ಬ್ರೇಕಿಂಗ್ ನ್ಯೂಸ್
04-07-22 07:39 pm Source: Vijayakarnataka ಡಾಕ್ಟರ್ಸ್ ನೋಟ್
ನಮ್ಮ ಆರೋಗ್ಯ ಉತ್ತಮವಾಗಿರಬೇಕೆಂದರೆ ಆಹಾರ ಸೇವನೆ ಉತ್ತಮವಾಗಿರಬೇಕು. ಸರಿಯಾದ ರೀತಿಯ ಆಹಾರ ಸೇವನೆ ಪ್ರತೀ ವ್ಯಕ್ತಿಯ ಆರೋಗ್ಯದ ಗುಟ್ಟು. ಕೆಲವರು ಮಾಂಸದ ಸೇವನೆ ಮೂಲಕ ದೇಹಕ್ಕೆ ಬೇಕಾದ ವಿವಿಧ ರೀತಿಯ ಪ್ರೋಟೀನ್, ಪೋಷಕಾಂಶಗಳನ್ನು ಪಡೆಯುತ್ತಾರೆ. ಆದರೆ ಹೆಚ್ಚು ಮಾಂಸಹಾರ ಸೇವನೆಯಿಂದ ದೇಹದಲ್ಲಿ ಕೊಬ್ಬು ಶೇಖರಣೆಯಾಗಬಹುದು. ಹೀಗಾಗಿ ಅದಕ್ಕೆ ಪರ್ಯಾಯವಾಗಿ ಹಲಸಿನ ಹಣ್ಣನ್ನು ಬಳಸಬಹುದಾಗಿದೆ. ಹಲಸಿನಲ್ಲಿ ಸಾಕಷ್ಟು ಪ್ರೋಟೀನ್, ವಿಟಮಿನ್ಸ್ಗಳು ಅಡಕವಾಗಿದೆ.
ಆದರೆ ನೆನಪಿಡಿ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಹಲಸಿನ ಹಣ್ಣಿನ ಹೆಚ್ಚು ಸೇವನೆ ಬೇಡ. ಅಲ್ಪ ಪ್ರಮಾಣದಲ್ಲಿ ಅಂದರೆ ಬಾಯಿ ರುಚಿಗೆ ತಕ್ಕಷ್ಟು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇಂದು ಹಲಸಿನ ದಿನ. ಹಲಸಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತೀ ವರ್ಷ ಜುಲೈ 4 ರಂದು ಹಲಸಿನ ದಿನವನ್ನು ಆಚರಿಸಲಾಗುತ್ತದೆ.
ಹಾಗಾದರೆ ಹಲಸಿನ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಯಾವೆಲ್ಲಾ ಲಾಭಗಳಿವೆ ಎನ್ನುವ ಬಗ್ಗೆ ಆಯುರ್ವೇದ ವೈದ್ಯರಾದ ಡಾ. ಶರದ್ ಕುಲಕರ್ಣಿ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.
ನ್ಯೂಟ್ರಿಷಿಯನ್ಗಳ ಆಗರ
ಹಲಸಿನಲ್ಲಿ ದೇಹಕ್ಕೆ ಬೇಕಾದ ಅನೇಕ ರೀತಿಯ ಜೀವಸತ್ವಗಳಿವೆ. ಕ್ಯಾಲೋರಿ, ಫಾಟ್, ಡಯೆಟರಿ ಫೈಬರ್, ಪೊಟ್ಯಾಷಿಯಂ, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್, ಪ್ರೋಟೀನ್ ಸೇರಿ ಅನೇಕ ಆರೋಗ್ಯಯುತ ಖನಿಜಗಳನ್ನು ಹಲಸು ತನ್ನೊಳಗೆ ಇರಿಸಿಕೊಂಡಿದೆ. ಹಲಸನ್ನು ಅನೇಕ ರೀತಿಯಲ್ಲಿ ಸಿಹಿ ಪದಾರ್ಥವಾಗಿ, ಅನ್ನದ ಜೊತೆಗಿನ ಪದಾರ್ಥವಾಗಿ ಬಳಸಬಹುದಾಗಿದೆ.
ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣ
ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಹಲಸಿನ ಹಣ್ಣು ಸಹಾಯಕವಾಗಿದೆ. ಆದರೆ ನೆನಪಿಡಿ ಮಧುಮೇಹ ಇರುವವರು ಎಚ್ಚರಿಕೆಯಿಂದ ಸೇವನೆ ಮಾಡನಬೇಕು. ಏಕೆಂದರೆ ರುಚಿ ಇದೆ ಎಂದು ಹೆಚ್ಚು ಹಲಸಿನ ಹಣ್ಣನ್ನು ಹೆಚ್ಚು ಸೇವನೆ ಮಾಡುವುದರಿಂದ ಶುಗರ್ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ.
ನಮ್ಮ ದೇಹವು ಇತರ ಕೆಲವು ಆಹಾರಗಳಿಗಿಂತ ಹೆಚ್ಚು ನಿಧಾನವಾಗಿ ಹಲಸಿನ ಹಣ್ಣನ್ನು ಜೀರ್ಣಿಸಿಕೊಳ್ಳುತ್ತದೆ ಹೀಗಾಗಿ ಹಣ್ಣುಗಳನ್ನು ತಿನ್ನುವಾಗ ರಕ್ತದಲ್ಲಿನ ಸಕ್ಕರೆಯು ಬೇಗನೆ ಏರುವುದಿಲ್ಲ. ಆದ್ದರಿಂದ ಅಪರೂಪಕ್ಕೆ ಒಂದು ಬಾರಿ ಹಲಸಿನ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುತ್ತಾರೆ ವೈದ್ಯರು.
ಹಲಸಿನ ಬೀಜವೂ ಆರೋಗ್ಯಕಾರಿ
ಕೇವಲ ಹಲಸಿನ ಕಾಯಿ, ಹಣ್ಣು ಮಾತ್ರವಲ್ಲ ಹಲಸಿನ ಬೀಜ ಕೂಡ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಬೀಜಗಳನ್ನು ಸಾಂಬಾರಿನ ಜೊತೆ ಬಳಕೆ ಮಾಡುವುದರಿಂದ ಅತ್ಯುತ್ತಮ ಪೋಷಕಾಂಶಗಳು ದೊರಕುತ್ತವೆ.
ಅಷ್ಟೇ ಅಲ್ಲ ಈ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಕೂಡ ಸೇವನೆ ಮಾಡಬಹುದು. ಇದು ಕೂಡ ದೇಹದ ತೂಕ ಇಳಿಕೆಗೆ ಸಹಕಾರಿಯಾಗಿದೆ. ಮೂಳೆಗಳನ್ನು ಬಲಪಡಿಸಿ, ಆರೋಗ್ಯಯುತವಾಗಿರವಂತೆ ಮಾಡಲು ಈ ಬೀಜಗಳು ಒಳ್ಳೆಯದು.
ದೇಹದ ತೂಕ ಇಳಿಕೆಗೆ
ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿ ಸ್ಥೂಲಕಾಯತೆಯ ಸಮಸ್ಯೆ ಹೆಚ್ಚುತ್ತಿದೆ. ಹಲಸು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಏಕೆಂದರೆ ಇದು ಕೊಬ್ಬು ಮುಕ್ತ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಉತ್ತಮ ಆಹಾರವಾಗಿದೆ.
ಅಲ್ಲದೆ ಹಲಸಿನ ಪದಾರ್ಥಗಳು ಹೊಟ್ಟೆಯಲ್ಲಿ ಬೇಗನೆ ಜೀರ್ಣವಾಗುವುದಿಲ್ಲ. ಹೀಗಾಗಿ ಪದೆ ಪದೇ ಹಸಿವೆಯಾಗುವುದನ್ನು, ಕಡು ಬಯಕೆಗಳನ್ನು ತಪ್ಪಿಸಬಹುದಾಗಿದೆ.
ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಕಾರಿ
ಹಲಸಿನ ಹಣ್ಣುಗಳು ಫ್ರಕ್ಟೋಸ್ ಮತ್ತು ಸುಕ್ರೋಸ್ನಂತಹ ಸರಳವಾದ ಸಕ್ಕರೆಗಳನ್ನು ಹೊಂದಿರುತ್ತವೆ. ಈ ಸಕ್ಕರೆಗಳು ನಮ್ಮ ದೇಹದಲ್ಲಿ ಸುಲಭವಾಗಿ ಹೀರಲ್ಪಡುತ್ತವೆ ಮತ್ತು ಈ ಹಣ್ಣಿನ ಒಂದು ಸಣ್ಣ ಭಾಗವನ್ನು ತಿನ್ನುವುದು ನಿಮಗೆ ತಕ್ಷಣದ ಶಕ್ತಿಯನ್ನು ನೀಡುತ್ತದೆ. ನೀವು ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಳ ಮಾಡುತ್ತದೆ.
ಚರ್ಮದ ಆರೋಗ್ಯ
ಹಲಸಿನ ಹಣ್ಣಿನ ಸೇವೆನೆಯಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ವಯಸ್ಸಾದಂತೆ ಕಾಣುವ ತ್ವಚೆ, ಸುಕ್ಕುಗಟ್ಟಿದ ಚರ್ಮವನ್ನು ನಿವಾರಿಸಲು ಹಲಸಿನ ಹಣ್ಣು ಸಹಾಯಕವಾಗಿದೆ.
ಇದರಲ್ಲಿನ ವಿಟಮಿನ್ ಸಿ ಅಂಶ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಸಿಕ್ಕಾಗ ತಾಜಾ ಹಲಸಿನ ಹಣ್ಣನ್ನು ತಿಂದುಬಿಡಿ.
ಈ ವಿಷಯಗಳ ಬಗ್ಗೆ ಗಮನವಿರಲಿ
Jackfruit Day Amazing Health Benefits Of Jackfruit.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 11:26 pm
Mangalore Correspondent
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am