ಬ್ರೇಕಿಂಗ್ ನ್ಯೂಸ್
31-03-22 10:54 pm Source: Vijayakarnataka ಡಾಕ್ಟರ್ಸ್ ನೋಟ್
ತಾಟಿ ಹಣ್ಣು ಅಥವಾ ತಾಳೆ ಹಣ್ಣು ಎಂದು ಕರೆಯಲ್ಪಡುವ ಈ ಹಣ್ಣು ತುಂಬಾ ಅಪರೂಪದ ಹಣ್ಣಾಗಿದೆ. ಈ ಹಣ್ಣನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟ ಪಟ್ಟು ತಿನ್ನುತ್ತಾರೆ.
ಬೇಸಿಗೆ ಕಾಲದಲ್ಲಿ ಎಳೆನೀರಿನಂತೆ ಬಾಯಾರಿಕೆಯನ್ನು ನೀಗಿಸಲು ಸಹಾಯ ಮಾಡುವ ಈ ತಾಟಿ ಹಣ್ಣು ರಸಭರಿತವಾದ ಹಣ್ಣುಗಳಲ್ಲಿ ಒಂದಾಗಿದೆ. ಈ ರುಚಿಕರವಾದ ಹಣ್ಣು ಅರೆಪಾರದರ್ಶಕ ಜೆಲ್ಲಿ ಮತ್ತು ಅದರ ತಂಪಾಗಿಸುವ ಪರಿಣಾಮದಿಂದಾಗಿ ಇದನ್ನು ಐಸ್ ಸೇಬು ಎಂದು ಕರೆಯುತ್ತಾರೆ.
ಇದು ಖನಿಜಾಂಶಗಳು, ಸೋಡಿಯಂ ಮತ್ತು ಪೊಟ್ಯಾಸಿಯಮ್ನಿಂದ ತುಂಬಿದೆ. ಬೇಸಿಗೆಯ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿರುವ ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ.
ತಾಟಿ ಹಣ್ಣಿನಲ್ಲಿ ಏನಿದೆ?
100 ಗ್ರಾಂ ತಾಟಿ ಹಣ್ಣಿನಲ್ಲಿ 43 ಕ್ಯಾಲೋರಿಗಳನ್ನು ಒಳಗೊಂಡಿದ್ದು, ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. 11 ಗ್ರಾಂ ಕಾರ್ಬೋಹೈಡ್ರೇಟ್ಗಳು, ಕ್ಯಾಲ್ಸಿಯಂ ಮತ್ತು ಫೈಟೊನ್ಯೂಟ್ರಿಯಂಟ್ಗಳಲ್ಲಿ ಸಮೃದ್ಧವಾಗಿದೆ.
ಇದರಲ್ಲಿ ಫೈಬರ್, ಪ್ರೋಟೀನ್, ವಿಟಮಿನ್ ಸಿ, ಎ, ಕೆ, ಬಿ 7 ಮತ್ತು ಕಬ್ಬಿಣದಿಂದ ಸಮೃದ್ಧವಾಗಿದೆ. ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಈ ಹಣ್ಣು ಆರೋಗ್ಯಕ್ಕೆ ಹೇಗೆಲ್ಲಾ ಲಾಭದಾಯಕವಾಗಿದೆ ಎಂಬುದನ್ನು ಮುಂದೆ ತಿಳಿಯಿರಿ.
ಬೇಸಿಗೆಯಲ್ಲಿ ಅತ್ಯುತ್ತಮವಾದ ಹಣ್ಣು
ಈ ತಾಟಿ ಹಣ್ಣು ಅತ್ಯುತ್ತಮವಾದ ಶೀತಕವಾಗಿ ಕಾರ್ಯ ನಿರ್ವಹಿಸುವುದರಿಂದ ಬೇಸಿಗೆಯ ಸಮಯದಲ್ಲಿ ದೇಹವನ್ನು ನೈಸರ್ಗಿಕವಾಗಿ ತಂಪಾಗಿಸುತ್ತದೆ. ಅಲ್ಲದೆ, ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಎಳೆನೀರಿನಂತೆ ನಿಮ್ಮ ಬಾಯಾರಿಕೆಯನ್ನು ನೀಗಿಸಿ, ದಿನವಿಡೀ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ.
ಸಹಜವಾಗಿ ತಾಟಿ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಸೋಡಿಯಂ ಮತ್ತು ಪೊಟ್ಯಾಶಿಯಮ್ ಖನಿಜಗಳಿಂದ ಹೇರಳವಾಗಿದೆ. ಈ ಕಾರಣದಿಂದ ದೇಹದಲ್ಲಿ ದ್ರವ ಮತ್ತು ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಉತ್ತೇಜಿಸುತ್ತದೆ. ಒಟ್ಟಾರೆ ಬೇಸಿಗೆ ಕಾಲದಲ್ಲಿ ನಿಮ್ಮ ನಿರ್ಜಲೀಕರಣ ಮತ್ತು ಆಯಾಸದ ಸಮಸ್ಯೆಯನ್ನು ತಡೆಗಟ್ಟುತ್ತದೆ.
ಹೊಟ್ಟೆಯ ಸಮಸ್ಯೆಗಳಿಗೆ ಒಳ್ಳೆಯದು
ಬೇಸಿಗೆಯ ಕಾಲದಲ್ಲಿ ಈ ಹಣ್ಣನ್ನು ನಿಯಮಿತವಾಗಿ ಪ್ರತಿನಿತ್ಯ ಸೇವನೆ ಮಾಡುವುದರಿಂದ ಹೊಟ್ಟೆಯನ್ನು ಮಾತ್ರವಲ್ಲ, ದೇಹವನ್ನು ತಂಪಾಗಿಸುತ್ತದೆ. ನಿಮ್ಮ ಹೊಟ್ಟೆಯ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಕೂಡ ಈ ತಾಟಿ ಹಣ್ಣು ಬಹಳ ಉಪಯುಕ್ತವಾಗಿದೆ.
ಸಾಮಾನ್ಯವಾಗಿ ಜೀರ್ಣಕಾರಿ ಸಮಸ್ಯೆಗಳು, ಮಲಬದ್ಧತೆಗೆ ಈ ಹಣ್ಣು ನೈಸರ್ಗಿಕವಾದ ಪರಿಹಾರವಾಗಿದೆ. ಕರುಳಿನ ಚಲನೆಯನ್ನು ಉತ್ತೇಜಿಸಿ, ಆಮ್ಲೀಯತೆ ಮತ್ತು ಹೊಟ್ಟೆಯ ಹುಣ್ಣುಗಳನ್ನು ಸಹ ನಿವಾರಿಸುತ್ತದೆ.
ಗರ್ಭಿಣಿಯರು ಕೂಡ ತಮ್ಮ ಗರ್ಭಾವಸ್ಥೆಯಲ್ಲಿ ತಾಟಿ ಹಣ್ಣನ್ನು ಸೇವನೆ ಮಾಡಬಹುದು. ಇದು ವಾಕರಿಕೆಯನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ.
ಚರ್ಮ ಸಮಸ್ಯೆಯನ್ನು ನಿವಾರಿಸುತ್ತದೆ
ಈ ತಾಟಿ ಹಣ್ಣಿನಲ್ಲಿ ಹಲವಾರು ಫೈಟೊಕೆಮಿಕಲ್ಗಳ ಉಪಸ್ಥಿತಿ, ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಚರ್ಮದ ಅನೇಕ ಸಮಸ್ಯೆಗಳಾದ ಬೇಸಿಲಿನ ಗುಳ್ಳೆಗಳು, ತುರಿಕೆಯ ಚರ್ಮ, ವಯಸ್ಸಾಗುವಿಕೆಯನ್ನು ನಿಯಂತ್ರಿಸಲು ಈ ಹಣ್ಣು ತುಂಬಾ ಪ್ರಯೋಜನಕಾರಿಯಾಗಿದೆ.
ತುರಿಕೆ ಅಥವಾ ದದ್ದುಗಳನ್ನು ನೀವು ಹೊಂದಿದ್ದರೆ ತಾಟಿ ಹಣ್ಣನ್ನು ತುರಿಕೆಯ ಪ್ರದೇಶಕ್ಕೆ ಅನ್ವಯಿಸುವುದರಿಂದ ಹಿತವಾದ ಅನುಭವವನ್ನು ನೀವು ಪಡೆಯುತ್ತೀರಿ.
ತೂಕವನ್ನು ನಿಯಂತ್ರಿಸಿಕೊಳ್ಳಬಹುದು
ಈ ಹಣ್ಣಿನಲ್ಲಿ ನೀರಿನ ಉಪಸ್ಥಿತಿ ಇರುವುದರಿಂದ ನೀವು ನಿಸ್ಸಂದೇಹವಾಗಿ ನಿಮ್ಮ ಡಯಟ್ ಚಾರ್ಟ್ನಲ್ಲಿ ಸೇರಿಸಬಹುದು. ಇದು ದೇಹದ ತೂಕವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ದೀರ್ಘಕಾಲದವರೆಗೆ ನಿಮ್ಮ ಹೊಟ್ಟೆಯನ್ನು ತುಂಬಿಸಿ, ಹಸಿವಿನ ಕಡುಬಯಕೆಯನ್ನು ನಿಯಂತ್ರಿಸುತ್ತದೆ. ಆದರೆ ವಿಪರೀತವಾಗಿ ಸೇವನೆ ಮಾಡುವುದನ್ನು ತಪ್ಪಿಸಿ. ದಿನಕ್ಕೆ 3 ರಿಂದ 4 ಹಣ್ಣುಗಳನ್ನು ನೀವು ತಿನ್ನಬಹುದು.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಅನೇಕ ಕಾಯಿಲೆಗಳಿಂದ ದೂರ ಉಳಿಯಲು ದೇಹಕ್ಕೆ ಜೀವಸತ್ವಗಳು ಮತ್ತು ಖನಿಜಗಳ ಅಗತ್ಯವಿದೆ. ಹಾಗಾಗಿಯೇ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವನೆ ಮಾಡಬೇಕು. ಆ ಪಟ್ಟಿಯಲ್ಲಿ ತಾಟಿ ಹಣ್ಣು ಕೂಡ ಒಂದು. ಇದು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಗೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿದೆ.
ಮಾರಣಾಂತಿಕ ಕಾಯಿಲೆಗಳಾದ ಯಕೃತ್ತಿನ ಹಾನಿ, ಕ್ಯಾನ್ಸರ್ ಮತ್ತು ಹೃದ್ರೋಗವನ್ನು ತಡೆಯುತ್ತದೆ. ಈ ಹಣ್ಣಿನಲ್ಲಿ ಪೊಟ್ಯಾಶಿಯಮ್ ಹೇರಳವಾಗಿರುವುದರಿಂದ ಯಕೃತ್ತಿನ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.
Reason Why Ice Apple Should Not Skip In Summer Season.
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 11:01 am
HK News Desk
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
20-08-25 04:28 pm
Mangalore Correspondent
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
ಧರ್ಮಸ್ಥಳ ಪ್ರಕರಣ ನೆಪದಲ್ಲಿ ಬಿಎಲ್ ಸಂತೋಷ್ ಅವಹೇಳನ...
19-08-25 11:07 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm