ಬ್ರೇಕಿಂಗ್ ನ್ಯೂಸ್
22-09-21 05:20 pm Source: News 18 Kannada ಡಾಕ್ಟರ್ಸ್ ನೋಟ್
ಇಷ್ಟೊಂದು ಸಾಕಷ್ಟು ಪ್ರಯೋಜನಗಳನ್ನು ತನ್ನಲ್ಲಿ ಹುದುಗಿಕೊಂಡಿರುವ ಬೇವು ಇತ್ತೀಚೆಗೆ ಎಲ್ಲರನ್ನು ಕಾಡುತ್ತಿರುವ ತಲೆಹೊಟ್ಟಿನ ಸಮಸ್ಯೆಯ ನಿವಾರಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ತಲೆಹೊಟ್ಟಿನಿಂದ ಮುಖದ ಮೇಲೆ ಹಾಗೂ ಭುಜದ ಮೇಲೆ ಮೊಡವೆಗಳು ಏಳುವುದು, ತಲೆಯಲ್ಲಿ ಕೆರೆತ, ಕೂದಲು ಉದುರುವುದು ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಹಿಂದಿನ ಕಾಲದಿಂದಲೂ ಬೇವಿನ ಮರಕ್ಕೆ ಪೂಜ್ಯನೀಯ ಸ್ಥಾನವಿದೆ. ಇದರಲ್ಲಿನ ಔಷಧಿ ಗುಣಗಳಿಂದ ಇತರೆ ಮರಗಳಿಗಿಂತ ವಿಭಿನ್ನ. ಇದರ ಚೆಕ್ಕೆ, ಹೂವು, ಎಲೆ, ಬೇರು ಹೀಗೆ ಪ್ರತಿಯೊಂದು ಉಪಯೋಗಕ್ಕೆ ಬರುತ್ತದೆ. ಹಾಗಾಗಿ ಇದನ್ನು ಔಷಧಿಗಳ ರಾಜ ಎಂದೇ ಕರೆಯಲಾಗುತ್ತದೆ.
ಜ್ವರ, ಮಲೇರಿಯಾ, ಜಾಂಡೀಸ್, ಮಧುಮೇಹ, ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು, ಕೂದಲಿನ ಸಮಸ್ಯೆ, ಚರ್ಮದ ಸಮಸ್ಯೆ ಹೀಗೆ ಸರ್ವರೋಗಕ್ಕೂ ರಾಮಬಾಣ ಎಂದರೆ ತಪ್ಪಾಗಲಾರದು.
ಇಷ್ಟೊಂದು ಸಾಕಷ್ಟು ಪ್ರಯೋಜನಗಳನ್ನು ತನ್ನಲ್ಲಿ ಹುದುಗಿಕೊಂಡಿರುವ ಬೇವು ಇತ್ತೀಚೆಗೆ ಎಲ್ಲರನ್ನು ಕಾಡುತ್ತಿರುವ ತಲೆಹೊಟ್ಟಿನ ಸಮಸ್ಯೆಯ ನಿವಾರಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ತಲೆಹೊಟ್ಟಿನಿಂದ ಮುಖದ ಮೇಲೆ ಹಾಗೂ ಭುಜದ ಮೇಲೆ ಮೊಡವೆಗಳು ಏಳುವುದು, ತಲೆಯಲ್ಲಿ ಕೆರೆತ, ಕೂದಲು ಉದುರುವುದು ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಬೇವನ್ನು ಬಳಸುವುದರಿಂದ ಇದು ತಲೆಯ ಹೊಟ್ಟನ್ನು ನಿವಾರಣೆ ಮಾಡುವುದರ ಜೊತೆಗೆ ಕೂದಲ ಬೆಳವಣಿಗೆಗೆಗೂ ಪೂರಕವಾಗುತ್ತದೆ. ಜೊತೆಗೆ ತಲೆಯ ಮೇಲಿನ ಶುಷ್ಕತೆಯನ್ನು ತೆಗೆದುಹಾಕಿ ಸದಾ ತೇವವಾಗಿರುವಂತೆ ನೋಡಿಕೊಳ್ಳುತ್ತದೆ.
ಮಲಾಸೆಜಿಯಾ ಎಂದು ಕರೆಯಲ್ಪಡುವ ಶಿಲೀಂಧ್ರ ತಲೆಹೊಟ್ಟಿಗೆ ಮುಖ್ಯ ಕಾರಣವಾಗುತ್ತದೆ. ಇದು ಚಳಿಗಾಲದಲ್ಲಿ ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತದೆ. ಹಾಗಾಗಿ ತಲೆಹೊಟ್ಟು ನಿವಾರಣೆಗೆ ಪ್ರಮುಖ ಮಾರ್ಗವೆಂದರೆ ಪ್ರತಿದಿನವೂ ಶಾಂಪೂ ಮಾಡುವುದು. ಇದು ಅಲ್ಪಾವಧಿಯ ಜೀವಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ. ಹಾಗಾಗಿ ತಲೆಹೊಟ್ಟು ನಿವಾರಣೆಗೆ ಬೇವಿನ ಹೊರತಾಗಿ ಮತ್ತೆ ಯಾವ ಅಂಶಗಳು ಉಪಯೋಗಕ್ಕೆ ಬರಲಾರವು. ಹಾಗಾಗಿ ಬೇವು ತಲೆಹೊಟ್ಟನ್ನು ಹೇಗೆ ನಿವಾರಿಸುತ್ತದೆ ಎಂದು ತಿಳಿಯೋಣ.
ಬೇವಿನ ಎಲೆಗಳನ್ನು ಅಗೆಯಿರಿ : ಬೇವಿನಲ್ಲಿ ಕಹಿ ಪ್ರಮಾಣ ಹೆಚ್ಚು. ಅದನ್ನು ಬರೀ ಬಾಯಲ್ಲಿ ಅಗೆಯುವುದು ಕಷ್ಟ. ಆದರೆ ವಿವಿಧ ಆರೋಗ್ಯ ಮತ್ತು ಸೌಂದರ್ಯ ತಜ್ಞರ ಪ್ರಕಾರ ತಲೆಹೊಟ್ಟು ತೊಡೆದುಹಾಕಲು ಸುಲಭವಾದ ಮಾರ್ಗವೆಂದರೆ, ಪ್ರತಿದಿನ ಬೆಳಗ್ಗೆ ಬೇವಿನ ಎಲೆಗಳನ್ನು ಅಗೆಯುವುದು. ಇಲ್ಲವಾದಲ್ಲಿ ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದರ ತಿಳಿ ನೀರನ್ನು ಕುಡಿಯಬಹುದು ಅಥವಾ ಬೇವಿನ ಎಲೆಗಳನ್ನು ಜೇನುತುಪ್ಪದೊಂದಿಗೆ ಸೇವಿಸಬಹುದು. ಒಮ್ಮೆ ನೀವು ಇದನ್ನು ಪ್ರಯತ್ನಿಸಿದರೆ ಇದರ ಲಾಭದ ಅರಿವು ನಿಮಗಾಗುತ್ತದೆ.
ಬೇವಿನ ಎಣ್ಣೆ: ಬೇವಿನ ಎಣ್ಣೆ ಕೂದಲ ಆರೈಕೆಗೆ ಹಾಗೂ ತಲೆಹೊಟ್ಟು ನಿವಾರಣೆಗೆ ಸಹಾಯ ಮಾಡುತ್ತದೆ. ಈ ಬೇವಿನ ಎಣ್ಣೆಯನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ತೆಂಗಿನ ಎಣ್ಣೆಗೆ ಕೆಲವು ಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ತದ ನಂತರ ಅದಕ್ಕೆ ಸ್ವಲ್ಪ ನಿಂಬೆ ರಸ ಸೇರಿಸಿದರೆ ಬೇವಿನ ಎಣ್ಣೆ ತಯಾರಾಗುತ್ತದೆ. ಈ ಎಣ್ಣೆ ಹಚ್ಚಿದ ನಂತರ ಸೂರ್ಯನ ಬೆಳಕಿಗೆ ಹೋಗಬೇಡಿ. ಏಕೆಂದರೆ ಎಣ್ಣೆಗೆ ನಿಂಬೆರಸ ಬಳಸಿರುವುರಿಂದ ಇದು ಅಡ್ಡ ಪರಿಣಾಮ ಉಂಟು ಮಾಡಬಹುದು. ಈ ಎಣ್ಣೆಯನ್ನು ನೆತ್ತಿಯ ಮೇಲೆ ಹಾಕಿ ನಿಧಾನವಾಗಿ ಮಸಾಜ್ ಮಾಡಿಕೊಳ್ಳಬೇಕು. ಇದನ್ನು ರಾತ್ರಿ ಹಾಕಿ ಬೆಳಗ್ಗೆ ತಲೆಸ್ನಾನ ಮಾಡಬೇಕು. ಈ ರೀತಿ ಬಳಸಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.
ಬೇವು ಮತ್ತು ಮೊಸರು: ಇವೆರಡರ ಮಿಶ್ರಣ ತಲೆಹೊಟ್ಟು ನಿವಾರಣೆಗೆ ರಾಮಬಾಣ. ಮೊಸರು ತಲೆಹೊಟ್ಟು ನಿವಾರಣೆಯಲ್ಲಿ ಮುಂಚೂಣಿಯಲ್ಲಿದ್ದು, ಇದು ಕೂದಲಿಗೆ ಬಲ ಮತ್ತು ಮೃದುತ್ವವನ್ನು ಕೊಡುತ್ತದೆ. ಬೇವಿನ ಎಲೆಗಳನ್ನು ತೆಗೆದುಕೊಂಡು ರುಬ್ಬಿಕೊಳ್ಳಿ. ಇದಕ್ಕೆ ಒಂದು ಕಪ್ ಮೊಸರು ಸೇರಿಸಿ. ನಂತರ ತಲೆಗೆ ಹಚ್ಚಿಕೊಳ್ಳಿ. 15-20 ನಿಮಿಷ ಬಿಟ್ಟು ಕೂದಲನ್ನು ತೊಳೆದುಕೊಳ್ಳಿ. ಮೊಸರಿನಲ್ಲಿನ ತಂಪಾದ ಮತ್ತು ಬೇವಿನ ಆ್ಯಂಟಿ ಫಂಗಲ್ ಗುಣಲಕ್ಷಣ ತಲೆಹೊಟ್ಟು ವಿರುದ್ಧ ಹೋರಾಡುತ್ತದೆ.
ಬೇವಿನ ಮಾಸ್ಕ್: ಇದು ಸಹ ತಲೆಹೊಟ್ಟು ನಿವಾರಿಸುತ್ತದೆ. ಬೇವಿನ ಎಲೆಗಳನ್ನು ತೆಗೆದುಕೊಂಡು ರುಬ್ಬಿಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ. ನಂತರ ಈ ಪೇಸ್ಟನ್ನು ತಲೆಬುರುಡೆಗೆ ಮಾಸ್ಕ್ ಹಾಕಿಕೊಳ್ಳಿ. ಇದನ್ನು 20 ನಿಮಿಷ ಬಿಟ್ಟು ತೊಳೆಯಿರಿ.
ಕೂದಲ ಕಂಡೀಶನರ್ ಆಗಿ ಬಳಸಿ: ಇದನ್ನು ನೀವು ಕಂಡೀಶನರ್ ಆಗಿಯೂ ಬಳಸಬಹುದು. ಈ ಬೇವಿನ ಕಂಡೀಶನರ್ ಮಾಡಲು ಕೆಲವು ಬೇವಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಕುದಿಸಿ, ತಣ್ಣಗಾಗಲು ಬಿಡಿ. ನಿಮ್ಮ ಕೂದಲನ್ನು ಶಾಂಪೂ ಮಾಡಿದ ನಂತರ, ಈ ಬೇವಿನ ಮಿಶ್ರಣದಿಂದ ಕೂದಲನ್ನು ತೊಳೆಯಿರಿ.
ಬೇವಿನ ಶಾಂಪೂ ಬಳಸಿ: ಬೇವಿನ ಶಾಂಪೂ ತೆಗೆದುಕೊಂಡು ವಾರದಲ್ಲಿ 2 ಅಥವಾ ಮೂರು ಬಾರಿ ತಲೆಸ್ನಾನ ಮಾಡಿ. ಹೆಂಡ್ ಆ್ಯಂಡ್ ಶೋಲ್ಡರ್ಸ್ ಶಾಂಪೂ ಬಳಸಿದರೆ ಉತ್ತಮ. ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
15-08-25 09:22 pm
Mangalore Correspondent
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm