ಬ್ರೇಕಿಂಗ್ ನ್ಯೂಸ್
16-12-21 11:02 am Source: Boldsky Kannada ಡಾಕ್ಟರ್ಸ್ ನೋಟ್
ಚಳಿಗಾಲದ ಹಣ್ಣುಗಳಲ್ಲಿ ನೆಲ್ಲಿಕಾಯಿಯೂ ಒಂದು. ಈ ಋತುವಿನಲ್ಲಿ ಬೆಳೆಯುವ ಹಸಿರು ಹಣ್ಣು ಕಿತ್ತಳೆಗಿಂತ 20 ಪಟ್ಟು ಹೆಚ್ಚು ವಿಟಮಿನ್ ಸಿಯಲ್ಲಿ ಸಮೃದ್ಧವಾಗಿರುವ ನೆಲ್ಲಿಕಾಯಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನೆಲ್ಲಿಕಾಯಿಯನ್ನು ತಿನ್ನುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದ್ದರೂ, ಅದು ಎಲ್ಲರಿಗೂ ಸೇವನೆಗೆ ಸುರಕ್ಷಿತವಲ್ಲ. ಕೆಲವು ನಿರ್ದಿಷ್ಟ ಸಮಸ್ಯೆಯಿಂದ ಬಳಲುತ್ತಿರುವವರು, ಈ ಕಟುವಾದ ಹಣ್ಣನ್ನು ತಪ್ಪಿಸುವುದು ಉತ್ತಮ. ಹಾಗಾದರೆ, ಅದು ಯಾರು ಎಂಬುದನ್ನು ಇಲ್ಲಿ ನೋಡೋಣ.
ನೆಲ್ಲಿಕಾಯಿಯನ್ನು ಯಾರು ಸೇವಿಸಬಾರದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಹೈಪರ್ ಅಸಿಡಿಟಿಯಿಂದ ಬಳಲುತ್ತಿರುವವರು:
ನೆಲ್ಲಿಕಾಯಿ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದ್ದು, ಇದು ಹಣ್ಣಿನ ಆಮ್ಲೀಯ ಸ್ವಭಾವಕ್ಕೆ ಕೊಡುಗೆ ನೀಡುವ ಪೋಷಕಾಂಶವಾಗಿದೆ. ಈ ಹಣ್ಣನ್ನು ತಿನ್ನುವುದು ಎದೆಯುರಿ ಕಡಿಮೆ ಮಾಡಲು ಒಳ್ಳೆಯದು ಎಂದು ಅಧ್ಯಯನಗಳು ಸೂಚಿಸುತ್ತವೆ, ಆದರೆ ಹೈಪರ್ಆಸಿಡಿಟಿಯಿರುವವರಿಗೆ ಇದು ಒಳ್ಳೆಯದಲ್ಲ. ಹೈಪರ್ ಆಸಿಡಿಟಿಯ ಇತಿಹಾಸವಿರುವವರು ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ತಿನ್ನುವುದರಿಂದ ಹೊಟ್ಟೆಯ ಒಳಪದರ ಕೆರಳಬಹುದು, ಗ್ಯಾಸ್ಟಿಕ್ ಸಮಸ್ಯೆ ಉದಯಿಸಬಹುದು.
ರಕ್ತ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿರುವವರು:
ನೆಲ್ಲಿಕಾಯಿ ಆಂಟಿಪ್ಲೇಟ್ಲೆಟ್ ಗುಣಗಳನ್ನು ಹೊಂದಿದೆ. ಅಂದರೆ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯಬಹುದು. ಸಾಮಾನ್ಯ ಜನರಿಗೆ, ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುವುದು, ಆದರೆ ಈಗಾಗಲೇ ರಕ್ತ-ಸಂಬಂಧಿತ ಅಸ್ವಸ್ಥತೆಗಳಿಂದ ಬಳಲುತ್ತಿರುವವರಿಗೆ ಇದು ಒಳ್ಳೆಯದಲ್ಲ. ಅದರ ಆಂಟಿಪ್ಲೇಟ್ಲೆಟ್ ಗುಣಲಕ್ಷಣಗಳಿಂದಾಗಿ, ಇದು ನಿಮ್ಮ ರಕ್ತವನ್ನು ತೆಳುಗೊಳಿಸುತ್ತದೆ ಮತ್ತು ಸಾಮಾನ್ಯ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ರಕ್ತಸ್ರಾವದ ಕಾಯಿಲೆಯಿಂದ ಬಳಲುತ್ತಿರುವವರೂ ಸಹ, ಆಹಾರದಲ್ಲಿ ನೆಲ್ಲಿಕಾಯಿ ಸೇರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ರಕ್ತದಲ್ಲಿ ಕಡಿಮೆ ಸಕ್ಕರೆಯ ಮಟ್ಟ ಇರುವವರು:
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನೆಲ್ಲಿಕಾಯಿ ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ನಿಂದ ಬಳಲುತ್ತಿರುವ ಜನರಿಗೆ ನೆಲ್ಲಿಕಾಯಿ ಪ್ರಯೋಜನಕಾರಿಯಾಗಿದ್ದರೂ, ಆಗಾಗ್ಗೆ ಕಡಿಮೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೊಂದಿರುವ ಅಥವಾ ಮಧುಮೇಹ ವಿರೋಧಿ ಔಷಧಿಗಳನ್ನು ಸೇವಿಸುವವರಿಗೆ ಇದು ಒಳ್ಳೆಯದಲ್ಲ. ಆದ್ದರಿಂದ, ಮಧುಮೇಹ ರೋಗಿಗಳಿಗೆ ಆಂಟಿ ಡಯಾಬಿಟಿಕ್ ಔಷಧಿಗಳೊಂದಿಗೆ ನೆಲ್ಲಿಕಾಯಿ ಸೇವಿಸಿದಾಗ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಸಾಮಾನ್ಯವಾಗಿ ಸಲಹೆ ನೀಡಲಾಗುತ್ತದೆ.
ಗರ್ಭಿಣಿಯಾಗಿದ್ದರೆ ಅಥವಾ ಹಾಲುಣಿಸುತ್ತಿರುವವರು:
ನೆಲ್ಲಿಕಾಯಿ ಹಲವಾರು ಪೌಷ್ಟಿಕ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ. ಇನ್ನೊಂದು ಸತ್ಯವೆಂದರೆ ಇದರ ಅಧಿಕ ಸೇವನೆಯು ಹೊಟ್ಟೆಯುಬ್ಬರ, ಅತಿಸಾರ ಮತ್ತು ನಿರ್ಜಲೀಕರಣದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ರೋಗಲಕ್ಷಣಗಳು ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆಯರಿಗೆ ಕಷ್ಟಕರವಾಗಬಹುದು ಎಂದು ನಂಬಲಾಗಿದೆ. ಹಾಲುಣಿಸುವ ಸಮಯದಲ್ಲಿ ಮತ್ತು ಗರ್ಭಾವಸ್ಥೆಯಲ್ಲಿ ತಿನ್ನುವುದು ಹೇಗೆ ಹಾನಿಕಾರಕ ಎಂಬುದರ ಕುರಿತು ಹೆಚ್ಚಿನ ಅಧ್ಯಯನಗಳಿಲ್ಲದಿದ್ದರೂ, ಅದನ್ನು ತಪ್ಪಿಸಲು ಅಥವಾ ಅದನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಆರೋಗ್ಯ ಸಲಹೆಗಾರರೊಂದಿಗೆ ಮಾತನಾಡಲು ಸಲಹೆ ನೀಡಲಾಗುತ್ತದೆ.
ಒಣ ನೆತ್ತಿ ಮತ್ತು ಚರ್ಮವನ್ನು ಹೊಂದಿರುವವರು:
ನೀವು ಒಣ ನೆತ್ತಿ ಅಥವಾ ಒಣ ಚರ್ಮವನ್ನು ಹೊಂದಿದ್ದರೆ, ಹೆಚ್ಚು ನೆಲ್ಲಿಕಾಯಿ ಸೇವಿಸುವುದರಿಂದ ಸಮಸ್ಯೆ ಉಲ್ಬಣವಾಗಬಹುದು. ಇದು ಕೂದಲು ಉದುರುವಿಕೆ, ತುರಿಕೆ, ತಲೆಹೊಟ್ಟು ಮತ್ತು ಇತರ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು. ಹಣ್ಣಿನಲ್ಲಿರುವ ಕೆಲವು ಸಂಯುಕ್ತಗಳು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಆದ್ದರಿಂದ, ನೆಲ್ಲಿಕಾಯಿ ಸೇವಿಸಿದ ನಂತರ ಸಾಕಷ್ಟು ನೀರು ಕುಡಿಯಲು ಸೂಚಿಸಲಾಗುತ್ತದೆ.
People who should not have amla (gooseberry). Some compounds in the fruit may also lead to dehydration. So, it is recommended to drink lots of water after consuming amla.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
16-08-25 03:34 pm
HK News Desk
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
16-08-25 04:45 pm
Mangalore Correspondent
Expert PU College Announces ‘Xcelerate 2025’...
15-08-25 09:04 pm
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
16-08-25 11:25 am
HK News Desk
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am