ಬ್ರೇಕಿಂಗ್ ನ್ಯೂಸ್
01-04-21 12:36 pm Source: FILMIBEAT Bharath Kumar K ಸಿನಿಮಾ
ಕನ್ನಡ ಕಿರುತೆರೆ ಲೋಕದ ಖ್ಯಾತ ನಟಿ ಆಶಿತಾ ಚಂದ್ರಪ್ಪ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ನೀಲಿ, ಜೊತೆ ಜೊತೆಯಲಿ, ರಾಧ ರಮಣ ಅಂತಹ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದ ನಟಿ ಇಂದು (ಮಾರ್ಚ್ 31) ಸಪ್ತಪದಿ ತುಳಿದಿದ್ದಾರೆ. ರೋಹನ್ ರಾಘವೇಂದ್ರ ಎನ್ನುವವರ ಜೊತೆ ವೈವಾಹಿಕ ಬದುಕು ಆರಂಭಿಸಿರುವ ನಟಿ ಆಶಿತಾ ಚಂದ್ರಪ್ಪಗೆ ಸ್ನೇಹಿತರು, ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
ಕೊರೊನಾ ವೈರಸ್ ಭೀತಿ ಕಾರಣದಿಂದ ಹೆಚ್ಚು ಜನರಿಗೆ ಮದುವೆ ಆಹ್ವಾನ ನೀಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಹೊಸ ಜೀವನ ಪ್ರವೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

ಆಶಿತಾ ಚಂದ್ರಪ್ಪ ಮದುವೆ ಆಗಿರುವ ರೋಹನ್ ರಾಘವೇಂದ್ರ ಅವರ ಕುರಿತು ಹೆಚ್ಚಾಗಿ ತಿಳಿದಿಲ್ಲ. ಇನ್ನು ಆಶಿತಾ ಅವರ ವಿವಾಹ ಕಾರ್ಯಕ್ರಮದಲ್ಲಿ ಕಿರುತೆರೆ ನಟ ಕಾರ್ತಿಕ್ ಜಯರಾಂ, ನಟಿ ತೇಜಸ್ವಿನಿ ಪ್ರಕಾಶ್, ಜಗನ್ನಾಥ್ ಚಂದ್ರಶೇಖರ್ ಸೇರಿದಂತೆ ಕೆಲವರು ಮಾತ್ರ ಪಾಲ್ಗೊಂಡಿದ್ದರು. ಆಶಿತಾ ಮತ್ತು ರೋಹನ್ ದಂಪತಿಗೆ ನಟ ಜೆಕೆ ಶುಭಕೋರಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಆಶಿತಾ ಜೊತೆಗಿನ ಫೋಟೋ ಹಂಚಿಕೊಂಡಿರುವ ಕಾರ್ತಿಕ್ ಜಯರಾಂ ''ನಿನ್ನ ದಾಂಪತ್ಯ ಬದುಕು ಸದಾ ಸಂತಸದಿಂದ ಕೂಡಿರಲಿ'' ಎಂದು ಹಾರೈಸಿದ್ದಾರೆ.
ಕಿರುತೆರೆಯಲ್ಲಿ ಮಾತ್ರವಲ್ಲ ಸಿನಿಮಾರಂಗದಲ್ಲಿ ಆಶಿತಾ ಗುರುತಿಸಿಕೊಂಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಪ್ರೀತಿಯಿಂದ ಅಣ್ಣ ಎಂದೇ ಕರೆಯುವ ಆಶಿತಾ ಡಿ ಬಾಸ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
This News Article Is A Copy Of FILMIBEAT
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am