ಬ್ರೇಕಿಂಗ್ ನ್ಯೂಸ್
10-06-22 08:33 pm Source: Vijayakarnataka ಡಾಕ್ಟರ್ಸ್ ನೋಟ್
ಈಗಿನ ಕಾಲದಲ್ಲಿ ಎಲ್ಲವನ್ನೂ ನಿಭಾಯಿಸುವುದು ಒಂದು ಸವಾಲೇ ಆಗಿದೆ. ವಿಶೇಷವಾಗಿ ಮಹಿಳೆಯರು ಕೆಲಸ, ಕುಟುಂಬ ಮತ್ತು ಆರೋಗ್ಯದ ನಡುವೆ ಸರಿಯಾದ ಸಮತೋಲನವನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಎಲ್ಲವನ್ನು ಸರಿಯಾಗಿ ನಿಭಾಯಿಸಬೇಕಾದರೆ ಆರೋಗ್ಯವೂ ಚೆನ್ನಾಗಿ ಇರಬೇಕು. ಆರೋಗ್ಯಕರ ಆಹಾರವು ಜೀವನದಲ್ಲಿ ಬಹಳಷ್ಟು ವಿಷಯಗಳನ್ನು ಬದಲಾಯಿಸುತ್ತದೆ.
ಅಂತಹ ಆರೋಗ್ಯಕರ ಅಹಾರಗಳಲ್ಲಿ ಜೇನುತುಪ್ಪ ಕೂಡಾ ಒಂದು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ದೇಹಕ್ಕೆ ಚೈತನ್ಯವನ್ನು ನೀಡುತ್ತದೆ. ಮಹಿಳೆಯರ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಬಹಳ ಹಿಂದಿನಿಂದಲೂ ಇದನ್ನು ಬಳಸಲಾಗುತ್ತಿದೆ.
ಗಟ್ಟಿಮುಟ್ಟಾಗಿರಿಸುತ್ತದೆ
ಪಿರಿಯೆಡ್ಸ್ ಸಮಯದಲ್ಲಿ ಮಹಿಳೆಯರು ಹಾರ್ಮೋನುಗಳ ಬದಲಾವಣೆಗಳು, ನೋವು, ಆತಂಕ, ಖಿನ್ನತೆ ಮತ್ತು ದೌರ್ಬಲ್ಯವನ್ನು ಅನುಭವಿಸುತ್ತಾರೆ. ಈಗಿನ ಕಾಲದ ಮಹಿಳೆಯರು ಪಿರಿಯೆಡ್ಸ್ ನೋವು ಶುರುವಾದರೆ, ಸಣ್ಣ ಜ್ವರ ಬಂದರೆ ಬೆಡ್ನಿಂದ ಕೆಳಗೆ ಇಳಿಯುವುದೇ ಇಲ್ಲ. ದೌರ್ಬಲ್ಯದಿಂದ ಮಲಗಿರುತ್ತಾರೆ.
ಅದೇ ಹಿಂದಿನ ಕಾಲದಲ್ಲಿ ಮಹಿಳೆಯರು ಜ್ವರ ಬಂದರೂ ಗಟ್ಟಿಮುಟ್ಟಾಗಿರುತ್ತಿದ್ದರು. ಇದಕ್ಕೆ ಕಾರಣ ಜೇನುತುಪ್ಪ. ಈ ಜೇನುತುಪ್ಪ ಮಹಿಳೆಯರಿಗೆ ಹೇಗೆ ಉಪಕಾರಿಯಾಗಿದೆ ಹಾಗೂ ಅದನ್ನು ದಿನನಿತ್ಯದ ಆಹಾರದಲ್ಲಿ ಹೇಗೆ ಸೇರಿಸಿಕೊಳ್ಳಬೇಕು ಎನ್ನುವುದನ್ನು ನೋಡೋಣ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಆಂಟಿಆಕ್ಸಿಡೆಂಟ್ಗಳು, ವಿಟಮಿನ್ಗಳು ಮತ್ತು ಖನಿಜಗಳಿಂದ ತುಂಬಿರುವ ಜೇನುತುಪ್ಪವು ಆರೋಗ್ಯವನ್ನು ಸಮೃದ್ಧಗೊಳಿಸುವ ಪೋಷಕಾಂಶಗಳಿಂದಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ವಿರೇಚಕವಾಗಿ ಕಾರ್ಯನಿರ್ವಹಿಸುತ್ತದೆ. ಚಯಾಪಚಯವನ್ನು ಹೆಚ್ಚಿಸುತ್ತದೆ, ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ. ಜ್ವರ, ಅಲರ್ಜಿಗಳು, ಶೀತ, ಗಂಟಲು ನೋವನ್ನು ಶಮನಮಾಡಲು ಸಹಾಯ ಮಾಡುತ್ತದೆ.
ನೋವನ್ನು ಶಮನ ಮಾಡುವುದು
ಮಹಿಳೆಯರು ತಮ್ಮ ಋತುಚಕ್ರದ ಮೊದಲು ಅಥವಾ ಋತುಚಕ್ರದ ಸಮಯದಲ್ಲಿ ಮೈ ಕೈ ನೋವು, ಬೆನ್ನು ನೋವು ಅಥವಾ ತಲೆನೋವು ಮುಂತಾದ ಹಲವಾರು ರೋಗಲಕ್ಷಣಗಳನ್ನು ಹೊಂದಿರುತ್ತಾರೆ. ಈ ಸಮಯದಲ್ಲಿ ಉಗುರುಬೆಚ್ಚಗಿನ ನೀರಿನಲ್ಲಿ 1 ಚಮಚ ಜೇನುತುಪ್ಪವನ್ನು ಸೇರಿಸಿ ಅಥವಾ ಶುಂಠಿ ಅಥವಾ ಶುಂಠಿ ಚಹಾದ ಜೊತೆ ಜೇನುತುಪ್ಪವನ್ನು ಸೇರಿಸಿ ಸೇವಿಸಿ. ಇದು ದೇಹದಲ್ಲಿರುವ ನೋವನ್ನು ಶಮನ ಮಾಡಲು ಸಹಕರಿಸುವುದು ಜೊತೆಗೆ ದೇಹದಲ್ಲಿ ಉರಿಯೂತವನ್ನೂ ಕಡಿಮೆ ಮಾಡಲು ಸಹಾಯ ಮಾಡುತ್ತದೆ
ಹಾರ್ಮೋನುಗಳ ಅಸಮತೋಲನವನ್ನು ಸರಿಮಾಡುವುದು
ಮಹಿಳೆಯರು ಸಾಮಾನ್ಯವಾಗಿ ಹಾರ್ಮೋನುಗಳ ಅಸಮತೋಲನದ ಸಮಸ್ಯೆಯಿಂದ ಬಳಲುತ್ತಾರೆ. ಇದು ಟೆಸ್ಟೋಸ್ಟೆರಾನ್ ಮಟ್ಟದಲ್ಲಿನ ಅಸಮತೋಲನದ ಪರಿಣಾಮವಾಗಿದೆ. ಇದು ದೀರ್ಘಾವಧಿಯಲ್ಲಿ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿದಿನ ಜೇನುತುಪ್ಪವನ್ನು ಸೇವಿಸುವುದರಿಂದ ಟೆಸ್ಟೋಸ್ಟೆರಾನ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸುತ್ತದೆ.
Reasons Behind Women Need To Have Honey Daily.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm