ಬ್ರೇಕಿಂಗ್ ನ್ಯೂಸ್
29-06-22 07:31 pm Source: Vijayakarnataka ಡಾಕ್ಟರ್ಸ್ ನೋಟ್
ಅತಿಯಾದರೆ ಅಮೃತವೂ ವಿಷ. ಅದೇ ರೀತಿ ನಾವು ಸೇವಿಸುವ ಆಹಾರಗಳನ್ನು ಒಂದು ಮಿತಿಯಲ್ಲಿ ಸೇವನೆ ಮಾಡಿದರೆ ಅವುಗಳಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ. ಅದರ ಬದಲು ಇಷ್ಟ ಎಂದೋ ಅಥವಾ ರುಚಿ ಚೆನ್ನಾಗಿದೆ ಎನ್ನುವ ಕಾರಣಕ್ಕೋ ಒಂದೇ ಆಹಾರಕ್ಕೆ ಒಗ್ಗಿಕೊಂಡರೆ ಅದರಿಂದ ಅಪಾಯಗಳೇ ಹೆಚ್ಚು.
ಸಾಮಾನ್ಯವಾಗಿ ಭಾರತದಲ್ಲಿ ಅತಿ ಹೆಚ್ಚು ಜನ ಕುಡಿಯುವ ಪಾನೀಯಗಳಲ್ಲಿ ಚಹಾ ಕೂಡ ಒಂದು ಅದರಲ್ಲಿ ಹಲವು ವಿಧಗಳಿವೆ. ಶುಂಠಿ ಟೀ, ಏಲಕ್ಕಿ ಟೀ, ಲೆಮನ್ ಟೀ ಇತ್ಯಾದಿ. ಇವೆಲ್ಲವೂ ಆರೋಗ್ಯಕ್ಕೆ ಒಳ್ಳೆಯದೆ ಆದರೆ ಒಂದು ಮಿತಿಯಲ್ಲಿ ಸೇವನೆ ಮಾಡಿದರೆ ಮಾತ್ರ ಎನ್ನುವುದು ನೆನಪಿರಲಿ.
ಹೌದು. ಮುಖ್ಯವಾಗಿ ಇಲ್ಲಿ ಹೇಳುತ್ತಿರುವುದು ಶುಂಠಿ ಟೀಯ ಬಗ್ಗೆ. ಶುಂಠಿ ಟೀ ಆರೋಗ್ಯಕ್ಕೆ ಬಹಳ ಒಳ್ಳೆಯದು. ದೇಹವನ್ನು ಒಳಗಿನಿಂದ ಬೆಚ್ಚಗಿಡಲು ಶುಂಠಿ ಸಹಾಯಕವಾಗಿದೆ. ಅಲ್ಲದೆ ಅಸ್ತಮಾ ರೋಗಿಗಳಿಗೆ ಬೆಸ್ಟ್ ಮನೆಮದ್ದು ಎಂತಲೇ ಹೇಳುತ್ತಾರೆ. ಆದರೆ ಇದನ್ನು ಹೆಚ್ಚು ಸೇವನೆ ಮಾಡಿದರೆ ಕೆಲವು ಅನಾರೋಗ್ಯ ಕಾಡುತ್ತದೆ. ಹಾಗಾದರೆ ಅವು ಯಾವೆಲ್ಲ ಎನ್ನುವ ಬಗ್ಗೆಇಲ್ಲಿ ತಿಳಿಸಲಾಗಿದೆ ಓದಿ.
ದೇಹದಲ್ಲಿ ಉಷ್ಣತೆ ಹೆಚ್ಚುವುದು
ಕೆಲವರದ್ದು ಉಷ್ಣ ಪ್ರಕೃತಿಯ ಶರೀರವಾಗಿರುತ್ತದೆ. ಈ ರೀತಿ ಇದ್ದವರು ಶುಂಠಿ ಟೀಯನ್ನು ಪದೇ ಪದೇ ಕುಡಿದರೆ ದೇಹದಲ್ಲಿ ಉಷ್ಣತೆ ಹೆಚ್ಚಾಗಲಿದೆ. ಇದರಿಂದ ಚರ್ಮ ಡ್ರೈ ಆಗುವುದು, ಕಣ್ಣಿನಲ್ಲಿ ತುರಿಕೆ, ಉಗುರಿನ ಬಳಿ ಚರ್ಮ ಏಳುವುದು, ತಲೆನೋವು ಕಾಣಿಸಿಕೊಳ್ಳುತ್ತದೆ.
ಅಲ್ಲದೆ ಎದೆಯುರಿ, ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಬರಬಹುದು. ಆದ್ದರಿಂದ ಶುಂಠಿ ಟೀಯ ಅತಿಯಾದ ಸೇವನೆ ಒಳ್ಳೆಯದಲ್ಲ.
ಗರ್ಭಿಣಿಯರಿಗೂ ಅಪಾಯ ತರಬಹುದು
ಗರ್ಭಿಣಿ ಮಹಿಳೆಯರಲ್ಲಿ ಶುಂಠಿಯು ವಾಕರಿಕೆ ಕಡಿಮೆ ಮಾಡಬಹುದು. ಆದರೆ. ಕೆಲವು ತಜ್ಞರ ಪ್ರಕಾರ, ಶುಂಠಿಯನ್ನು ಸೇವಿಸುವುದರಿಂದ ಗರ್ಭಪಾತದ ಅಪಾಯವನ್ನು ಹೆಚ್ಚಿಸಬಹುದು. ದಿನಕ್ಕೆ 1500 ಮಿಗ್ರಾಂಗಿಂತ ಕಡಿಮೆ ಸೇವನೆ ಮಾಡುವುದು ಅದು ಅಪಾಯಕಾರಿಯಾಗುವುದಿಲ್ಲ. ಅದಕ್ಕೂ ಹೆಚ್ಚು ಸೇವನೆ ಮಾಡುವುದು ಗರ್ಭಿಣಿಯರಿಗೆ ಅಸುರಕ್ಷಿತವಾಗಿರಬಹುದು.
ಕಣ್ಣು ಮತ್ತು ಚರ್ಮದಲ್ಲಿ ಕಿರಿಕಿರಿ
ಶುಂಠಿಯ ಸಾಮಾನ್ಯ ಅಲರ್ಜಿಯ ಪ್ರತಿಕ್ರಿಯೆಯು ಚರ್ಮದ ದದ್ದು ,ಅಲರ್ಜಿಗಳಲ್ಲಿ ಕಣ್ಣುಗಳು ತುರಿಕೆ, ಚರ್ಮದ ಕೆಂಪು ಮತ್ತು ಚರ್ಮದ ಉರಿಯೂತಗಳನ್ನು ಉಂಟು ಮಾಡಬಹುದು.
ಹೀಗಾಗಿ ಶುಂಠಿ ಸೇವನೆಯ ಮೊದಲು ಅದರ ಅಡ್ಡಪರಿಣಾಮಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಇದರಿಂದ ದೇಹಕ್ಕೆ ಎಷ್ಟು ಅವಶ್ಯಕವೋ ಅಷ್ಟೇ ಸೇವನೆ ಮಾಡಬಹುದು.
ದಂತ ಸಮಸ್ಯೆ
ಇದನ್ನು ಓರಲ್ ಅಲರ್ಜಿ ಸಿಂಡ್ರೋಮ್ ಎಂದೂ ಕರೆಯುತ್ತಾರೆ. ನೀವು ಕೆಲವು ಆಹಾರಗಳನ್ನು ಸೇವಿಸಿದಾಗ ಕೆಲವು ಅಲರ್ಜಿಗಳು ಉಂಟಾಗುತ್ತವೆ. ರೋಗಲಕ್ಷಣಗಳು ಸಾಮಾನ್ಯವಾಗಿ ಕಿವಿ, ಚರ್ಮ ಮತ್ತು ಬಾಯಿಗೆ ನಿರ್ದಿಷ್ಟವಾಗಿರುತ್ತವೆ. ಅಂತಹ ಒಂದು ಅಲರ್ಜಿಯು ನೀವು ಶುಂಠಿಯನ್ನು ಸೇವಿಸಿದಾಗ ಸಂಭವಿಸುತ್ತದೆ. ಎಲ್ಲಾ ವ್ಯಕ್ತಿಗಳಲ್ಲಿ ಅಲ್ಲ, ಆದರೂ ದೇಹದ ಉಷ್ಣತೆ ಹೆಚ್ಚಾಗಿ, ನಿಮ್ಮ ಬಾಯಿಯಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಆದಷ್ಟು ಶುಂಠಿ ಟೀ ಬಳಕೆ ಕಡಿಮೆಯಿರಲಿ.
ರಕ್ತಸ್ರಾವಕ್ಕೆ ಕಾರಣವಾಗಬಹುದು
ಶುಂಠಿಯು ರಕ್ತಸ್ರಾವದ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು. ಶುಂಠಿಯು ಅದರ ಪ್ಲೇಟ್ಲೆಟ್ ವಿರೋಧಿ ಗುಣಲಕ್ಷಣಗಳಿಂದಾಗಿ ರಕ್ತಸ್ರಾವವನ್ನು ಉಂಟುಮಾಡಬಹುದು. ಲವಂಗ, ಬೆಳ್ಳುಳ್ಳಿ, ಜಿನ್ಸೆಂಗ್ ಮತ್ತು ಕೆಂಪು ಕ್ಲೋವರ್ನಂತಹ ಇತರ ಗಿಡಮೂಲಿಕೆಗಳೊಂದಿಗೆ ಶುಂಠಿಯನ್ನು ಸೇವನೆ ಮಾಡಿದಾಗ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಆಹಾರದಲ್ಲಿ ಶುಂಠಿ ರುಚಿಗಷ್ಟೆ ಇರಲಿ.
Side Effects Of Over Consumption Of Ginger Tea.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm