ಬ್ರೇಕಿಂಗ್ ನ್ಯೂಸ್
06-09-21 03:58 pm Source: News 18 Kannada ಡಾಕ್ಟರ್ಸ್ ನೋಟ್
ಅನೇಕ ಮನೆಗಳಲ್ಲಿ ಅರಿಶಿನವನ್ನು ಅಮೃತಕ್ಕೆ ಸಮಾನವಾಗಿ ಕಾಣುತ್ತಾರೆ. ಆದ್ರೆ ಅರಿಶಿನದ ಸರಿಯಾದ ಬಳಕೆ ಹೇಗೆ ಅನ್ನೋದು ಬಹಳ ಮಂದಿಗೆ ತಿಳಿದಿರುವುದಿಲ್ಲ. ಸರಿಯಾದ ಪ್ರಮಾಣದಲ್ಲಿ ಅಥವಾ ಸಂದರ್ಭದಲ್ಲಿ ಬಳಕೆ ಮಾಡದಿದ್ರೆ ಅರಿಶಿನ ಬಹಳ ದೊಡ್ಡ ಅಪಾಯ ತಂದೊಡ್ಡಬಹುದು. ಕೆಲವು ಖಾಯಿಲೆಗಳ ಪಾಲಿಗಂತೂ ಅರಿಶಿನ ಅಕ್ಷರಶಃ ಯಮಪಾಶ. ಅರಿಶಿನದ ಸರಿಯಾದ ಬಳಕೆ ಹೇಗೆ?
ಅರಿಶಿನ ಭಾರತೀಯ ಅಡುಗೆಮನೆಯ ಖಾಯಂ ವಸ್ತು. ಕೇವಲ ಅಡುಗೆ ಪದಾರ್ಥಗಳು ಮಾತ್ರವಲ್ಲದೆ ಉತ್ತಮ ಆಂಟಿಸೆಪ್ಟಿಕ್ ಆಗಿ ಕೂಡಾ ಅರಿಶಿನ ಬಳಕೆಯಾಗುತ್ತದೆ. ಸಣ್ಣ ಪುಟ್ಟ ಗಾಯಗಳಾದ ಅರಿಶಿನವನ್ನೇ ಮೊದಲು ಬಳಸೋದು, ಅಷ್ಟರಮಟ್ಟಿಗೆ ಇದೊಂದು ಅನಿವಾರ್ಯ ವಸ್ತು.
ಆದ್ರೆ ಅರಿಶಿನ ಎಲ್ಲರಿಗೂ ಹೊಂದುವುದಿಲ್ಲ. ಅನೇಮಿಯಾ ಇರುವವರಿಗೆ ಇದು ಖಂಡಿತಾ ಒಳ್ಲೆಯದಲ್ಲ. ರಕ್ತದಲ್ಲಿ ಕೆಂಪು ರಕ್ತ ಕಣಗಳ ಅಭಾವವಿದ್ದಾಗ ಆಕ್ಸಿಜನ್ ಬಳಕೆಯಲ್ಲೂ ಏರುಪೇರಾಗುತ್ತದೆ. ಜಾಂಡೀಸ್ ಇದ್ದವರ ದೇಹದಲ್ಲಿ ರಕ್ತದಿಂದ ಆಕ್ಸಿಜನ್ ನ್ನು ದೇಹ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಆರೋಗ್ಯವನ್ನು ಮತ್ತಷ್ಟು ಹದಗೆಡಿಸುತ್ತದೆ.
ಗರ್ಭಿಣಿಯರು ಮತ್ತು ಹಾಲೂಡಿಸುವ ತಾಯಂದಿರು ಅರಿಶಿನವನ್ನು ಅಡುಗೆಗೆ ಹೊರತುಪಡಿಸಿ ನೇರವಾಗಿ ಬಳಸಬಾರದು. ಅರಿಶಿನವನ್ನು ಅಡುಗೆಗೆ ಬಳಸಿದಾಗ ಅದರಲ್ಲಿನ ಕುರ್ಕುಮಿನ್ ಅಂಶ ಕ್ಷೀಣಿಸುತ್ತದೆ. ಆದರೆ ನೇರವಾಗಿ ಬಳಸಿದ್ರೆ ಆಗ ಅದು ಋತುಚಕ್ರವನ್ನು ಪ್ರೇರೇಪಿಸುತ್ತದೆ ಇದು ಗರ್ಭಿಣಿಯರಿಗೆ ಖಂಡಿತಾ ಒಳ್ಳೆಯದಲ್ಲ. ಹಾಗಾಗಿ ಅವರು ಅಡುಗೆ ಹೊರತುಪಡಿಸಿ ಅರಿಶಿನವನ್ನು ಬಳಸಬಾರದು.
ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವಿಕೆ ಮುಂತಾದ ರಕ್ತಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿದ್ದರೆ ಅಥವಾ ಅನೇಮಿಯಾ ಇದ್ದರೆ ಖಂಡಿತವಾಗಿಯೂ ಅಂಥವರು ಅರಿಶಿನವನ್ನು ಬಳಸಲೇಬಾರದು.
ಸಕ್ಕರೆ ಖಾಯಿಲೆ ಅಥವಾ ಮಧುಮೇಹ ಇರುವವರು ಕೂಡಾ ಹೆಚ್ಚು ಅರಿಶಿನ ಬಳಸುವುದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಅದರಲ್ಲೂ ಲೋ ಬ್ಲಡ್ ಶುಗರ್ ಅಥವಾ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆ ಇದ್ದರೆ ಅಂಥವರು ಅರಿಶಿನ ಬಳಸಿದ್ರೆ ಸಕ್ಕರೆ ಅಂಶ ಮತ್ತಷ್ಟು ಕಡಿಮೆ ಆಗುತ್ತದೆ ಎನ್ನಲಾಗುತ್ತದೆ. ಹಾಗಾಗಿ ಅಂಥವರು ಅರಿಶಿನದಿಂದ ದೂರ ಇರಬೇಕು.
ಕಿಡ್ನಿ ಸ್ಟೋನ್ ಇರುವವರು ಕೂಡಾ ಅರಿಶಿನವನ್ನು ಬಳಸಬಾರದು. ಅರಿಶಿನದಲ್ಲಿರುವ ಕ್ಯಾಲ್ಶಿಯಂ ಆಕ್ಸಲೇಟ್ ಮೂತ್ರಪಿಂಡದಲ್ಲಿ ಕಲ್ಲುಗಳ ಉತ್ಪಾದನೆಗೆ ಉತ್ತೇಜನ ಕೊಡುತ್ತದೆ. ಹಾಗಾಗಿ ಅರಿಶಿನದಿಂದ ದೂರ ಇರೋದು ಒಳ್ಳೆಯದು.
ಎಷ್ಟು ಅರಿಶಿನ ಬಳಸುವುದು ಸರಿ? ಆರೋಗ್ಯ ತಜ್ಞರ ಲೆಕ್ಕಾಚಾರದ ಪ್ರಕಾರ ಒಂದು ದಿನಕ್ಕೆ ಅಡುಗೆಯಲ್ಲಿ 500ರಿಂದ 2000 ಮಿಲಿಗ್ರಾಂಗಳಷ್ಟು ಅರಿಶಿನ ಬಳಸಿದರೆ ಸಾಲುತ್ತದೆ. ಅರಿಶಿನದಲ್ಲಿರುವ ಕುರ್ಕುಮಿನ್ನಿಂದ ಹಾನಿ ಆಗುವ ಸಂಭವ ಕಡಿಮೆ. ಆದ್ರೆ ಕುರ್ಕುಮಿನ್ ಸಪ್ಲಿಮೆಂಟ್ಗಳನ್ನು ತೆಗೆದುಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm