಜ್ಯೂಸ್ ನ್ನು ಕುಡಿದರೆ ಅದರಿಂದ ಕೂಡ ದೇಹಕ್ಕೆ ಹಲವಾರು ರೀತಿಯ ಲಾಭಗಳು ಸಿಗುವುದು.
ಲೈಂಗಿಕ ಸಮಸ್ಯೆಗೆ
ಸಂಸಾರದಲ್ಲಿ ಗಂಡ ಹೆಂಡತಿ ಸುಖವಾಗಿ ಜೀವನ ನಡೆಸಬೇಕಾದರೆ ಅವರ ನಡುವೆ ಪ್ರೀತಿ, ವಿಶ್ವಾಸದ ಜೊತೆಗೆ ಲೈಂಗಿಕ ಸಂಬಂಧಗಳು ಕೂಡ ಅಷ್ಟೇ ಸರಾಗವಾಗಿ ಕೂಡಿರಬೇಕು. ಒಂದು ವೇಳೆ ಸಂಬಂಧದಲ್ಲಿ ಇದರ ಕೊರತೆ ಕಾಡುತ್ತದೆಯೋ, ಅಂತಹ ಸಂಬಂಧದಲ್ಲಿ ಬಿರುಕು ಮೂಡಲು ಶುರುವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದಾಗಿ ಪುರುಷರು ಹಾಗೂ ಮಹಿಳೆಯರು ಇಬ್ಬರಲ್ಲಿಯೂ ಲೈಂಗಿಕ ಸಮಸ್ಯೆಗಳು ಕಂಡುಬರುತ್ತಿವೆ. ಅದರಲ್ಲೂ ಮಧ್ಯ ವಯಸ್ಸು ದಾಟಿದ ಪುರುಷರಲ್ಲಿ ಈ ನಿಮಿರು ದೌರ್ಬಲ್ಯ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ, ಆದರೆ ಆಹಾರ ಪದ್ಧತಿಯಲ್ಲಿ ಹಾಗೂ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದುಕೊಂಡರೆ, ಖಂಡಿತವಾಗಿಯೂ ಈ ಲೈಂಗಿಕ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು.
ಹೀಗಾಗಿ ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರು, ದಿನನಿತ್ಯ ಒಂದು ಲೋಟ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದಕ್ಕೆ ಮುಖ್ಯ ಕಾರಣ ಬೀಟ್ರೋಟ್ ನಲ್ಲಿ ನೈಟ್ರೇಟ್ ಅಂಶ ಹೆಚ್ಚಾಗಿದ್ದು, ಇದು ದೇಹದ ಒಳಭಾಗದಲ್ಲಿ ನೈಟ್ರಿಕ್ ಆಕ್ಸೈಡ್ ಆಗಿ ಬದಲಾಗುತ್ತದೆ, ಅಷ್ಟೇ ಅಲ್ಲದೇ ಸಾಮಾನ್ಯವಾಗಿ ವಯಸ್ಸು ದಾಟಿದ ಬಳಿಕ ಕಾಡುವ ಪುರುಷರ ನಿಮಿರುವಿಕೆಯ ಸಮಸ್ಯೆಯನ್ನು ದೂರವಾಗುತ್ತದೆ.
ರಕ್ತಹೀನತೆ ಸಮಸ್ಯೆ
ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಿಗೆ ರಕ್ತಹೀನತೆ ಅಥವಾ ಅನಿಮಿಯಾ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ಈ ಸಮಸ್ಯೆಯನ್ನು ನಿವಾರಣೆ ಮಾಡಲು ಹಲವಾರು ರೀತಿಯ ಔಷಧಿಗಳು ಲಭ್ಯವಿದ್ದರೂ ಕೆಲವೊಂದು ಮನೆಮದ್ದುಗಳ ಸಹಾಯದಿಂದ, ದೇಹಕ್ಕೆ ಯಾವುದೇ ಅಡ್ಡಪರಿಣಾಮಗಳು ಇಲ್ಲದೇ ಇದನ್ನು ನೈಸರ್ಗಿಕವಾಗಿ ನಿವಾರಣೆ ಮಾಡುವುದು.
ಹಾಗಾಗಿ ಕಬ್ಬಿಣದ ಅಂಶ ಹೆಚ್ಚಿರುವ ಬೀಟ್ರೂಟ್ ಜ್ಯೂಸ್ ಅನ್ನು ನಿಯಮಿತವಾಗಿ ದಿನಾ ಕುಡಿಯುವುದರಿಂದ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ವಿಶೇಷವಾಗಿ ಇದರಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಅಧಿಕ ಪ್ರಮಾಣದಲ್ಲಿ ಇರುವುದರಿಂದ, ಕೆಂಪು ರಕ್ತ ಕಣಗಳು ದೇಹದ ವಿವಿಧ ಭಾಗಗಳಿಗೆ ಆಮ್ಲಜನಕ ವನ್ನು ಪೂರೈಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಗರ್ಭಿಣಿ ಮಹಿಳೆಯರಿಗೆ ಕೂಡ ಇದು ಹೆಚ್ಚು ಅನುಕೂಲಕಾರಿ ಎಂದು ಹೇಳಲಾಗುತ್ತದೆ
ರಕ್ತದ ಒತ್ತಡದ ನಿಯಂತ್ರಣಕ್ಕೆ
ಇತ್ತೀಚಿನ ಬದಲಾದ ಜೀವನಶೈಲಿ ಹಾಗೂ ಆಹಾರಪದ್ಧತಿಗಳಿಂದಾಗಿ ರಕ್ತದೊತ್ತಡದ ಸಮಸ್ಯೆ ಬಹುತೇಕ ಜನರ ಪ್ರಾಣ ಹಿಂಡುತ್ತಿದೆ. ಹೀಗಾಗಿ ವೈದ್ಯರ ಸಲಹೆಗಳನ್ನು ಪಡೆಯುವುದರ ಜೊತೆಗೆ ಕೆಲವೊಂದು ಮನೆಮದ್ದುಗಳನ್ನು ಅನುಸರಿಸುವುದರ ಮೂಲಕ ಇದನ್ನು ಆರಂಭದಲ್ಲಿಯೇ ನಿಯಂತ್ರಿಸಬಹುದು.
ನಿಮಗೆ ಗೊತ್ತಿರಲಿ, ರಕ್ತದ ಒತ್ತಡವನ್ನು ಹೆಚ್ಚು ಅಥವಾ ಕಡಿಮೆ ಆಗದಂತೆ ನೋಡಿಕೊಳ್ಳುವುದು ಬಹು ಮುಖ್ಯ. ಒಂದು ವೇಳೆ ಇದರಲ್ಲಿ ವ್ಯತ್ಯಾಸವಾದರೆ ಅದರಿಂದ ಮುಂಬರುವ ದಿನಗಳಲ್ಲಿ ಸಾಕಷ್ಟು ತೊಂದರೆಯನ್ನು ಎದುರಿಸಬೇಕಾಗಿ ಬರುತ್ತದೆ.
ಮುಖ್ಯವಾಗಿ ಇದರಿಂದ ಹೃದಯಕ್ಕೆ ಅಪಾಯ ಉಂಟಾಗುವ ಸಂಭವ ಜಾಸ್ತಿ ಇರುತ್ತದೆ. ಹೀಗಾಗಿ ಪ್ರತಿದಿನವೂ ಒಂದೊಂದು ಲೋಟ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ, ಈ ಸಮಸ್ಯೆಯನ್ನು ನಿಯಂತ್ರಿಸಬಹುದು.
ಮಧುಮೇಹ ಸಮಸ್ಯೆ ಇರುವವರಿಗೆ
ನಮಗೆಲ್ಲಾ ಗೊತ್ತೇ ಇರುವ ಹಾಗೆ ಮಧುಮೇಹ ಸಮಸ್ಯೆ ಒಮ್ಮೆ ಬಂದರೆ ಹೋಗುವ ಕಾಯಿಲೆಯಲ್ಲ. ಆರೋಗ್ಯ ತಜ್ಞರೇ ಹೇಳುವ ಪ್ರಕಾರ ಈ ಕಾಯಿಲೆ ಒಮ್ಮೆ ಬಂದರೆ ಅದರಿಂದ ಸಂಪೂರ್ಣವಾಗಿ ಮುಕ್ತಿ ಪಡೆಯಲು ಸಾಧ್ಯವಿಲ್ಲ ಕೇವಲ ಅದನ್ನು ನಿಯಂತ್ರಣ ಮಾಡಿಕೊಳ್ಳುವ ಪ್ರಯತ್ನ ಮಾಡಬಹುದು ಅಷ್ಟೇ. ಹಾಗಾಗಿ ಈ ಕಾಯಿಲೆ ಬರುವ ಮುಂಚೆ ಎಚ್ಚರಿಕೆ ತೆಗೆದುಕೊಳ್ಳುವುದು ಒಳ್ಳೆಯದು. ಇದಕ್ಕಾಗಿ ಕಟ್ಟುನಿಟ್ಟಾದ ಆಹಾರ ಪದ್ಧತಿ ಮತ್ತು ವ್ಯಾಯಾಮ ಇದಕ್ಕೆ ಪರಿಹಾರ ಎಂದು ಹೇಳಬಹುದು.
ಇನ್ನು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣಕ್ಕೆ ತರುವಲ್ಲಿ ಬೀಟ್ರೂಟ್ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕೆ ಕಾರಣ ಬೀಟ್ರೂಟ್ನಲ್ಲಿ ನೈಸರ್ಗಿಕವಾಗಿ ಕಂಡು ಬರುವ ಸಕ್ಕರೆ ಅಂಶವನ್ನು ಈ ಕಾಯಿಲೆಯನ್ನು ನಿಯಂತ್ರಿಸುವ ಎಲ್ಲಾ ಗುಣಲಕ್ಷಣಗಳನ್ನು ಒಳಗೊಂಡಿದೆ. ಇದು ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಿ ಆಕ್ಸಿಡೇಟಿವ್ ಒತ್ತಡವನ್ನು ತಡೆಯುತ್ತದೆ. ಮಧುಮೇಹ ಇರುವಂತಹ ರೋಗಿಗಳಿಗೆ ಬೀಟ್ರೋಟ್ ಒಂದು ವರದಾನ ಎಂದು ಹೇಳಬಹುದು.
ಸೌಂದರ್ಯ ಹೆಚ್ಚಿಸಲು
Know The Surprising Health Benefits Of Drinking Beetroot Everyday.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 08:29 pm
Mangalore Correspondent
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am