ಬ್ರೇಕಿಂಗ್ ನ್ಯೂಸ್
26-03-21 11:05 am Source: FILMIBEAT ಸಿನಿಮಾ
ಇತ್ತೀಚೆಗೆ ಬಿಡುಗಡೆ ಆದ ತೆಲುಗು ಸಿನಿಮಾದಲ್ಲಿ ಸ್ವಾತಂತ್ರ್ಯ ವೀರರಿಗೆ ಅವಮಾನ ಮಾಡಲಾಗಿದೆ. ಕೂಡಲೇ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ತೆಲಂಗಾಣ ಶಿವಸೇನಾ ರಾಜ್ಯ ಘಟಕ ಒತ್ತಾಯಿಸಿದೆ.
ನವೀನ್ ಪೋಲಿಶೆಟ್ಟಿ ನಟಿಸಿರುವ 'ಜಾತಿರತ್ನಾಲು' ಸಿನಿಮಾದ ವಿರುದ್ಧ ತೆಲಂಗಾಣ ಶಿವಸೇನಾ ಆಕ್ರೋಶಗೊಂಡಿದ್ದು, ಸಿನಿಮಾವನ್ನು ಬ್ಯಾನ್ ಮಾಡಬೇಕು, ನಿರ್ದೇಶಕ, ನಟ, ನಿರ್ಮಾಪಕ, ಸಂಭಾಷಣೆ ಬರೆದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರು ಸಹ ಸಲ್ಲಿಸಲಾಗಿದೆ.
'ಜಾತಿರತ್ನಾಲು' ಸಿನಿಮಾದ ದೃಶ್ಯವೊಂದರಲ್ಲಿ ಮೂವರು ಮುಖ್ಯ ನಟರು ಜೈಲು ಸೇರುತ್ತಾರೆ. ಜೈಲಿನಲ್ಲಿ ನಡೆವ ಹಾಸ್ಯ ಸನ್ನಿವೇಶವೊಂದರಲ್ಲಿ ನಾಯಕ ನವೀನ್ ಪೋಲಿಶೆಟ್ಟಿ ಪಾತ್ರವು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಹಾಡಲಾಗಿದ್ದ ರಾಮ್ಪ್ರಸಾದ್ ಬಿಸ್ಮಿಲ್ ಬರೆದಿರುವ 'ಸರ್ಫರೋಶಿ ಕೀ ತಮನ್ನಾ ಅಬ್ ಹಮಾರೆ ದಿಲ್ ಮೆ ಹೇ' ಹಾಡನ್ನು ತಿರುಚಿ ಹಾಡುತ್ತಾನೆ.
'ಸರ್ಫರೋಶಿ ಕೀ ತಮನ್ಹಾ, ಸಮಂತಾ, ರಶ್ಮಿಕಾ ತೀನೋ ಸಾಥ್ ಮೆ ಹೇ' ಎಂದು ಹಾಡನ್ನು ತಿರುಚಿ ಹಾಡಲಾಗಿದೆ. ಇದು ಶಿವಸೇನಾ ಸದಸ್ಯರನ್ನು ಕೆರಳಿಸಿದೆ. ಸಿನಿಮಾದ ವಿರುದ್ಧ ತೆಲಂಗಾಣ ಶಿವಸೇನಾ ರಾಜ್ಯ ಘಟಕದ ಕಾರ್ಯದರ್ಶಿ ಭೂಮ ಗಂಗಾಧರ್, ಸದಸ್ಯರಾದ ಶ್ರೀನಿವಾಸ ಆಚಾರಿ, ಕಂಜರಾಲ ಶ್ರೀಧರ್ ಆಚಾರಿ, ರಿತೇಶ್, ಸುರೇಶ್ ಮತ್ತು ವೇಣು ಅವರುಗಳು ಕಾಂಚಿಗುಡ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. 'ಸಿನಿಮಾದ ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ ಈಗಿನ ಯುವಸಮುದಾಯಕ್ಕೆ ಕೆಟ್ಟ ಸಂದೇಶ ನೀಡುತ್ತಿದ್ದಾರೆ ಹಾಗಾಗಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದ್ದೇವೆ' ಎಂದಿದ್ದಾರೆ ದೂರು ನೀಡಿದ ತೆಲಂಗಾಣ ಶಿವಸೇನಾ ಸದಸ್ಯರು.
ನವೀನ್ ಪೋಲಿಶೆಟ್ಟಿ, ರಾಹುಲ್ ರಾಮಕೃಷ್ಣ, ಪ್ರಿಯದರ್ಶನ್, ಫಾರಿಯಾ ಅಬ್ದುಲ್ಲಾ, ಬ್ರಹ್ಮಾನಂದಂ ಇನ್ನೂ ಹಲವರು ನಟಿಸಿರುವ 'ಜಾತಿರತ್ನಾಲು' ಹಾಸ್ಯ ಸಿನಿಮಾವನ್ನು ಮಾರ್ಚ್ 11 ರಂದು ಬಿಡುಗಡೆ ಆಗಿದ್ದು ಸಖತ್ ಹಿಟ್ ಆಗಿದೆ. ಸಿನಿಮಾವನ್ನು ಅನುದೀಪ್ ಕೆವಿ ನಿರ್ದೇಶನ ಮಾಡಿದ್ದಾರೆ
This News Article Is A Copy Of FILMIBEAT
17-06-26 10:12 pm
HK News Staffer
ಆರ್ಎಸ್ಎಸ್ ಲೆಕ್ಕ ಕೇಳಲು ಇವನ್ಯಾರು? ಪ್ರಿಯಾಂಕ್ ಖ...
17-06-26 06:59 pm
ಜಿಮ್ ಮುಗಿಸಿ ಮನೆಗೆ ಬಂದ ಯುವಕನಿಗೆ ಹೃದಯಾಘಾತ ; ಹೆ...
17-06-26 06:35 pm
ಪವಿತ್ರ ಧರ್ಮಸ್ಥಳ ವಿರುದ್ಧ ನಾನ್ಯಾಕೆ ಷಡ್ಯಂತ್ರ ಮಾಡ...
17-06-26 05:12 pm
ಆರೆಸ್ಸೆಸ್ ನೋಂದಣಿ ; ನನ್ನ ಪತ್ರ ವೈಯಕ್ತಿಕ ಅಲ್ಲ, ರ...
17-06-26 04:48 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
17-06-26 01:41 pm
HK News Staffer
ವಾಯುಪಡೆ ಅಧಿಕಾರಿ ಪತ್ನಿಗೆ ಅಮಲು ಪದಾರ್ಥ ನೀಡಿ ಅತ್ಯ...
16-06-26 08:32 pm
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am