ಬ್ರೇಕಿಂಗ್ ನ್ಯೂಸ್
10-04-21 01:56 pm Source: FILMIBEAT Shruthi Gk ಸಿನಿಮಾ
ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಸ್ಯಾಂಡಲ್ ವುಡ್ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ತಿಂಗಳ ಬಳಿಕ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಕಿರುತೆರೆಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವ ಇಬ್ಬರೂ ನಟಿಯರು ವೇದಿಕೆಯಲ್ಲಿ ಕುಣಿದು, ಕುಪ್ಪಳಿಸುವ ಜೊತೆಗೆ ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಮಾದಕ ವಸ್ತು ಪ್ರಕರಣದಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಕಳೆದ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಜೈಲು ಸೇರಿದಿದ್ದರು.
ಸುಮಾರು 4 ತಿಂಗಳ ಕಾನೂನು ಹೋರಾಟದ ಬಳಿಕ ಇಬ್ಬರೂ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜೈಲಿನಿಂದ ಹೊರಬಂದ ರಾಗಿಣಿ ಮತ್ತು ಸಂಜನಾ ಸದ್ಯ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೆ ಬಣ್ಣದ ಲೋಕದಲ್ಲಿ ಸಕ್ರೀಯರಾಗಿರುವ ಇಬ್ಬರೂ ನಟಿಯರು ಇತ್ತೀಚಿಗೆ ಕಿರುತೆರೆಯ ಅದ್ದೂರಿ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಯುಗಾದಿ ಸಂಭ್ರಮದಲ್ಲಿ ರಾಗಿಣಿ-ಸಂಜನಾ
ಸಂಜನಾ ಮತ್ತು ರಾಗಿಣಿ ಇಬ್ಬರೂ ಕಿರುತೆರೆಯ ಯುಗಾದಿ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯುಗಾದಿ ಸಂಭ್ರಮದಲ್ಲಿ ವಿಶೇಷ ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದಾರೆ. ಜೈಲಿನಿಂದ ಹೊರ ಬಂದ ಬಳಿಕ ಇಬ್ಬರೂ ಮೊದಲ ಬಾರಿಗೆ ಅದ್ದೂರಿ ಸಮಾರಂಭದಲ್ಲಿ

ಅಪ್ಪ-ಅಮ್ಮನ ಕಣ್ಣಲ್ಲಿ ನೀರು ನೋಡಿದ್ರೆ ಪ್ರಾಣ ಹೋಗುತ್ತೆ
ಯುಗಾದಿ ಹಬ್ಬದ ಸಂಭ್ರಮ, ಸಡಗರ ನಡುವೆಯೂ ಸಂಜನಾ ಮತ್ತು ರಾಗಿಣಿ ಕಣ್ಣೀರೀಟ್ಟಿದ್ದಾರೆ. ವೇದಿಕೆ ಮೇಲೆ ಭರ್ಜರಿ ಸ್ಟೆಪ್ ಹಾಕಿದ ನಟಿಯರು ಬಳಿಕ ಕಷ್ಟದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ವೇದಿಕೆ ಮೇಲೆ ಮಾತನಾಡಿದ ನಟಿ ರಾಗಿಣಿ, 'ಇಡೀ ಪ್ರಪಂಚದ ವಿರುದ್ಧ ನಿಂತು ಫೈಟ್ ಮಾಡಬಹುದು, ನನಗೇನಿಲ್ಲ. ಆದರೆ ಅಪ್ಪ-ಅಮ್ಮನ ಕಣ್ಣಲ್ಲಿ ನೀರು ನೋಡಿದ್ರೆ ಪ್ರಾಣ ಹೋದಾಗೆ ಆಗುತ್ತೆ. ಅದು ನನಗೆ ತುಂಬಾ ಕಷ್ಟವಾದ ಸಮಯ' ಎಂದಿದ್ದಾರೆ.

ನಮ್ಮವರು ಅಂತ ಯಾರು ಇಲ್ಲ
ಇದೇ ವೇದಿಕೆಯಲ್ಲಿ ಮಾತನಾಡಿದ ಸಂಜನಾ, 'ಇವತ್ತು ನೋಡಿದ್ರೆ ತುಂಬಾ ಭಾವುಕ ಆಗುತ್ತೆ. ಆ ರೀತಿಯ ವಿವಾದದಲ್ಲಿ ಬಿದ್ದು, ಮನರಂಜನೆ ಆಗೋದು ಅಲ್ಲ. ನಮ್ಮವರು ಅಂತ ಯಾರು ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದೀನಿ ಜೀವನದಲ್ಲಿ. ತಂದೆ-ತಾಯಿ ಆಶೀರ್ವಾದದಿಂದನೇ ಬದುಕಿದ್ದೀನಿ. ಯಾರು ಬಂದಿಲ್ಲ, ತುಂಬಾ ಬೇಜಾರು ಆಯ್ತು' ಎಂದು ಕಣ್ಣೀರಾಕಿದ್ದಾರೆ.

ಕರ್ವ-3 ಸಿನಿಮಾದಲ್ಲಿ ಬ್ಯುಸಿ ಇರುವ ರಾಗಿಣಿ
ಈ ಕಾರ್ಯಕ್ರಮ ಇದೇ ಭಾನುವಾರ ಸಂಜೆ ಪ್ರಸಾರವಾಗುತ್ತಿದೆ. ಇನ್ನು ರಾಗಿಣಿ ಜೈಲಿನಿಂದ ಬಂದ ಬಳಿಕ ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ. ಕರ್ವ-3 ಚಿತ್ರದಲ್ಲಿ ರಾಗಿಣಿ ನಟಿಸುತ್ತಿದ್ದಾರೆ. ಗಾಂಧಿಗಿರಿ ಸಿನಿಮಾ ಕೊನೆಯ ಹಂತದಲ್ಲಿದೆ. ಈ ಚಿತ್ರದಲ್ಲಿ ನಟ ಪ್ರೇಮ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ನಾನೆ ನೆಕ್ಸ್ಟ್ ಸಿಎಂ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
This News Article Is A Copy Of FILMIBEAT
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am