ಬ್ರೇಕಿಂಗ್ ನ್ಯೂಸ್
09-07-22 08:39 pm Source: Vijayakarnataka ಡಾಕ್ಟರ್ಸ್ ನೋಟ್
ಮಳೆಗಾಲದಲ್ಲಿ ಬಿಸಿ ಬಿಸಿ ತಿಂಡಿಗಳನ್ನು ತಿನ್ನಬೇಕು ಎನ್ನಿಸುವುದು ಸಹಜ. ಅದರಲ್ಲೂ ಜೋಳ ಎಲ್ಲರ ನೆಚ್ಚಿನ ಫುಡ್ ಆಗಿದೆ. ಜೋಳವನ್ನು ಕೆಂಡದಲ್ಲಿ ಸುಟ್ಟು ತಿನ್ನುತ್ತಿದ್ದರೆ ಬಾಯಲ್ಲಿ ನೀರೂರುವುದಂತೂ ಸುಳ್ಳಲ್ಲ. ಹೀಗಾಗಿ ಜೋಳ ಮಳೆಗಾಲದ ಬೆಸ್ಟ್ ಫ್ರೆಂಡ್ ಎಂದೇ ಹೇಳಬಹುದು.
ಮಳೆಗಾಲದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಹೀಗಾಗಿ ಪ್ರತೀ ಬಾರಿ ಆಹಾರ ಸೇವನೆ ಮಾಡುವಾಗ ಆರೋಗ್ಯಕ್ಕೆ ಧಕ್ಕೆಯಾಗದಂತೆ ಸೇವನೆ ಮಾಡಬೇಕು. ಆದಷ್ಟು ಬೀದಿ ಬದಿ ಆಹಾರಗಳಿಂದ ದೂರವಿರುವುದು ಒಳಿತು. ಜೋಳ ನಿಮ್ಮಿಷ್ಟದ ತಿಂಡಿಯಾಗಿದ್ದರೆ ಮನೆಯಲ್ಲೇ ತಯಾರಿಸಿ ತಿನ್ನಿ ಅಥವಾ ತಾಜಾ ಜೋಳವನ್ನು ಮಾತ್ರ ಖರೀದಿಸಿ ತಿನ್ನಿ. ಆದರೆ ಜೋಳ ತಿಂದ ತಕ್ಷಣ ನೀರನ್ನು ಸೇವಿಸಬಾರದು.
ಅರೇ ! ಜೋಳ ತಿಂದ ತಕ್ಷಣ ನೀರನ್ನು ಸೇವನೆ ಮಾಡಿದರೆ ಏನಾಗುತ್ತದೆ. ಜೋಳದಿಂದ ಆರೋಗ್ಯಕ್ಕೇನು ಲಾಭ ಎನ್ನುವ ಬಗ್ಗೆ ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ.
ಜೋಳ ತಿಂದ ತಕ್ಷಣ ನೀರನ್ನು ಕುಡಿಯಬಾರದು
ನೀವು ಸಾಮಾನ್ಯವಾಗಿ ಮನೆಯಲ್ಲಿ ಹಿರಿಯರು ಹೇಳುವುದನ್ನು ಕೇಳಿರುತ್ತೀರಿ. ಜೋಳ ತಿಂದ ಮೇಲೆ ನೀರು ಕುಡಿಯಬೇಡಿ ಎನ್ನುವುದನ್ನು. ಆರೋಗ್ಯದ ದೃಷ್ಟಿಯಿಂದ ಅವರು ಕೊಡುವ ಈ ಸಲಹೆ ನಿಜಕ್ಕೂ ಒಳ್ಳೆಯದು.
ಏಕೆಂದರೆ ಜೋಳ ತಿಂದ ತಕ್ಷಣ ನೀರು ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆಗೆ ಅಡ್ಡಿಯಾಗಬಹುದು. ಜೋಳ ಪಿಷ್ಟ ಮತ್ತು ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತದೆ. ಹೀಗಾಗಿ ಜೋಳ ತಿಂದ ಮೇಲೆ ನೀರು ಕುಡಿಯುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉತ್ಪಾದನೆಗೆ ಕಾರಣವಾಗಬಹುದು. ಇದು ಆಸಿಡ್ ರಿಫ್ಲಕ್ಸ್, ಆಮ್ಲೀಯತೆ, ಗ್ಯಾಸ್ಟ್ರಿಕ್ ಮತ್ತು ತೀವ್ರ ಹೊಟ್ಟೆ ನೋವಿಗೆ ಕಾರಣವಾಗಬಹುದು.
ಜೋಳ ತಿಂದ ಮೇಲೆ ಅರ್ಧಗಂಟೆ ಬಿಟ್ಟು ನೀರು ಕುಡಿಯಿರಿ
ಕೆಲವೊಮ್ಮೆ ಜೋಳದಲ್ಲಿ ಹಾಕಿರುವ ಮಸಾಲೆಯಿಂದ ಖಾರವಾಗಬಹುದು. ಅಂತಹ ಸಂದರ್ಭದಲ್ಲಿ ಸಿಹಿ ಜೋಳವನ್ನು ತಿನ್ನಿ, ಆದಷ್ಟು ನೀರು ಕುಡಿಯುವುದನ್ನು ಅವೈಡ್ ಮಾಡಿ. ಜೋಳ ತಿನ್ನುವ ಅರ್ಧಗಂಟೆ ಮೊದಲು ನೀರನ್ನು ಕುಡಿಯಿರಿ ಅಥವಾ ತಿಂದ ನಂತರ ಅರ್ಧಗಂಟೆ ಅಥವಾ 45 ನಿಮಿಷ ಬಿಟ್ಟು ನೀರನ್ನು ಕುಡಿಯಿರಿ.
ತಾಜಾ ಜೋಳವನ್ನು ಮಾತ್ರ ಸೇವಿಸಿ
ದೀರ್ಘಕಾಲದವರೆಗೆ ಅದನ್ನು ಸಂಗ್ರಹಿಸಬೇಡಿ. ಇದು ಹಾನಿಕಾರಕ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗಬಹುದು ಮತ್ತು ನಂತರ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು.
ಏಕೆಂದರೆ ಸಿಪ್ಪೆ ಬಿಡಿಸಿದ ಜೋಳದಲ್ಲಿ ಬೇಗನೆ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಅಲ್ಲದೆ ಬೀದಿ ಬದಿಗೆ ತಿನ್ನುತ್ತೀದ್ದೀರಿ ಎಂದರೆ ಧೂಳು, ಕಸ ಅದಕ್ಕೆ ಅಂಟಿಕೊಂಡಿರಬಹುದು. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಕಾಡುತ್ತದೆ.
ಜೋಳಕ್ಕೆ ಲಿಂಬು ರಸ ಸೇರಿಸಿ ತಿನ್ನಿ
ಜೋಳದಲ್ಲಿನ ಪಿಷ್ಟದ ಅಂಶದಿಂದ ಜೀರ್ಣಕ್ರಿಯೆ ನಿಧಾನವಾಗಬಹುದು. ಅಲ್ಲದೆ ಹಸಿದ ಹೊಟ್ಟೆಯಲ್ಲಿ ಜೋಳವನ್ನು ಸೇವನೆ ಮಾಡುವುದು ಒಳ್ಳೆಯದಲ್ಲ.
ಆದರೆ ನೆನಪಿಡಿ, ಯಾವಾಗ ಜೋಳವನ್ನು ತಿನ್ನುವುದಾದರೂ ನಿಂಬೆ ರಸ ಮತ್ತು ಕೊಂಚ ಮೆಣಸಿನ ಪುಡಿ ಸೇರಿಸಿ ತಿನ್ನಿ. ಇದರಿಂದ ರುಚಿಯೂ ಅದ್ಭುತವಾಗಿರುತ್ತದೆ. ಜೊತೆಗೆ ಮಸಾಲೆ ಮತ್ತು ನಿಂಬೆ ರಸವು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.
ಜೋಳ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ?
Why You Should Avoid Drinking Water After Eating Corn.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm