ಬ್ರೇಕಿಂಗ್ ನ್ಯೂಸ್
30-03-21 03:43 pm Source: FILMIBEAT ಸಿನಿಮಾ
ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್ ಚಿತ್ರದ ಟ್ರೈಲರ್ ನೋಡಲು ಸೇರಿದ್ದ ಅಸಂಖ್ಯಾತ ಅಭಿಮಾನಿಗಳ ನಡುವೆ ನೂಕುನುಗ್ಗಲು ಉಂಟಾಗಿ ಭಾರಿ ಗದ್ದಲ ಸಂಭವಿಸಿದೆ. ವಿಶಾಖಪಟ್ಟಣಂನ ಸಂಗಮ್ ಶರತ್ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದೆ. ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಪವನ್ ಕಲ್ಯಾಣ್ ನೋಡಲು ಅಭಿಮಾನಿಗಳು ಒಮ್ಮೆಗೆ ಚಿತ್ರಮಂದಿರದ ಒಳಗೆ ನುಗ್ಗಿದ್ದಾರೆ.
ಈ ಸಮಯದಲ್ಲೇ ತಳ್ಳಾಟ, ನೂಕಾಟ ನಡೆದು ಚಿತ್ರಮಂದಿರದ ಗಾಜಿನ ಗೋಡೆ ಪುಡಿಪುಡಿ ಆಗಿದೆ. ಮಾರ್ಚ್ 29 ಸಂಜೆ 4 ಗಂಟೆಗೆ ಟ್ರೈಲರ್ ಲಾಂಚ್ ಆಗಿದ್ದು, ಈ ವೇಳೆ ನೂಕುನುಗ್ಗಲು ನಡೆದಿದೆ. ಟ್ರೈಲರ್ಗಾಗಿ ಅಭಿಮಾನಿಗಳು ಬೆಳಗ್ಗೆಯಿಂದ ಚಿತ್ರಮಂದಿರದ ಮುಂದೆ ಕ್ಯುನಿಂತಿದ್ದರು. ಪವನ್ ಕಲ್ಯಾಣ್ ಫೋಟೋಗೆ ಪೂಜೆ ಮಾಡಿ ಸಂಭ್ರಮಿಸಿದ್ದಾರೆ.
ಬಳಿಕ 4ಗಂಟೆೆಗೆ ಟ್ರೈಲರ್ ವೀಕ್ಷಣೆಗೆ ಚಿತ್ರಮಂದಿರದ ಒಳಗೆ ನುಗ್ಗಲು ಒಮ್ಮೆಗೆ ಮುಗಿಬಿದ್ದಿದ್ದಾರೆ. ಗಾಜು ಒಡೆದು ಪುಡಿಪುಡಿ ಆದರೂ ಲೆಕ್ಕಿಸದೆ ಅಭಿಮಾನಿಗಳು ಪವನ್ ಕಲ್ಯಾಣ್ ನೋಡಲು ಮುನ್ನುಗ್ಗಿದ್ದಾರೆ. ಹೋಳಿ ಹಬ್ಬದ ಪ್ರಯುಕ್ತ ಚಿತ್ರತಂಡ ವಕೀಲ್ ಸಾಬ್ ಟ್ರೈಲರ್ ರಿಲೀಸ್ ಮಾಡಲು ಸಿನಿಮಾ ಪ್ಲಾನ್ ಮಾಡಿ, ಬಿಡುಗಡೆ ಮಾಡಿದೆ.
ಸಿನಿಮಾ ಜೊತೆಗೆ ರಾಜಕೀಯದಲ್ಲೂ ಸಕ್ರಿಯರಾಗಿರುವ ಪವನ್ ಕಲ್ಯಾಣ್ ಎರಡು ವರ್ಷಗಳ ಬಳಿಕ ತೆರೆಮೇಲೆ ಬರ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ವಕೀಲ್ ಸಾಬ್ ಸದ್ಯದಲ್ಲೇ ತೆರೆಗೆ ಬರಲಿದೆ. ಅಂದಹಾಗೆ ವಕೀಲ್ ಸಾಬ್ ಹಿಂದಿಯ ಅಮಿತಾಬ್ ಬಚ್ಚನ್ ನಟನೆಯ ಪಿಂಕ್ ಸಿನಿಮಾದ ರಿಮೇಕ್.
This News Article Is A Copy Of FILMIBEAT
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am