ಸಕ್ಕರೆ ಕಾಯಿಲೆ ಇರುವವರು ಸೇಬು ಹಣ್ಣನ್ನು ತಿನ್ನಬಹುದೇ?

21-06-22 07:29 pm       Source: Vijayakarnataka   ಡಾಕ್ಟರ್ಸ್ ನೋಟ್

ಮಧುಮೇಹಿಗಳು ಪ್ರತಿದಿನ ಸಣ್ಣ ಗಾತ್ರದ ಸೇಬು ಹಣ್ಣನ್ನು ತಿನ್ನುವುದರಿಂದ ಸಾಕಷ್ಟು ಲಾಭಗಳಿವೆ. ಸೇಬು ಸೇವಿಸುವುದರಿಂದ ಸಕ್ಕರೆ ಮಟ್ಟದಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ.

ಮಧುಮೇಹ ರೋಗಿಗಳಿಗೆ ತಮ್ಮ ಆಹಾರವನ್ನು ಆಯ್ಕೆ ಮಾಡುವುದು ಯಾವಾಗಲೂ ದೊಡ್ಡ ಸವಾಲಾಗಿದೆ. ಹೆಚ್ಚಿನ ಸಕ್ಕರೆ ಅಂಶಗಳ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುವ ಅಪಾಯವಿದೆ. ಹಾಗಾಗಿ ವೈದ್ಯರು ಮಧುಮೇಹಿಗಳಿಗೆ ಆಹಾರವನ್ನು ಆಯ್ಕೆ ಮಾಡುವಾಗ ಬಹಳ ಜಾಗರೂಕತೆಯಿಂದ ಇರಲು ಸೂಚಿಸುತ್ತಾರೆ. ಅದರಲ್ಲೂ ಹಣ್ಣುಗಳನ್ನು ಆಯ್ಕೆ ಮಾಡುವಾಗಂತೂ ಮಧುಮೇಹಿಗಳು ಯಾವ ಹಣ್ಣುಗಳನ್ನು ಸೇವಿಸಬೇಕು, ಕಡಿಮೆ ಸಕ್ಕರೆ ಅಂಶಗಳನ್ನು ಹೊಂದಿದೆಯೇ ಎನ್ನುವುದನ್ನು ನೋಡಬೇಕು.

​ಗ್ಲೈಸೆಮಿಕ್ ಇಂಡೆಕ್ಸ್ ಕಡೆ ಗಮನ ನೀಡಬೇಕು

Suffering from diabetes? Five apps to help you manage your lifestyle better  - The Economic Times

ಆಹಾರ ತಜ್ಞರ ಪ್ರಕಾರ, ಮಧುಮೇಹಿಗಳಿಗೆ ಆಹಾರವನ್ನು ಆಯ್ಕೆಮಾಡುವಾಗ, ಗ್ಲೈಸೆಮಿಕ್ ಇಂಡೆಕ್ಸ್ ಗೆ ಗಮನ ಕೊಡಬೇಕು. ಗ್ಲೈಸೆಮಿಕ್ ಸೂಚ್ಯಂಕವು ಆಹಾರದಲ್ಲಿ ಕಂಡುಬರುವ ಕಾರ್ಬೋಹೈಡ್ರೇಟ್‌ಗಳು ಗ್ಲೂಕೋಸ್ ಆಗಿ ಬದಲಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಅಳತೆಯಾಗಿದೆ. ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎನ್ನುವುದನ್ನು ನೀವು ಕೇಳಿರಬಹುದು. ಹಾಗಾದರೆ ಮಧುಮೇಹಿಗಳೂ ಸೇಬು ಹಣ್ಣನ್ನು ತಿನ್ನಬಹುದುದೇ ಎಂಬುವುದನ್ನು ನಾವಿಲ್ಲಿ ತಿಳಿಯೋಣ.

​ಮಧುಮೇಹಿಗಳಿಗೆ ಸೇಬು

7 easy ways to core and peel apples without getting carpal tunnel syndrome  – SheKnows

ಮಧುಮೇಹಿಗಳಿಗೆ ಸೇಬು ಪ್ರಯೋಜನಕಾರಿ ಹಣ್ಣು ಎಂದು ಆಹಾರ ತಜ್ಞರು ಹೇಳುತ್ತಾರೆ. ಸೇಬುಗಳಲ್ಲಿ ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿದ್ದರೂ, ಅವುಗಳಲ್ಲಿ ಕಂಡುಬರುವ ಹೆಚ್ಚಿನ ಫೈಬರ್ ಅಂಶವು ನಿಮಗೆ ವಿಶೇಷ ಪ್ರಯೋಜನವನ್ನು ನೀಡುತ್ತದೆ. ಸೇಬಿನಲ್ಲಿರುವ ಫ್ರಕ್ಟೋಸ್ ಫೈಬರ್ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುವುದಿಲ್ಲ. ಗ್ಲೈಸೆಮಿಕ್ ಸೂಚ್ಯಂಕದಲ್ಲಿ ಮಧುಮೇಹಿಗಳಿಗೆ ಸೇಬುಗಳನ್ನು ಸೂಕ್ತವೆಂದು ಪರಿಗಣಿಸಲಾಗುತ್ತದೆ.

ಮಧುಮೇಹ ರೋಗಿಯು ದಿನಕ್ಕೆ ಒಂದು ಮಧ್ಯಮ ಗಾತ್ರದ ಸೇಬನ್ನು ತಿನ್ನಬಹುದು. ಇದನ್ನು ಹೋಳುಗಳಾಗಿ ಕತ್ತರಿಸಿ ಸೇಬಿನ ಸಿಪ್ಪೆ ಸಮೇತ ತಿನ್ನಬಹುದು. ಸೇಬುಗಳನ್ನು ಜ್ಯೂಸ್ ಮಾಡುವುದರಿಂದ ಅವುಗಳ ಫೈಬರ್ ಅಂಶ ಕಡಿಮೆಯಾಗುತ್ತದೆ ಮತ್ತು ಸಕ್ಕರೆಯ ಅಂಶ ಹೆಚ್ಚಾಗುತ್ತದೆ.

ಮಧುಮೇಹಿಗಳು ಸೇಬನ್ನು ಹಾಗೆಯೇ ಸೇವಿಸಬೇಕು

ಮಧುಮೇಹಿಗಳಿಗೆ ಯಾವ ಹಣ್ಣುಗಳು ಸೂಕ್ತ? ಅದೂ ಎಷ್ಟು ಪ್ರಮಾಣದಲ್ಲಿ? | Fruits and their  recommended servings for diabetics - Kannada BoldSky

ಮಧುಮೇಹ ರೋಗಿಯು ದಿನಕ್ಕೆ ಒಂದು ಮಧ್ಯಮ ಗಾತ್ರದ ಸೇಬನ್ನು ತಿನ್ನಬಹುದು. ಇದನ್ನು ಹೋಳುಗಳಾಗಿ ಕತ್ತರಿಸಿ ಸೇಬಿನ ಸಿಪ್ಪೆ ಸಮೇತ ತಿನ್ನಬಹುದು. ಸೇಬುಗಳನ್ನು ಜ್ಯೂಸ್ ಮಾಡುವುದರಿಂದ ಅವುಗಳ ಫೈಬರ್ ಅಂಶ ಕಡಿಮೆಯಾಗುತ್ತದೆ ಮತ್ತು ಸಕ್ಕರೆಯ ಅಂಶ ಹೆಚ್ಚಾಗುತ್ತದೆ.

​ಮಧುಮೇಹಕ್ಕೆ ಸೇಬಿನ ಪ್ರಯೋಜನಗಳು

diabetic-friendly fruits: ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಮಧುಮೇಹಿಗಳಿಗೆ ಈ 8  ಹಣ್ಣುಗಳು ಬೆಸ್ಟ್ - Vijaya Karnataka

  • ಸೇಬಿನಲ್ಲಿ ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿದ್ದರೂ, ಹೆಚ್ಚಿನ ಫೈಬರ್ ಅಂಶವು ಅಪಾಯವನ್ನು ಕಡಿಮೆ ಮಾಡುತ್ತದೆ.
  • ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಸಕ್ಕರೆಯ ಮಟ್ಟವನ್ನು ಸ್ಥಿರಗೊಳಿಸುತ್ತದೆ.
  • ಫೈಬರ್‌ನಿಂದಾಗಿ ಸೇಬಿನಲ್ಲಿರುವ ಫ್ರಕ್ಟೋಸ್ ರಕ್ತದಲ್ಲಿನ ಗ್ಲೂಕೋಸ್ ಮಟ್ಟವದ ಮೇಲೆ ಪರಿಣಾಮ ಬೀರುವುದಿಲ್ಲ.
  • ಸೇಬುಗಳ ನಿಯಮಿತ ಸೇವನೆಯು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಸೇಬು ಮಧುಮೇಹಿಗಳಿಗೆ ಒಳ್ಳೆಯದು ಎಂದು ಹೇಳಲಾಗುತ್ತದೆ.
  • ಚರ್ಮದಲ್ಲಿರುವ ಉತ್ಕರ್ಷಣ ನಿರೋಧಕಗಳು ಮೇದೋಜ್ಜೀರಕ ಗ್ರಂಥಿಯನ್ನು ಇನ್ಸುಲಿನ್ ಬಿಡುಗಡೆ ಮಾಡಲು ಉತ್ತೇಜಿಸುತ್ತದೆ.
  • ಜೀವಕೋಶಗಳಲ್ಲಿ ಸಕ್ಕರೆಯನ್ನು ಸರಿಯಾಗಿ ಹೀರಿಕೊಳ್ಳಲು ಇದು ಸಹಾಯ ಮಾಡುತ್ತದೆ.

​ತೂಕ ಇಳಿಕೆಗೆ ಸಹಕಾರಿ

diabetic diet: ಸಕ್ಕರೆ ಕಾಯಿಲೆ ಇರುವವರು ಸೇಬು ಹಣ್ಣನ್ನು ತಿನ್ನಬಹುದೇ? - Vijaya  Karnataka

ಸೇಬುವನ್ನು ಹಾಲಿನೊಂದಿಗೆ ಸೇವಿಸುವುದು ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ. ಇವೆರಡೂ ಕಡಿಮೆ GI ಮಟ್ಟವನ್ನು ಹೊಂದಿರುತ್ತವೆ, ಆದ್ದರಿಂದ ಆಪಲ್ ಮಿಲ್ಕ್‌ಶೇಕ್‌ಗಳು ತೂಕ ಇಳಿಸುವವರಿಗೆ ಪ್ರಯೋಜನಕಾರಿಯಾಗಿದೆ.

ಖಾಲಿ ಹೊಟ್ಟೆಯಲ್ಲಿ ಸೇಬುಗಳನ್ನು ತಿನ್ನುವುದನ್ನು ತಪ್ಪಿಸಿ. ಊಟದ ಜೊತೆಗೆ ಸೇಬುಗಳನ್ನು ತಿನ್ನುವುದರಿಂದ ಹೆಚ್ಚು ಕಾಲ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ನೀವು ಕಡಿಮೆ ಕ್ಯಾಲೊರಿಗಳನ್ನು ಸೇವಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಮತ್ತು ಇದರಿಂದ ತೂಕ ವೇಗವಾಗಿ ಕಡಿಮೆ ಮಾಡುತ್ತದೆ.

Can Diabetic Patients Eat Apple.