ಬ್ರೇಕಿಂಗ್ ನ್ಯೂಸ್
27-09-21 05:17 pm Shreeraksha, Boldsky ಡಾಕ್ಟರ್ಸ್ ನೋಟ್
ಒಂದು ನಾಣ್ಯಕ್ಕೆ ಎರಡು ಮುಖವಿದ್ದಂತೆ, ಪ್ರತಿಯೊಂದು ವಿಷಯದಲ್ಲೂ ಒಳ್ಳೆಯದು, ಕೆಟ್ಟದ್ದು ಎಂಬುದು ಇದ್ದೇ ಇರುತ್ತದೆ. ಅದೇ ಸಾಲಿಗೆ ಸೇರುವ ಒಂದು ತರಕಾರಿ ಅಂದ್ರೆ ಬೀಟ್ರೂಟ್. ಇದು ಒಂದು ಆರೋಗ್ಯಕರ ತರಕಾರಿ ಎಂಬುದು ಎಲ್ಲರಿಗೂ ತಿಳಿದೇ ಇದೆ. ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದಾಗ ಬೀಟ್ರೂಟ್ ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ. ಬೀಟ್ರೂಟ್ನಲ್ಲಿ ಸಾಕಷ್ಟು ಪ್ರಮಾಣದ ಮೆಗ್ನೀಸಿಯಮ್, ಸೋಡಿಯಂ, ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಬೀಟೈನ್ ಇದ್ದು, ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ.
ಆದರೆ ಇಂತಹ ಪೋಷಕಾಂಶಭರಿತವಾಗಿರುವ ಈ ತರಕಾರಿಯ ಇನ್ನೊಂದು ಮುಖದಂತೆ ಅಡ್ಡಪರಿಣಾಮಗಳು ಸಹ ಇವೆ. ಹಾಗಾದರೆ ಬನ್ನಿ, ಬೀಟ್ರೂಟ್ನ್ನು ಯಾರು ಸೇವಿಸಬಾರದು? ಹೆಚ್ಚು ತಿಂದರೆ ಏನಾಗುತ್ತದೆ ಎಲ್ಲವನ್ನು ನೋಡಿಕೊಂಡು ಬರೋಣ.
ಕಡಿಮೆ ರಕ್ತದೊತ್ತಡ ರೋಗಿಗೆ ಅಪಾಯಕಾರಿ:
ಅಧಿಕ ರಕ್ತದೊತ್ತಡ ಹೊಂದಿರುವ ಜನರಿಗೆ ಇದು ಪ್ರಯೋಜನಕಾರಿಯಾಗಿದ್ದರೂ, ಕಡಿಮೆ ರಕ್ತದೊತ್ತಡ ಹೊಂದಿರುವ ಜನರಿಗೆ ಇದು ಒಳ್ಳೆಯದಲ್ಲ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಬೀಟ್ರೂಟ್ನಲ್ಲಿರುವ ಅಂಶಗಳು ಅದನ್ನ ಗುಣಪಡಿಸಬಹುದು. ಆದರೆ ಬೀಟ್ರೂಟ್ ಸೇವನೆಯು ಕಡಿಮೆ ರಕ್ತದೊತ್ತಡಕ್ಕೆ ಸಾಕಷ್ಟು ಹಾನಿಕಾರಕವಾಗಿದೆ. ಆದ್ದರಿಂದ, ನೀವು ಕಡಿಮೆ ರಕ್ತದೊತ್ತಡದ ಸಮಸ್ಯೆಗಳನ್ನು ಹೊಂದಿದ್ದರೆ ನಿಮ್ಮ ದೈನಂದಿನ ಆಹಾರದಲ್ಲಿ ಬೀಟ್ರೂಟ್ ಸೇವನೆಯನ್ನು ತಪ್ಪಿಸಲು ಸೂಚಿಸಲಾಗುತ್ತದೆ.
ಮೂತ್ರಪಿಂಡದಲ್ಲಿ ಕಲ್ಲು :
ನಿಮಗೆ ಕಿಡ್ನಿ ಸ್ಟೋನ್ ಸಮಸ್ಯೆ ಇಲ್ಲದಿದ್ದರೆ ಏನು ಸಮಸ್ಯೆಯಾಗುವುದಿಲ್ಲ. ಆದರೆ ಆಕ್ಸಲೇಟ್, ಬೀಟ್ಗೆಡ್ಡೆಗಳು, ಬೀಟ್ ಗ್ರೀನ್ಸ್ ಮತ್ತು ಬೀಟ್ರೂಟ್ ಪೌಡರ್ ಸೇವಿಸುವವರು ಮೂತ್ರಪಿಂಡದ ಕಲ್ಲುಗಳಿಗೆ ಒಳಗಾಗುವ ಸಾಧ್ಯತೆಯಿದೆ. ಆಕ್ಸಲೇಟ್ಗೆ ಸೆನ್ಸಿಟಿವ್ ಆಗಿರುವ ಜನರಿಗೆ ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ಬೀಟ್ರೂಟ್ ಉತ್ತೇಜಿಸಬಹುದು.
ಅಲರ್ಜಿಯ ಪ್ರತಿಕ್ರಿಯೆ :
ಬೀಟ್ರೂಟ್ ರಸವು ಖನಿಜಗಳು, ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು, ಫೈಟೊನ್ಯೂಟ್ರಿಯಂಟ್ಗಳು, ಪಾಲಿಫಿನಾಲ್ಗಳು ಮತ್ತು ಇತರ ಆಹಾರದ ಫೈಬರ್ಗಳಂತಹ ಉತ್ತಮ ಪೋಷಕಾಂಶಗಳ ಮೂಲವಾಗಿದೆ ಎಂದು ನಮಗೆ ತಿಳಿದಿದೆ ಆದರೆ ಈ ಪೋಷಕಾಂಶಗಳು ಕೆಲವರಿಗೆ ಅಲರ್ಜಿಯಾಗಿರಬಹುದು. ಬೀಟ್ರೂಟ್ನಿಂದ ಕೆಲವು ಸಾಮಾನ್ಯ ಅಲರ್ಜಿಯ ಪ್ರತಿಕ್ರಿಯೆಗಳಾದ ಚರ್ಮದ ದದ್ದುಗಳು, ತುರಿಕೆ, ಶೀತ ಮತ್ತು ಜ್ವರ ಕಾಣಸಿಕೊಳ್ಳಬಹುದು. ಕೆಲವರಿಗೆ ಬಿಟ್ರೂಟ್ ಜ್ಯೂಸ್ ಕುಡಿಯುವುದರಿಂದ ಗಂಟಲಲ್ಲಿ ಸಮಸ್ಯೆಯಾಗಿ ನುಂಗಲು ಕಷ್ಟವಾಗುತ್ತದೆ. ಆದ್ದರಿಂದ, ನಿಮಗೆ ಬೀಟ್ರೂಟ್ ಅಲರ್ಜಿ ಇದ್ದರೆ, ಇದನ್ನು ತೆಗೆದುಕೊಳ್ಳದಿರುವುದು ಒಳ್ಳೆಯದು.
ಗರ್ಭಾವಸ್ಥೆಯಲ್ಲಿ ಬೀಟ್ರೂಟ್ ಬಳಕೆ:
ಬೀಟ್ರೂಟ್ ನಲ್ಲಿ ಫೋಲಿಕ್ ಆಸಿಡ್ ಇರುವುದರಿಂದ ಗರ್ಭದಲ್ಲಿ ಭ್ರೂಣದ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ನರಗಳ ದೋಷಗಳನ್ನು ಕಡಿಮೆ ಮಾಡುತ್ತದೆ ಎಂಬುದು ನಿಜ . ಆದರೆ ನೀವು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳದಿದ್ದರೆ ಅದು ಗರ್ಭಾವಸ್ಥೆಯಲ್ಲಿ ಅಪಾಯವನ್ನು ಉಂಟುಮಾಡಬಹುದು. ಬೀಟ್ರೂಟ್ ಸೇವನೆಯು ವೈದ್ಯರ ಮಾರ್ಗದರ್ಶನದಲ್ಲಿದ್ದರೆ ಉತ್ತಮ.
ಸಂಧಿವಾತ:
ಬೀಟ್ರೂಟ್ಗಳಲ್ಲಿ ಆಕ್ಸಲೇಟ್ ಸಮೃದ್ಧವಾಗಿದ್ದು, ಇದು ನಮ್ಮ ದೇಹದಲ್ಲಿ ಅತಿಯಾದ ಆಮ್ಲ ರಚನೆಗೆ ಕೊಡುಗೆ ನೀಡುತ್ತದೆ ಆದರೆ ಅತಿಯಾದ ಯೂರಿಕ್ ಆಸಿಡ್ ನಮಗೆ ಅಪಾಯಕಾರಿ ಏಕೆಂದರೆ ಇದು ತೀವ್ರವಾದ ಕೀಲು ನೋವು, ಸ್ನಾಯು ಸೆಳೆತ, ಜ್ವರದಂತಹ ಸಾಮಾನ್ಯ ಲಕ್ಷಣದೊಂದಿಗೆ ಸಂಧಿವಾತವನ್ನು ಸೃಷ್ಟಿಸುತ್ತದೆ.
ಪಿತ್ತಜನಕಾಂಗಕ್ಕೆ ಹಾನಿಕಾರಕ:
ಬೀಟ್ರೂಟ್ ಕಬ್ಬಿಣ, ಮೆಗ್ನೀಸಿಯಮ್, ತಾಮ್ರ ಮತ್ತು ರಂಜಕದ ಸಮೃದ್ಧ ಮೂಲವಾಗಿದ್ದು, ಆರೋಗ್ಯಕ್ಕೆ ಉತ್ತಮ ಭಾಗವಾಗಿದೆ ಆದರೆ ಅಪಾಯವೆಂದರೆ ಇವೆಲ್ಲವೂ ಲೋಹಗಳಾಗಿರುವುದರಿಂದ ಇವುಗಳ ಅತಿಯಾದ ಸೇವನೆಯು ದೇಹದಲ್ಲಿ ಶೇಖರಣೆಗೆ ಕಾರಣವಾಗಬಹುದು. ಈ ಮೂಲಕ ಮೇದೋಜೀರಕ ಗ್ರಂಥಿಯನ್ನು ಹಾನಿಗೊಳಿಸಬಹುದು.
ಗಮನಿಸಿ:
ಕಡಿಮೆ ಕಬ್ಬಿಣದ ಮಟ್ಟ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ಜನರಿಗೆ ಬೀಟ್ರೂಟ್ ಸೇವನೆಯು ತುಂಬಾ ಪ್ರಯೋಜನಕಾರಿ. ಆದಾಗ್ಯೂ, ಗರ್ಭಿಣಿ ಅಥವಾ ದೇಹದಲ್ಲಿ ಕಡಿಮೆ ರಕ್ತದೊತ್ತಡ, ಕಡಿಮೆ ಕ್ಯಾಲ್ಸಿಯಂ ಮತ್ತು ಗರ್ಭಿಣಿಯಾಗಲು ಪ್ರಯತ್ನಿಸುವವರು ತಮ್ಮ ಆಹಾರದಲ್ಲಿ ಬೀಟ್ರೂಟ್ ಸೇರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm