ಬ್ರೇಕಿಂಗ್ ನ್ಯೂಸ್
06-05-21 11:43 am Source: FILMIBEAT Shruthi Gk ಸಿನಿಮಾ
ಕನ್ನಡದ ಹಲವು ಸಿನಿಮಾ ಸೆಲೆಬ್ರಿಟಿಗಳು ಇತ್ತೀಚಿನ ದಿನಗಳಲ್ಲಿ ಕೊರೊನಾ ಕಾರಣಕ್ಕೆ ನಿಧನ ಹೊಂದಿದ್ದಾರೆ. ಆ ಸಾಲಿಗೆ ಇಂದು ಮತ್ತೊಂದು ಸೇರ್ಪಡೆಯಾಗಿದೆ. ಕನ್ನಡಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಖ್ಯಾತ ನಿರ್ದೇಶಕ ರೇಣುಕಾ ಶರ್ಮಾ ಅವರು ಕೊರೊನಾದಿಂದಾಗಿ ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ.
'ಕವಿರತ್ನ ಕಾಳಿದಾಸ', 'ಅಂಜದ ಗಂಡು', 'ಕಿಂದರ ಜೋಗಿ' ಸೇರಿದಂತೆ ಹಲವು ಸಿನಿಮಾಗಳನ್ನು ರೇಣುಕಾ ಶರ್ಮಾ ನಿರ್ದೇಶನ ಮಾಡಿದ್ದರು.
ಎರಡು ದಿನಗಳ ಹಿಂದಷ್ಟೆ ರೇಣುಕಾ ಶರ್ಮಾ ಅವರನ್ನು ಕೊರೊನಾ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರೇಣುಕಾ ಶರ್ಮಾ ನಿಧನ ಹೊಂದಿದ್ದಾರೆ. ಮೈಸೂರಿನ ಟಿ.ನರಸೀಪುರದವರಾದ ರೇಣುಕಾ ಶರ್ಮಾ ಅವರು 1960 ರಲ್ಲಿ ಚಿತ್ರರಂಗ ಪ್ರವೇಶಿಸಿದವರು.

ಸಿನಿಮಾ ನಟ ಆಗಲೇಬೇಕೆಂಬ ಕನಸು ಹೊತ್ತು ಮದ್ರಾಸಿಗೆ ಹೋಗಿ ಮೊದಲ ಬಾರಿಗೆ 'ಸರ್ವಜ್ಞ ಮೂರ್ತಿ' ಸಿನಿಮಾಕ್ಕೆ ಸಹಾಯಕನಾಗಿ ಕೆಲಸ ಮಾಡಿ ಅಲ್ಲಿಂದ ಸಿನಿಮಾ ಪಯಣ ಆರಂಭಿಸಿದರು. 20 ವರ್ಷಗಳ ಬಳಿಕ 1980 ರಲ್ಲಿ ಮೊದಲ ಬಾರಿಗೆ ಸ್ವಂತವಾಗಿ ನಿರ್ದೇಶನ ಮಾಡಿದರು.
ರೇಣುಕಾ ಶರ್ಮಾ ಮೊದಲ ಸಿನಿಮಾ 'ಅನುಪಮಾ'. ತೆಲುಗು, ತಮಿಳಿನಲ್ಲಿಯೂ ಕೆಲಸ ಮಾಡಿರುವ ರೇಣುಕಾ ಶರ್ಮಾ ಜಯಲಲಿತಾ, ಎಎನ್ಆರ್ ಅವರ ಸಿನಿಮಾಗಳಿಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಚಂದನವನದ ಹಲವು ಮಂದಿ ಸೆಲೆಬ್ರಿಟಿಗಳು ಕೆಲವೇ ದಿನಗಳಲ್ಲಿ ಕೊರೊನಾದಿಂದ ಜೀವ ಕಳೆದುಕೊಂಡಿದ್ದಾರೆ. ಚಂದನವನದ ಯುವ ನಿರ್ಮಾಪಕ ರಾಜಶೇಖರ್, ಖ್ಯಾತ ನಿರ್ಮಾಪಕ ರಾಮು, ನಿರ್ಮಾಪಕ ಚಂದ್ರಶೇಖರ್, ಮೇಕಪ್ಮ್ಯಾನ್ ಸೀನ, ಪುಟ್ಟಣ ಕಣಗಾಲ್ ಪುತ್ರ, ಡಿಸೈನರ್ ಮಸ್ತಾನ್ ಇವರೆಲ್ಲರುಗಳು ಕೆಲವೇ ದಿನಗಳ ಅಂತರದಲ್ಲಿ ಕೊರೊನಾಕ್ಕೆ ಬಲಿ ಆಗಿದ್ದಾರೆ. ನಿನ್ನೆಯಷ್ಟೆ ಯುವ ನಿರ್ದೇಶಕ ಸಂತೋಶ್ ಕೋವಿಡ್ನಿಂದ ಸಾವನ್ನಪ್ಪಿದ್ದರು.
This News Article Is A Copy Of FILMIBEAT
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am