ಬ್ರೇಕಿಂಗ್ ನ್ಯೂಸ್
22-03-21 02:55 pm Source: FILMIBEAT ಸಿನಿಮಾ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದಲ್ಲಿ ತೆರೆಕಂಡಿದ್ದ ಪೊಗರು ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಖತ್ ಸದ್ದು ಮಾಡಿದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಬಿಡುಗಡೆಯಾಗಿದ್ದ ಭರ್ಜರಿ ಗಳಿಕೆ ಕಂಡಿತ್ತು. ಆರು ದಿನಕ್ಕೆ ಪೊಗರು ಸಿನಿಮಾ 48 ಕೋಟಿ ಬಾಚಿಕೊಂಡಿತ್ತು ಎಂದು ಸ್ವತಃ ನಿರ್ಮಾಪಕ ಗಂಗಾಧರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.
ಸುಮಾರು ಮೂರುವರೆ ವರ್ಷದ ಬಳಿಕ ತೆರೆಗೆ ಬಂದಿದ್ದ ಧ್ರುವ ಸರ್ಜಾ ಸಿನಿಮಾ ಕೊರೊನಾ ಭೀತಿಯಲ್ಲೂ ಅಬ್ಬರಿಸಿತ್ತು. ಚಿತ್ರಮಂದಿರಕ್ಕೆ ಜನ ಬರ್ತಾರೋ ಬರಲ್ಲೋ ಎಂಬ ಆತಂಕವನ್ನು ದೂರ ಮಾಡಿ ಹೌಸ್ಫುಲ್ ಪ್ರದರ್ಶನ ಕಂಡಿತ್ತು. ಹೀಗೆ, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ದಾಖಲೆಗಳನ್ನು ಸೃಷ್ಟಿಸಿದ ಪೊಗರು ಸಿನಿಮಾ ಈಗ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಬಿಡುಗಡೆಯಾದ ಒಂದೇ ತಿಂಗಳಲ್ಲಿ ಪೊಗರು ಟಿವಿಯಲ್ಲಿ ಮೂಡಿಬರುತ್ತಿದೆ. ಮುಂದೆ ಓದಿ...
ಹಿಂದಿಯಲ್ಲಿ ಪೊಗರು ಪ್ರಸಾರ
ಪೊಗರು ಸಿನಿಮಾದ ಹಿಂದಿ ಅವತರಣಿಕೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಏಪ್ರಿಲ್ ತಿಂಗಳಲ್ಲಿ ಪೊಗರು ಸಿನಿಮಾ ಟಿವಿಯಲ್ಲಿ ಮೂಡಿಬರಲಿದೆ ಎಂದು ಪ್ರೋಮೋ ಬಿಡುಗಡೆಯಾಗಿದೆ. ಕಲರ್ಸ್ ಸಿನಿಫ್ಲೆಕ್ಸ್ ಚಾನಲ್ನಲ್ಲಿ ಪೊಗರು ಹಿಂದಿ ವರ್ಷನ್ ಪ್ರಸಾರವಾಗಲಿದೆ. ಏಪ್ರಿಲ್ ತಿಂಗಳು ಎಂದು ಪ್ರಕಟಿಸಿದ್ದು, ನಿಖರವಾದ ದಿನಾಂಕ ತಿಳಿಸಿಲ್ಲ.
ದುಬಾರಿ ಬೆಲೆಗೆ ಪೊಗರು ಹಕ್ಕು ಮಾರಾಟ
ದಕ್ಷಿಣದ ಮೂರು ಭಾಷೆಗಳಲ್ಲಿ ಅದ್ಧೂರಿ ಓಪನಿಂಗ್ ಪಡೆದುಕೊಂಡಿದ್ದ ಪೊಗರು ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿತು. ಆದರೆ, ವಿಮರ್ಶಾತ್ಮಕವಾಗಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ, ಹಿಂದಿಯಲ್ಲಿ ದುಬಾರಿ ಬೆಲೆ ಕೊಟ್ಟು ಡಬ್ಬಿಂಗ್ ಹಕ್ಕು ಖರೀದಿ ಮಾಡಿದ್ದರು. 7.2 ಕೋಟಿಗೆ ಪೊಗರು ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ಮಾರಾಟವಾಗಿತ್ತು ಎಂಬ ಮಾಹಿತಿ ಇದೆ.

ಫೆಬ್ರವರಿ 19ರಂದು ಬಿಡುಗಡೆಯಾಗಿದ್ದ ಪೊಗರು
ಪೊಗರು ಸಿನಿಮಾ ಫೆಬ್ರವರಿ 19ರಂದು ಬಿಡುಗಡೆಯಾತ್ತು. ನಂದಕಿಶೋರ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಧನಂಜಯ್, ಸಂಪತ್ ರಾಜ್, ಚಿಕ್ಕಣ್ಣ, ರಾಘವೇಂದ್ರ ರಾಜ್ ಕುಮಾರ್, ಕುರಿ ಪ್ರತಾಪ್, ರವಿಶಂಕರ್, ಪವಿತ್ರ ಲೋಕೇಶ್ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದರು. ಚಂದನ್ ಶೆಟ್ಟಿ ಸಂಗೀತ ನೀಡಿದ್ದರು.

ದುಬಾರಿ ಚಿತ್ರ ಆರಂಭಿಸಿದ ಧ್ರುವ ಸರ್ಜಾ
ಪೊಗರು ನಂತರ ಮತ್ತೆ ನಂದಕಿಶೋರ್ ಜೊತೆ ಧ್ರುವ ಸರ್ಜಾ ಸಿನಿಮಾ ಆರಂಭಿಸಿದ್ದಾರೆ. ಉದಯ್ ಮೆಹ್ತಾ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು, ಈ ಚಿತ್ರಕ್ಕೆ ದುಬಾರಿ ಎಂದು ಹೆಸರಿಡಲಾಗಿದೆ. ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿಸಿ, ಮುಹೂರ್ತ ಸಹ ನಡೆದಿದೆ.
This News Article Is A Copy Of FILMIBEAT
17-06-26 10:12 pm
HK News Staffer
ಆರ್ಎಸ್ಎಸ್ ಲೆಕ್ಕ ಕೇಳಲು ಇವನ್ಯಾರು? ಪ್ರಿಯಾಂಕ್ ಖ...
17-06-26 06:59 pm
ಜಿಮ್ ಮುಗಿಸಿ ಮನೆಗೆ ಬಂದ ಯುವಕನಿಗೆ ಹೃದಯಾಘಾತ ; ಹೆ...
17-06-26 06:35 pm
ಪವಿತ್ರ ಧರ್ಮಸ್ಥಳ ವಿರುದ್ಧ ನಾನ್ಯಾಕೆ ಷಡ್ಯಂತ್ರ ಮಾಡ...
17-06-26 05:12 pm
ಆರೆಸ್ಸೆಸ್ ನೋಂದಣಿ ; ನನ್ನ ಪತ್ರ ವೈಯಕ್ತಿಕ ಅಲ್ಲ, ರ...
17-06-26 04:48 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
17-06-26 01:41 pm
HK News Staffer
ವಾಯುಪಡೆ ಅಧಿಕಾರಿ ಪತ್ನಿಗೆ ಅಮಲು ಪದಾರ್ಥ ನೀಡಿ ಅತ್ಯ...
16-06-26 08:32 pm
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am