ಬ್ರೇಕಿಂಗ್ ನ್ಯೂಸ್
08-08-22 03:05 pm Source: Vijayakarnataka ಸಿನಿಮಾ
ನಿತ್ಯಾ ಮೆನನ್ ( Nithya Menen ) ಇಂದು ಚಿತ್ರರಂಗದಲ್ಲಿ ಯಶಸ್ವಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅಭಿನಯದ ವಿಚಾರವಾಗಿ ಸಕಾರಾತ್ಮಕ ಪ್ರತಿಕ್ರಿಯೆ ಜೊತೆಗೆ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ನಿತ್ಯಾರಿಗೆ 6 ವರ್ಷಗಳ ಕಾಲ ಸಿನಿಮಾ ವಿಮರ್ಶಕನೊಬ್ಬ ದೌರ್ಜನ್ಯ ಮಾಡಿದ್ದಾನಂತೆ, ಈ ಬಗ್ಗೆ ಸಂದರ್ಶನವೊಂದರಲ್ಲಿ ನಿತ್ಯಾ ಹೇಳಿಕೊಂಡಿದ್ದಾರೆ.
ಸಿನಿಮಾ ವಿಮರ್ಶಕ ಯಾರು ಎಂದು ನಿತ್ಯಾ ಹೇಳಿಲ್ಲ. ದೌರ್ಜನ್ಯದ ಬಗ್ಗೆ ಮಾತನಾಡಿರುವ ನಿತ್ಯಾ, "ಅವನು ಏನು ಹೇಳುತ್ತಾನೋ ಅದನ್ನು ನಂಬುವವರು ನಿಜವಾದ ಮೂರ್ಖರು. ಸಾಕಷ್ಟು ಸಮಯದಿಂದ ಅವನು ನನ್ನ ಮೇಲೆ ದೌರ್ಜನ್ಯ ನಡೆಸುತ್ತಿದ್ದಾನೆ. ವೈರಲ್ ಆಗುತ್ತಿದ್ದಂತೆ ಅವನು ನನ್ನ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಆರಂಭಿಸಿದ. 6 ವರ್ಷಗಳಿಗೂ ಅಧಿಕ ಕಾಲ ಅವನು ನನಗೆ ತಲೆನೋವು ಕೊಟ್ಟಿದ್ದಾನೆ" ಎಂದಿದ್ದಾರೆ.

"ಸಾಕಷ್ಟು ಜನರು ಪೊಲೀಸ್ ದೂರು ನೀಡಿ ಅಂತ ಹೇಳಿದರು. ಆದರೆ ನಾನು ಈ ಬಗ್ಗೆ ಪಾಲಕರ ಬಳಿ ಹೇಳಿದೆ, ಆಗ ಅವರು ಅವನ ಬಗ್ಗೆ ಮಾತನಾಡಲು ಆರಂಭಿಸಿದರು. ನನ್ನ ತಾಯಿ ಕ್ಯಾನ್ಸರ್ನಿಂದ ಗುಣಮುಖರಾಗುತ್ತಿರುವಾಗ ಅವನು ನನಗೆ ಕಾಲ್ ಮಾಡುತ್ತಿದ್ದ. ಯಾವಾಗಲೂ ಕೂಲ್ ಆಗಿರುತ್ತಿದ್ದ ನನ್ನ ತಂದೆ ತಾಯಿ ಅವನ ಜೊತೆ ಸಿಟ್ಟಾಗಿ ಮಾತನಾಡುತ್ತಿದ್ದರು. ತಂದೆ-ತಾಯಿಗೆ ಅವನ ನಂಬರ್ ಬ್ಲಾಕ್ ಮಾಡಿ ಅಂತ ಹೇಳಿದ್ದೆ. ಅವನ 30 ನಂಬರ್ನ್ನು ನಾನು ಬ್ಲಾಕ್ ಮಾಡಿದ್ದೇನೆ" ಎಂದಿದ್ದಾರೆ ನಿತ್ಯಾ ಮೆನನ್
'ಮೇಜರ್' ಸಿನಿಮಾದಲ್ಲಿ ಕೊನೆಯದಾಗಿ ನಿತ್ಯಾ ಕಾಣಿಸಿಕೊಂಡಿದ್ದರು. ಸಲಾಮ್ ವೆಂಕಿ, ಕಾಜಲ್, ವಿಶಾಲ್ ಜೆತ್ವ ನಟನೆಯ ಸಿನಿಮಾದಲ್ಲಿ ನಿತ್ಯಾ ಮೆನನ್ ಅವರು ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಮೆಜಾನ್ ಪ್ರೈಮ್ನಲ್ಲಿ ರಿಲೀಸ್ ಆದ 'ಮಾಡರ್ನ್ ಲವ್' ಸಿನಿಮಾದಲ್ಲಿ ನಿತ್ಯಾ ಕಾಣಿಸಿಕೊಂಡಿದ್ದರು.

1998ರಲ್ಲಿ Hanuman ಎಂಬ ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡ ನಿತ್ಯಾ ಅವರು, ಮಲಯಾಳಂ, ತೆಲುಗು, ತಮಿಳು ಭಾಷೆಯ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾ, ವೆಬ್ ಸಿರೀಸ್ ಜೊತೆಗೆ ನಿತ್ಯಾ, ರಿಯಾಲಿಟಿ ಶೋನಲ್ಲಿಯೂ ಜಡ್ಜ್ ಆಗಿ ಗುರುತಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾಗಳು
ರಾಕೇಶ್ ಅಡಿಗ ಜೊತೆಗೆ 'ಜೋಶ್', 'ಐದೊಂದ್ಲ ಐದು', ಚೇತನ್ ಜೊತೆಗೆ 'ಮೈನಾ', ಕಿಚ್ಚ ಸುದೀಪ್ ಜೊತೆಗೆ 'ಕೋಟಿಗೊಬ್ಬ 2'
ಹಿಟ್ ಚಿತ್ರಗಳು
ದುಲ್ಕರ್ ಸಲ್ಮಾನ್ ಜೊತೆಗೆ 'ಬೆಂಗಳೂರು ಡೇಸ್', O Kadhal Kanmani, ಪವನ್ ಕಲ್ಯಾಣ್ ಜೊತೆಗೆ 'Bheemla Nayak', 'NTR: Kathanayakudu', ವಿಜಯ್ ದೇವರಕೊಂಡ ಜೊತೆಗೆ 'ಗೀತಾ ಗೋವಿಂದಂ', 'ಮಿಷನ್ ಮಂಗಲ್', ಜನತಾ ಗ್ಯಾರೇಜ್, Rudhramadevi, , ಕಾಂಚನಾ 2, 'S/O Satyamurthy', '100 Days of Love', 'JK Enum Nanbanin Vaazhkai', 'Malli Malli Idi Rani Roju', 'Jabardasth'
Nithya Movie Actress Nithya Menen Speaks About Of Harassment By Movie Reviewer.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm