ಬ್ರೇಕಿಂಗ್ ನ್ಯೂಸ್
23-06-22 09:25 pm Source: Vijayakarnataka ಡಾಕ್ಟರ್ಸ್ ನೋಟ್
ನಮ್ಮ ಸುತ್ತಮುತ್ತಲು ಸಿಗುವ ಎಷ್ಟೋ ಹಣ್ಣು, ತರಕಾರಿಗಳು ನಮ್ಮ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಸಹಾಯಕವಾಗಿವೆ. ಅಂತಹ ಹಣ್ಣುಗಳಲ್ಲಿ ಅತ್ತಿ ಹಣ್ಣು ಕೂಡ ಒಂದು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಎತ್ತರದ ಅತ್ತಿ ಮರವನ್ನು ಕಾಣುತ್ತೇವೆ. ಇದರಲ್ಲಿ ಬಿಡುವ ಹಣ್ಣುಗಳು ಹಕ್ಕಿ, ಪಕ್ಷಿಗಳಿಗೆ ಮೃಷ್ಟಾನ್ನ ಭೋಜನದಂತೆ.
ಹಿಂದೂ ಸಂಪ್ರದಾಯದಲ್ಲಿ ಔದುಂಬರ ವೃಕ್ಷ ಎಂದೇ ಈ ಅತ್ತಿ ಮರಕ್ಕೆ ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ಫೈಕಸ್ ರೆಸೆಮೊಸಾ (Ficus Racemosa) ಎಂದಾಗಿದೆ. ಈ ಮರದ ತೊಗಟೆಯು ಹಳದಿ ಬಣ್ಣದಿಂದ ಕೂಡಿದ್ದು, ಅಂಟಾದ ಹಾಲನ್ನು ಸ್ರವಿಸುತ್ತದೆ. ಈ ಮರದಲ್ಲಿ ಗುಂಡಾದ ಹಸಿರು ಕಾಯಿ ಬೆಳೆಯುತ್ತದೆ. ಹಣ್ಣಾದ ಮೇಲೆ ಕೆಂಪು ಬಣ್ಣಕ್ಕೆ ತಿರುಗಿ ಪಕ್ಷಿಗಳ ಕಣ್ಣುಕುಕ್ಕುತ್ತವೆ.
ಗೊಂಚಲಿನ ರೀತಿಯಲ್ಲಿ ಬಿಡುವ ಹಣ್ಣುಗಳಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇಲ್ಲಿದೆ ನೋಡಿ ಅತ್ತಿ ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಉಪಯುಕ್ತ ಮಾಹಿತಿ.
ಹೊಟ್ಟೆ ನೋವಿನ ನಿವಾರಣೆಗೆ
ಅತ್ತಿ ಹಣ್ಣನ್ನು ಸೇವನೆ ಮಾಡಿದರೆ ಮುಟ್ಟಿನ ದಿನಗಳ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಅಲ್ಲದೆ ಹೆಣ್ಣಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಬಿಳಿ ಮುಟ್ಟಿಗೂ ಈ ಅತ್ತಿ ಹಣ್ಣು ಪರಿಹಾರವಾಗಿದೆ. ಅತ್ತಿ ಹಣ್ಣನ್ನು ತಂದು ಚೆನ್ನಾಗಿ ಸೋಸಿ, ಹುಳುಗಳಿಲ್ಲದಂತೆ ಶುಚಿಗೊಳಿಸಿ ಅದರ ರಸವನ್ನು ಮಾಡಿ ಅದಕ್ಕೆ ಕಲ್ಲು ಸಕ್ಕರೆ ಸೇರಿಸಿ ಸೇವನೆ ಮಾಡಿದರೆ ಬಿಳಿ ಮುಟ್ಟು ನಿಯಂತ್ರಣಕ್ಕೆ ಬರುತ್ತದೆ.
ಬಾಯಿಹುಣ್ಣಿನ ನಿವಾರಣೆ
ಅತ್ತಿ ಮರದ ತೊಗಟೆಯನ್ನು ತಂದು ನೀರಿನಲ್ಲಿ ಕುದಿಸಿ ಚಿಟಿಕೆ ಸಕ್ಕರೆ ಹಾಕಿಕೊಂಡು ಕುಡಿದರೆ ಬಾಯಿಹುಣ್ಣು ನಿವಾರಣೆಯಾಗುತ್ತದೆ. ಇದರಿಂದ ದೇಹವೂ ತಂಪಾಗುತ್ತದೆ.
ಅತ್ತಿಕಾಯಿಯನ್ನು ಒಣಗಿಸಿ ಪುಡಿ ಮಾಡಿ ಅದಕ್ಕೆ ಕಲ್ಲುಸಕ್ಕರೆ ಹಾಗೂ ನೀರನ್ನು ಸೇರಿಸಿ ಬಾಯಿ ಮುಕ್ಕಳಿಸಿದರೆ ಮುಟ್ಟಿನ ಸಮಯದಲ್ಲಿ ಆಗುವ ಅಧಿಕ ರಕ್ತಸ್ರಾವ ನಿಲ್ಲುತ್ತದೆ.
ಊತ ನಿವಾರಣೆಗೂ ಸಹಕಾರಿ
ಅತ್ತಿ ಹಣ್ಣಿನ ರಸವನ್ನು ಗೋದಿ ಹಿಟ್ಟಿನಲ್ಲಿ ಮಿಶ್ರಣ ಮಾಡಿ ಬಾವುಗಳಿರುವ ಜಾಗದಲ್ಲಿ ಲೇಪನೆ ಮಾಡಿದರೆ ನೋವಿನಿಂದ ಊದಿಕೊಂಡಿರುವ ದೇಹದ ಭಾಗ ಸರಿಯಾಗುತ್ತದೆ.
ಅದೇ ರೀತಿ ಉಗುರು ಸುತ್ತಾದರೆ ಅತ್ತಿ ಹಣ್ಣನ್ನು ಬಿಡಿಸಿ ಉಗುರಿಗೆ ಕಟ್ಟಿದರೆ ಕೆಟ್ಟ ರಕ್ತ ಹೊರಗಡೆ ಹೋಗಿ ನೋವು, ಉರಿ ಕಡಿಮೆಯಾಗುತ್ತದೆ.
ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ
ಭಾರತವನ್ನು ಹೊರತುಪಡಿಸಿ, ಆಸ್ಟ್ರೇಲಿಯಾ, ಮಲೇಷ್ಯಾ ಮತ್ತು ಚೀನಾದ ಭಾಗಗಳಲ್ಲಿ ಈ ಅತ್ತಿ ಹಣ್ಣು ಬೆಳೆಯುತ್ತದೆ. ಇದರಲ್ಲಿರುವ ವಿಟಮಿನ್ ಬಿ 2 ಕೆಂಪು ರಕ್ತ ಕಣಗಳ ಉತ್ಪಾದನೆಗೆ ನೆರವಾಗುತ್ತದೆ. ಇದಲ್ಲದೆ, ದೇಹದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ತಲುಪಿಸಲು ಸಹಾಯ ಮಾಡುವ ಪ್ರತಿಕಾಯಗಳನ್ನು ತಯಾರಿಸಲು ಅತ್ತಿ ಹಣ್ಣು ಉಪಯುಕ್ತವಾಗಿದೆ.
ಮಧುಮೇಹ ನಿಯಂತ್ರಣ
ಅತ್ತಿ ಮರದ ತೊಗಟೆಯನ್ನು ಒಣಗಿಸಿ ನಯವಾದ ಪುಡಿ ಮಾಡಿಟ್ಟುಕೊಳ್ಳಿ. ಇದನ್ನು ಬಿಸಿ ನೀರಿಗೆ ಹಾಕಿ ಪ್ರತಿ ದಿನ ಎರಡು ಬಾರಿ ಕುಡಿಯುತ್ತಾ ಬಂದರೆ ಮಧುಮೇಹ ನಿಯಂತ್ರಣದಲ್ಲಿ ಇರುತ್ತದೆ.
ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ, ಅತ್ತಿಹಣ್ಣಿನ ರಸ ತೆಗೆದು ಸಕ್ಕರೆ ಸೇರಿಸಿ ಸೇವನೆ ಮಾಡಬೇಕು ಆಗ ದೇಹ ತಂಪಾಗಿ ರಕ್ತಸ್ರಾವದ ಸಮಸ್ಯೆ ನಿವಾರಣೆಯಾಗುತ್ತದೆ.
ಅಲ್ಲದೆ ದೇಹದಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸಲೂ ಕೂಡ ನೆರವಾಗುತ್ತದೆ. ಆದರೆ ನೆನಪಿಡಿ ಆದಷ್ಟು ತಾಜಾ ಅತ್ತಿ ಹಣ್ಣುಗಳು ಸಿಕ್ಕಿರೆ ತಿನ್ನಿ, ಜೊತೆಗೆ ಹಣ್ಣಿನಲ್ಲಿರುವ ಹುಳುಗಳ ಬಗ್ಗೆ ಎಚ್ಚರಿಕೆವಹಿಸಿ ಸೇವನೆ ಮಾಡಿ.
Health Benefits Of Cluster Fig Fruit.
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 11:01 am
HK News Desk
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
19-08-25 11:07 pm
Mangalore Correspondent
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
Ullal Municipal Commissioner: ಉಳ್ಳಾಲ ನಗರಸಭೆಯಲ...
19-08-25 08:28 pm
Puttur, Baby, Sreekrishna J. Rao: ಬಿಜೆಪಿ ಮುಖಂ...
19-08-25 07:04 pm
Activists Mahesh Shetty Thimarodi, Harish Poo...
18-08-25 06:14 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm