ಬ್ರೇಕಿಂಗ್ ನ್ಯೂಸ್
10-04-21 06:57 pm Source: FILMIBEAT ಸಿನಿಮಾ
ಬಾಲಿವುಡ್ ನಟ ಅಜಯ್ ದೇವಗನ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಮೇಡೇ' ಸಿನಿಮಾದ ಚಿತ್ರೀಕರಣ ಮುಂದೂಡಿಕೆಯಾಗಿದೆ. ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ನಿಗದಿಯಾಗಿದ್ದ ಶೂಟಿಂಗ್ ತಾತ್ಕಾಲಿಕವಾಗಿ ಮುಂದಕ್ಕೆ ಹಾಕಲಾಗಿದೆ. 2020ರ ಡಿಸೆಂಬರ್ ತಿಂಗಳಲ್ಲಿ ಸೆಟ್ಟೇರಿದ್ದ 'ಮೇಡೇ' ಸಿನಿಮಾ ಅದಾಗಲೇ ಕೆಲವು ದೃಶ್ಯಗಳ ಚಿತ್ರೀಕರಣ ಮಾಡಿದೆ. ಆದರೆ, ಕೋವಿಡ್ ಕಾರಣದಿಂದ ಶೂಟಿಂಗ್ ಸ್ಥಗಿತಗೊಂಡಿತ್ತು.
ಅಂದ್ಹಾಗೆ, ಏಪ್ರಿಲ್ ಕೊನೆಯಲ್ಲಿ ದೋಹಾದಲ್ಲಿ ಶೂಟಿಂಗ್ ಶುರು ಮಾಡಲು ಎಲ್ಲಾ ತಯಾರಿ ನಡೆದಿತ್ತು. ಈ ವೇಳೆ ಅಜಯ್ ದೇವಗನ್ ಜೊತೆ ಅಮಿತಾಭ್ ಬಚ್ಚನ್, ನಾಯಕಿ ನಟಿ ರಕುಲ್ ಪ್ರೀತ್ ಸಿಂಗ್ ಸಹ ಪಾಲ್ಗೊಳ್ಳಬೇಕಿತ್ತು.
ಸದ್ಯದ ಮಾಹಿತಿ ಪ್ರಕಾರ, ಮೇಡೇ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ಮುಗಿದಿದೆ. ದೋಹಾದಲ್ಲಿ ಮೂರು ದಿನಗಳ ಶೂಟಿಂಗ್ ಹಾಗೂ ಕತಾರ್ನಲ್ಲಿ ಕೊನೆಯ ಹಂತದ ಚಿತ್ರೀಕರಣದ ಬಳಿಕ ಸಿನಿಮಾ ಮುಗಿಸುವ ಯೋಜನೆಯಲ್ಲಿದ್ದರು. ನಿರ್ದೇಶಕ ಅಜಯ್ ದೇವಗನ್ ಕಡಿಮೆ ಸಿಬ್ಬಂದಿ ಜೊತೆ ಕತಾರ್ಗೆ ತೆರಳಿ ಕೊನೆಯ ಚಿತ್ರೀಕರಣ ಮಾಡಲು ನಿರ್ಧರಿಸಿದ್ದರು. ಆದ್ರೀಗ, ಆ ಯೋಜನೆಗೆ ಕೊರೊನಾ ಅಡ್ಡಿಯಾಗಿದೆ. ಈ ಹಿಂದೆ ಅಮಿತಾಭ್ ಬಚ್ಚನ್ ಮತ್ತು ರಕುಲ್ ಪ್ರೀತ್ ಸಿಂಗ್ ಇಬ್ಬರಿಗೂ ಕೊರೊನಾ ವೈರಸ್ ತಗುಲಿತ್ತು.
ಆ ಸಂದರ್ಭದಲ್ಲಿ ಬಿಗ್ ಬಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಂಡಿದ್ದರು. ರಕುಲ್ ತಮ್ಮ ಮನೆಯಲ್ಲಿ ಹೋಮ್ ಕ್ವಾರಂಟೈನ್ ಆಗಿದ್ದರು. ಒಂದು ವಾರದ ವಿಶ್ರಾಂತಿ ಬಳಿಕ ನೆಗೆಟಿವ್ ಫಲಿತಾಂಶ ಬಂದಿತ್ತು.
ಅಂದ್ಹಾಗೆ, ಮೇಡೇ ಸಿನಿಮಾ ನೈಜ ಘಟನೆಗಳ ಆಧರಿಸಿ ಸಿದ್ದವಾಗುತ್ತಿರುವ ಚಿತ್ರ. 2015ರಲ್ಲಿ ನಡೆದ ಕೆಲವು ಘಟನೆಗಳನ್ನು ಚಿತ್ರಕಥೆ ಮಾಡಿ ಸಿನಿಮಾ ರೂಪ ನೀಡಲಾಗುತ್ತಿದೆ. ದೋಹಾ ಮತ್ತು ಕೊಚ್ಚಿ ವಿಮಾನದ ಸಂಘರ್ಷದ ವೇಳೆ ನಡೆದ ಘಟನೆಯ ಸುತ್ತಮುತ್ತಾ ಕಥೆ ಮಾಡಲಾಗಿದೆ.
This News Article Is A Copy Of FILMIBEAT
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am