ಬ್ರೇಕಿಂಗ್ ನ್ಯೂಸ್
09-06-21 04:25 pm Filmbeat : Bharath Kumar K ಸಿನಿಮಾ
ಕೋವಿಡ್ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸೆಲೆಬ್ರಿಟಿಗಳು ಹಲವು ರೀತಿಯಲ್ಲಿ ಸಹಾಯ ಹಸ್ತ ಚಾಚಿದ್ದಾರೆ. ದಿನಸಿ ಕಿಟ್, ಆಕ್ಸಿಜನ್, ವೆಂಟಿಲೇಟರ್, ಆಂಬುಲೆನ್ಸ್ ಹೀಗೆ ಅನೇಕ ರೀತಿಯಲ್ಲಿ ನೆರವು ನೀಡಿದ್ದಾರೆ.
ಇದೀಗ, ಚೆಸ್ ಆಟಕ್ಕೆ ಸಂಬಂಧಿಸಿದ ಸಮುದಾಯಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಚೆಸ್.ಕಾಮ್ ಸಂಸ್ಥೆ 'ಚೆಕ್ಮೆಟ್ ಕೋವಿಡ್' ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಇದರಲ್ಲಿ ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ ಎಂಬ ವಿಚಾರ ತಿಳಿದಿದೆ.
ಜೂನ್ 13 ರಂದು ಆ ಕಾಂಪಿಟೇಶನ್ ನಡೆಯಲಿದ್ದು, ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಭಾರತ ಚೆಸ್ ಮಾಸ್ಟರ್ ವಿಶ್ವನಾಥ್ ಆನಂದ್ ಎದುರು ಸೆಲೆಬ್ರಿಟಿಗಳು ಚೆಸ್ ಆಡಲಿದ್ದಾರೆ.

ಚೆಸ್.ಕಾಮ್ ವಿಶ್ವನಾಥ್ ಆನಂದ್ ಎದುರು ಆಡಲಿರುವ ಮೊದಲ ಸೆಲೆಬ್ರಿಟಿ ಹೆಸರು ಬಹಿರಂಗಗೊಂಡಿದೆ. ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಚೆಸ್ ಮಾಸ್ಟರ್ ವಿ ಆನಂದ್ ಜೊತೆ ಪ್ರದರ್ಶಕ ಪಂದ್ಯವನ್ನಾಡಲಿದ್ದಾರೆ ಎಂದು ಪ್ರಕಟಿಸಿದೆ. ಅಂದ್ಹಾಗೆ, ಈ ಹಿಂದೆಯೇ ವಿಶ್ವನಾಥ್ ಆನಂದ್ ಜೊತೆ ಅಮೀರ್ ಖಾನ್ ಚೆಸ್ ಆಡಿದ್ದಾರೆ. ಚೆಸ್ ಆಟದಲ್ಲಿ ಅಮೀರ್ ಖಾನ್ ಹೆಚ್ಚು ಆಸಕ್ತಿ ಹೊಂದಿದ್ದು, ಚಿತ್ರೀಕರಣದ ಬಿಡುವಿನ ಸಮಯದಲ್ಲೂ ಅಮೀರ್ ಚೆಸ್ ಆಡ್ತಾರೆ ಎಂದು ಸಹಕಲಾವಿದರು ಹೇಳಿಕೊಂಡಿದ್ದಾರೆ.



ಅಮೀರ್ ಖಾನ್ ಮತ್ತು ವಿಶ್ವನಾಥ್ ಅನಂದ್ ಪಂದ್ಯವನ್ನು ಹಿಂದಿ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟ ಹೃತಿಕ್ ರೋಷನ್ ಪ್ರಚಾರ ಮಾಡುವುದರ ಮೂಲಕ ಚೆಸ್.ಕಾಮ್ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದಾರೆ.
ಜೂನ್ 13 ರಂದು ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಸೆಲೆಬ್ರಿಟಿ ಎಡಿಷನ್ ನಡೆಯಲಿದ್ದು, ಆ ಪಂದ್ಯಗಳ ನೇರ ಪ್ರಸಾರ ಚೆಸ್.ಕಾಮ್ ಯೂಟ್ಯೂಬ್ ಚಾನಲ್ನಲ್ಲಿ ಪ್ರಸಾರವಾಗಲಿದೆ.
(Kannada Copy of Filmbeat Kannada)
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am