ಬ್ರೇಕಿಂಗ್ ನ್ಯೂಸ್
16-06-22 07:45 pm Source: Vijayakarnataka ಡಾಕ್ಟರ್ಸ್ ನೋಟ್
ಆಲೂಗಡ್ಡೆ ಎಂದರೆ ಹೆಚ್ಚಿನವರು ಇಷ್ಟಪಡುತ್ತಾರೆ. ತಮ್ಮ ಪ್ರತಿ ಆಹಾರಪದ್ಧತಿಯಲ್ಲಿ ಆಲೂಗಡ್ಡೆಯನ್ನು ನೆನೆಸಿಕೊಳ್ಳದೇ ಇರುವುದಿಲ್ಲ. ಆದರೆ ಕೆಲವರು ಆಲೂಗಡ್ಡೆ ಸೇವನೆಯಿಂದ, ಹೊಟ್ಟೆ ಉಬ್ಬರ ಆಗುತ್ತದೆ, ಇಲ್ಲಾಂದ್ರೆ ಗ್ಯಾಸ್ಟ್ರಿಕ್ ಆಗುತ್ತದೆ ಎನ್ನುವ ಒಂದೇ ಕಾರಣಕ್ಕೆ, ಈ ತರಕಾರಿಯಿಂದ ದೂರ ನಿಲ್ಲು ತ್ತಾರೆ. ಇನ್ನು ಒಂದು ವೇಳೆ ಶೀತ, ನೆಗಡಿಯಂತಹ ಸಮಸ್ಯೆಗಳು ಕಂಡು ಬಂದರೆ, ಆಲೂಗಡ್ಡೆಯನ್ನು ತಿನ್ನಬಾರದು ಎನ್ನುವ ಕಾರಣಕ್ಕೆ ವಯಸ್ಸಾದವರು ಹಾಗೂ ಪುಟ್ಟ ಮಕ್ಕಳನ್ನು ಮನೆಯಲ್ಲಿರುವ ಸದಸ್ಯರು ಆಲೂಗಡ್ಡೆಯಿಂದ ದೂರ ಉಳಿಸುತ್ತಾರೆ.
ಆದರೆ ನಿಜ ಹೇಳಬೇಕೆಂದರೆ, ಆಹಾರಕ್ರಮದಲ್ಲಿ ಆಲೂಗಡ್ಡೆಯನ್ನು ಬಳಸುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಮುಖ್ಯವಾಗಿ ಅಧಿಕ ರಕ್ತದಒತ್ತಡ ಮತ್ತು ಹೃದಯದ ಸಮಸ್ಯೆ ಗಳು ಇದ್ದವರು, ತಮ್ಮ ಆಹಾರಪದ್ಧತಿಯಲ್ಲಿ ಮಿತಪ್ರಮಾಣದಲ್ಲಿ ಆಲೂಗಡ್ಡೆಯನ್ನು ಸೇರಿಸುತ್ತಾ ಬರುವುದರಿಂದ, ಸಾಕಷ್ಟು ಪ್ರಯೋಜನಗಳನ್ನು ನಿರೀಕ್ಷಿಸಬಹುದಾಗಿದೆ.
ಆಲೂಗಡ್ಡೆಯ ಪ್ರಯೋಜನಗಳು
ಮಾರುಕಟ್ಟೆಯಲ್ಲಿ ಸಿಗುವ ಒಂದೊಂದು ಬಗೆಯ ತರಕಾರಿ ಒಂದೊಂದು ರೀತಿಯ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ಉದಾಹರಣೆಗೆ ನೋಡುವುದಾದರೆ ಕ್ಯಾರೆಟ್ ತಿಂದರೆ, ತ್ವಚೆಗೆ ಹಾಗೂ ಕಣ್ಣಿಗೆ ಒಳ್ಳೆಯದು ಎಂದು ಹೇಳುತ್ತಾರೆ. ಸೌತೆಕಾಯಿ ಸೇವಿಸಿದರೆ, ದೇಹದಲ್ಲಿ ನೀರಿನಾಂಶದ ಕೊರತೆ ಕಂಡು ಬರುವುದಿಲ್ಲ ಎಂದು ಹೇಳಲಾಗುತ್ತದೆ, ಅಂತೆಯೇ ಆಲೂಗಡ್ಡೆಯನ್ನು ಕೂಡ ಮಿತವಾಗಿ ಸೇವನೆ ಮಾಡುತ್ತಾ ಬರುವುದರಿಂದ, ಆರೋಗ್ಯಕ್ಕೆ ಬೇಕಾಗುವ ಎಲ್ಲಾ ರೀತಿಯ ಪೌಷ್ಟಿಕ ಸತ್ವಗಳು ಸಿಕ್ಕಂತೆ ಆಗುತ್ತದೆ.
ಇನ್ನು ಆರೋಗ್ಯ ತಜ್ಞರು ಹೇಳುವ ಪ್ರಕಾರ, ಆಲೂಗಡ್ಡೆಯನ್ನು ಅತಿಯಾದ ತಾಪಮಾನದಲ್ಲಿ ಬೇಯಿಸಿದರೆ ಅದರಲ್ಲಿ ಕಂಡುಬರುವ, ಎಲ್ಲಾ ಪೌಷ್ಟಿಕಾಂಶಗಳು ನಷ್ಟ ಉಂಟಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು, ಸಾಧ್ಯವಾದರೆ, ಆಲೂಗಡ್ಡೆಯನ್ನು ಮೈಕ್ರೋವೇವ್ ಓವನ್ ಮೂಲಕ ಬಿಸಿಮಾಡಿ ಸೇವನೆ ಮಾಡುವುದರಿಂದ, ಇದರಲ್ಲಿ ಕಂಡು ಬರುವ ಪೌಷ್ಟಿಕ ಸತ್ವಗಳ ಜೊತೆಗೆ, ಖನಿಜಾಂಶಗಳು ಹಾಗೂ ಆಂಟಿಆಕ್ಸಿಡೆಂಟ್ ಅಂಶಗಳು ಹಾಗೆ ಉಳಿದು, ಆರೋಗ್ಯವನ್ನು ವೃದ್ಧಿಸಲು ನೆರವಾಗುತ್ತದೆ.
ಅಧಿಕರಕ್ತದೊತ್ತಡದ ಸಮಸ್ಯೆಗೆ ಒಳ್ಳೆಯದು
ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಕೊಬ್ಬಿನಾಂಶ ಕಡಿಮೆ ಆಗುತ್ತದೆ
ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಕಂಡುಬರುತ್ತದೆ
ಆಲೂಗಡ್ಡೆಯಲ್ಲಿ ವಿಟಮಿನ್ ಬಿ6 ಯಥೇಚ್ಛವಾಗಿ ಸಿಗುತ್ತದೆ
Can Someone How Suffering High Blood Pressure, Heart Problem Eat Potatoes These Things You Must Know.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm