ಬ್ರೇಕಿಂಗ್ ನ್ಯೂಸ್
27-08-22 07:34 pm Source: Vijayakarnataka ಡಾಕ್ಟರ್ಸ್ ನೋಟ್
ವೇಗದ ಜೀವನಶೈಲಿಯಲ್ಲಿ ಕೆಲವೊಮ್ಮೆ ತಿಂಡಿ ತಯಾರಿಸಿ ತಿನ್ನಲೂ ಸಮಯವಿರುವುದಿಲ್ಲ. ಆಗ ಹೊಟೆಲ್ಗಳ ತಿಂಡಿಗೆ ಅವಲಂಬಿತವಾಗಿರಬೇಕಾಗುತ್ತದೆ. ಆದರೆ ಅವು ಎಷ್ಟರ ಮಟ್ಟಿಗ ಪೌಷ್ಟಿಕ ಎನ್ನವ ಪ್ರಶ್ನೆ ಮೂಡುತ್ತದೆ.
ಬೆಳಗ್ಗಿನ ತಿಂಡಿಯನ್ನು ಸ್ಕಿಪ್ ಮಾಡುವುದು ಒಳ್ಳೆಯದಲ್ಲ. ಅನೇಕರು ತಿಂಡಿಯನ್ನು ತಯಾರಿಸಲು ಸಮಯವಿರುವುದಿಲ್ಲ ಎನ್ನುತ್ತಾರೆ. ಹಾಗಾದರೆ ಕಡಿಮೆ ಸಮಯದಲ್ಲಿ ಪೌಷ್ಟಿಕವಾಗಿ ಯಾವ ಆಹಾರ ತಯಾರಿಸಬಹುದು ಎನ್ನುವ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಇಡ್ಲಿ
ರಾಗಿ ಅಥವಾ ರವೆ ಇಡ್ಲಿಯನ್ನು ಬೇಗನೆ ಬೆಳಗ್ಗಿನ ತಿಂಡಿಯಾಗಿ ಸೇವಿಸಬಹದು. ಇವುಗಳು ಜೀರ್ಣಿಸಿಕೊಳ್ಳಲು ತುಂಬಾ ಸುಲಭ. ರಾಗಿ ಅಥವಾ ಫಿಂಗರ್ ರಾಗಿ ತೂಕ ನಷ್ಟಕ್ಕೆ ಪರಿಪೂರ್ಣ ಘಟಕಾಂಶವಾಗಿದೆ.
ಇದು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಆದರೆ ಆಹಾರ ಸೇವನೆಯಲ್ಲಿ ಪೂರ್ಣತೆಯನ್ನು ನೀಡುತ್ತದೆ. ಅವು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವುದಿಲ್ಲ. ಕಡಿಮೆ ಸೋಡಿಯಂ ಅಂಶವು ಹೃದಯಕ್ಕೂ ಒಳ್ಳೆಯದು.
ಬ್ರೆಡ್ ಸಾಂಡ್ವಿಚ್
ರುಚಿಕರವಾದ ತರಕಾರಿಗಳನ್ನು ತುಂಬಿ ತಯಾರಿಸಿದ ಆರೋಗ್ಯಕರ ಬ್ರೆಡ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಗೋಧಿ ಬ್ರೆಡ್ ಮತ್ತು ತರಕಾರಿಗಳ ಇಡೀ ದಿನ ಚೈತನ್ಯಪೂರ್ಣವಾಗಿ ಇರುವಂತೆ ಮಾಡುತ್ತದೆ.
ಬೆಳಗ್ಗಿನ ಗಡಿಬಿಡಿಯಲ್ಲಿ ಸುಲಭವಾಗಿ ಇದನ್ನು ತಯಾರಿಸಬಹುದಾಗಿದೆ. ಇದರಲ್ಲಿ ಫೈಬರ್, ವಿಟಮಿನ್ ಬಿ 1, ಬಿ 6, ಬಿ 12, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಅಧಿಕವಾಗಿದೆ. ಮಧುಮೇಹಿಗಳಿಗೆ ಮತ್ತು ತೂಕ ಇಳಿಸಿಕೊಳ್ಳುವವರಿಗೂ ಬಹಳ ಉತ್ತಮವಾಗಿದೆ.
ಮೊಟ್ಟೆ
ಮೊಟ್ಟೆಯ ಬಿಳಿಭಾಗವು ಸರಳವಾದ, ಪೌಷ್ಟಿಕಾಂಶಯುಕ್ತ ತಿಂಡಿಯಾಗಿದೆ. ಮೊಟ್ಟೆ ಪ್ರೋಟೀನ್ನ ಉತ್ತಮ ಮೂಲವಾಗಿದೆ, ಇದು ಸ್ನಾಯುವಿನ ಆರೋಗ್ಯವನ್ನು ಕಾಪಾಡುತ್ತದೆ.
ಪ್ರೋಟೀನ್ ಜೀರ್ಣಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಹೀಗಾಗಿ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಭಾವನೆ ಇರುತ್ತದೆ. ನೀವು ಮೊಟ್ಟೆಯನ್ನು ಬೇಯಿಸಿ ಸೇವನೆ ಮಾಡಬಹುದು.
ಅವಲಕ್ಕಿ
ಭಾರತೀಯ ಆಹಾರ ಪದ್ಧತಿಯಲ್ಲಿ ಪೋಹಾ ಅಥವಾ ಅವಲಕ್ಕಿಗೆ ಒಗ್ಗರೆಣೆ ಹಾಕಿ ಸೇವನೆ ಮಾಡುವುದು ಹೆಚ್ಚಿನ ಜನರಿಗೆ ತಿಳಿದಿದೆ. ಇದು ಹಗುರವಾದ, ಹೊಟ್ಟೆ ತುಂಬುವ ಆಹಾರವಾಗಿದೆ.
ಇದು ಕಾರ್ಬೋಹೈಡ್ರೇಟ್ಗಳ ಅತ್ಯುತ್ತಮ ಮೂಲವಾಗಿದೆ, ಕಬ್ಬಿಣಾಂಶದಿಂದ ತುಂಬಿರುತ್ತದೆ, ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಅಗತ್ಯವಾದ ಜೀವಸತ್ವಗಳ ಉತ್ತಮ ಮೂಲವಾಗಿದೆ. ಹೀಗಾಗಿ ಇದನ್ನು ಬೇಗನೆ ತಯಾರಿಸಿ ತಿನ್ನಬಹುದಾದ ಪೌಷ್ಟಿಕವಾದ ತಿಂಡಿಯಾಗಿದೆ.
ಉಪ್ಪಿಟ್ಟು
ಹೆಚ್ಚು ಜನರು ಉಪ್ಪಿಟ್ಟು ಎಂದರೆ ಮೂಗು ಮುರಿಯುತ್ತಾರೆ. ಆದರೆ ಉಪ್ಪಿಟ್ಟು ಬಹಳ ಒಳ್ಳೆಯದು. ಇದರಲ್ಲಿ ಬಳಸುವ ರವೆ, ತರಕಾರಿಗಳು ದೇಹಕ್ಕೆ ಶಕ್ತಿ ನೀಡುತ್ತವೆ.
ಅಲ್ಲದೆ ಬೆಳಗ್ಗಿನ ತಿಂಡಿಯಾಗಿ ಉಪ್ಪಿಟ್ಟನ್ನು ಸೇವನೆ ಮಾಡಿದರೆ ಜೀರ್ಣವಾಗಲು ಸಮಯ ಬೇಕಾಗಿರುವುದರಿಂದ ಪದೇಪದೇ ಹಸಿವೆಯಾಗುವುದು ತಪ್ಪುತ್ತದೆ. ಹೀಗಾಗಿ ದೇಹದ ತೂಕ ಇಳಿಸಿಕೊಳ್ಳಬೇಕು ಎಂದವರಿಗೆ ಇದು ಸುಲಭದ ಆಹಾರವಾಗಿದೆ.
These Are The Healthy And Easy Breakfast.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm