ಬ್ರೇಕಿಂಗ್ ನ್ಯೂಸ್
01-03-21 11:03 am Source: FILMIBEAT ಸಿನಿಮಾ
ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ಬಲು ಅದ್ಧೂರಿಯಾಗಿ ನಡೆದಿದೆ.
ಕಾರ್ಯಕ್ರಮದಲ್ಲಿ ತಮ್ಮ ಎಂದಿನ ಲಹರಿಯಲ್ಲಿ ಅಭಿಮಾನಿಗಳ ಜೊತೆ ಮಾತನಾಡಿದ ದರ್ಶನ್, ಉತ್ತರ ಕರ್ನಾಟಕದ ಜನರ ಮೇಲೆ ಮಾತಲ್ಲೇ ಪ್ರೀತಿಯ ಮಳೆಗರದರು.
ವೇದಿಕೆ ಮೇಲೆ ಚಪ್ಪಲಿ ಬಿಟ್ಟು ಮಾತು ಆರಂಭಿಸಿದ ದರ್ಶನ್, 'ಇದು ನಾನು ಉತ್ತರ ಕರ್ನಾಟಕ ಜನರಿಗೆ ನೀಡುತ್ತಿರುವ ಗೌರವ. ಅವರೊಟ್ಟಿಗೆ ಮಾತನಾಡಬೇಕೆಂದರೆ ಚಪ್ಪಲಿ ಬಿಟ್ಟು, ಕೈ ಮುಗಿದು ಮಾತನಾಡಬೇಕು' ಎಂದರು ದರ್ಶನ್.
'ಸಂಗೊಳ್ಳಿ ರಾಯಣ್ಣ' ಸಿನಿಮಾದ ಪ್ರಚಾರ, ವಿಜಯ ಯಾತ್ರೆ ಸಂದರ್ಭದಲ್ಲಿ ಉತ್ತರ ಕರ್ನಾಟಕಕ್ಕೆ ಬಂದಿದ್ದ, ಜವಾರಿ ಮಂದಿ ತೋರಿದ್ದ ಪ್ರೀತಿ, ಗೌರವ ನೆನದು ಭಾವುಕರಾದ ದರ್ಶನ್. ಉತ್ತರ ಕರ್ನಾಟಕದೊಂದಿಗೆ ತಮ್ಮ ತಂದೆಗೆ ಇದ್ದ ನಂಟಿನ ಬಗ್ಗೆಯೂ ಹೇಳಿದರು.
ಇದೇ ಸಮಯದಲ್ಲಿ ಅಭಿಮಾನಿಗಳಿಗೆ ಕಿವಿ ಮಾತನ್ನೂ ಹೇಳಿದ ದರ್ಶನ್, 'ನಾನು ಕಾರಿನಲ್ಲಿ ಹೋಗುವಾಗ ದಯವಿಟ್ಟು ಬೈಕ್ಗಳಲ್ಲಿ ಕಾರನ್ನು ಹಿಂಬಾಲಿಸಬೇಡಿ. ಮೊಬೈಲ್ ಹಿಡಿದುಕೊಂಡು ಕಾರನ್ನು ಹಿಂಬಾಲಿಸುತ್ತೀರ. ಯಾರಿಗಾದರೂ ಏನಾದರು ಹೆಚ್ಚು-ಕಡಿಮೆ ಆದರೆ ನಿಮ್ಮ ಕುಟುಂಬದವರು ಜೀವನಪರ್ಯಂತ ನನ್ನನ್ನು ದೂಷಿಸುತ್ತಾರೆ. ದಯವಿಟ್ಟು ಆ ಕೆಲಸ ಮಾಡಬೇಡಿ' ಎಂದು ಮನವಿ ಮಾಡಿದರು ದರ್ಶನ್.
'ರಾಬರ್ಟ್' ಸಿನಿಮಾವನ್ನು ಕಷ್ಟಪಟ್ಟು ಮಾಡಿದ್ದೇವೆ ಎಂದು ದರ್ಶನ್, ಈ ಸಿನಿಮಾಕ್ಕೂ ನಿಮ್ಮೆಲ್ಲರ ಆಶೀರ್ವಾದ, ಸಹಕಾರ ಅತ್ಯವ್ಯಕ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್. ಸಚಿವ ಜಗದೀಶ್ ಶೆಟ್ಟರ್ ಸೇರಿದಂತೆ ಇನ್ನಿತರೆ ಸಿನಿಮಾರಂಗದ ಗಣ್ಯರಿಗೆ ಧನ್ಯವಾದ ಹೇಳಿದ ನಟ ದರ್ಶನ್, ವೇದಿಕೆ ಮುಂದಿದ್ದ ತನ್ನ ಆತ್ಮೀಯ ನಟ-ನಟಿಯರನ್ನು ತಮ್ಮದೇ ಸ್ಟೈಲ್ನಲ್ಲಿ ಚೇಡಿಸಿ ರಂಜಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್. ಸಚಿವ ಜಗದೀಶ್ ಶೆಟ್ಟರ್ ಸೇರಿದಂತೆ ಇನ್ನಿತರೆ ಸಿನಿಮಾರಂಗದ ಗಣ್ಯರಿಗೆ ಧನ್ಯವಾದ ಹೇಳಿದ ನಟ ದರ್ಶನ್, ವೇದಿಕೆ ಮುಂದಿದ್ದ ತನ್ನ ಆತ್ಮೀಯ ನಟ-ನಟಿಯರನ್ನು ತಮ್ಮದೇ ಸ್ಟೈಲ್ನಲ್ಲಿ ಚೇಡಿಸಿ ರಂಜಿಸಿದರು.
ಅಭಿಮಾನಿಗಳಿಗೆ, ಉತ್ತರ ಕರ್ನಾಟಕದ ಜನರಿಗೆ ಪದೇ-ಪದೇ ಧನ್ಯವಾದ ಹೇಳಿದ ದರ್ಶನ್, ನನ್ನನ್ನು ಇಷ್ಟು ದಿನ ಸಹಿಸಿಕೊಂಡಿದ್ದೀರಿ. ನಿಮ್ಮ ಆಶೀರ್ವಾದ ಇದ್ದರೆ ಇನ್ನೂ ಕೆಲವು ವರ್ಷ ನಿಮ್ಮನ್ನು ರಂಜಿಸುತ್ತಿರುತ್ತೇನೆ ಎಂದರು ದರ್ಶನ್.
'ರಾಬರ್ಟ್' ಸಿನಿಮಾದಲ್ಲಿ ಕೆಲಸ ಮಾಡಿದ ನಟ ದೇವರಾಜ್, ಜಗಪತಿ ಬಾಬು, ರವಿಶಂಕರ್, ನಟಿ ಆಶಾ ಭಟ್ , ನಿರ್ದೇಶಕ ತರುಣ್ ಸುಧೀರ್, ವಿನೋದ್ ಪ್ರಭಾಕರ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಎಲ್ಲರಿಗೂ ಧನ್ಯವಾದ ಅರ್ಪಿಸಿದರು ದರ್ಶನ್.
This News Article Is A Copy Of FILMIBEAT
17-06-26 10:12 pm
HK News Staffer
ಆರ್ಎಸ್ಎಸ್ ಲೆಕ್ಕ ಕೇಳಲು ಇವನ್ಯಾರು? ಪ್ರಿಯಾಂಕ್ ಖ...
17-06-26 06:59 pm
ಜಿಮ್ ಮುಗಿಸಿ ಮನೆಗೆ ಬಂದ ಯುವಕನಿಗೆ ಹೃದಯಾಘಾತ ; ಹೆ...
17-06-26 06:35 pm
ಪವಿತ್ರ ಧರ್ಮಸ್ಥಳ ವಿರುದ್ಧ ನಾನ್ಯಾಕೆ ಷಡ್ಯಂತ್ರ ಮಾಡ...
17-06-26 05:12 pm
ಆರೆಸ್ಸೆಸ್ ನೋಂದಣಿ ; ನನ್ನ ಪತ್ರ ವೈಯಕ್ತಿಕ ಅಲ್ಲ, ರ...
17-06-26 04:48 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
17-06-26 01:41 pm
HK News Staffer
ವಾಯುಪಡೆ ಅಧಿಕಾರಿ ಪತ್ನಿಗೆ ಅಮಲು ಪದಾರ್ಥ ನೀಡಿ ಅತ್ಯ...
16-06-26 08:32 pm
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am