ಬ್ರೇಕಿಂಗ್ ನ್ಯೂಸ್
21-05-22 10:20 pm HK News Desk ದೇಶ - ವಿದೇಶ
ನವದೆಹಲಿ, ಮೇ 21: ತೈಲ ದರ ಏರಿಕೆಯಾಗಿ ಗ್ರಾಹಕನ ಕೈ ಸುಡುತ್ತಿರುವಾಗಲೇ ಕೇಂದ್ರದ ಮೋದಿ ಸರಕಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿದೆ. ಪೆಟ್ರೋಲಿಗೆ 8 ರೂ. ಮತ್ತು ಡೀಸೆಲಿಗೆ 6 ರೂ. ನಂತೆ ತೆರಿಗೆ ಕಡಿತ ಮಾಡಲಾಗಿದ್ದು, ಪೆಟ್ರೋಲ್ ಲೀಟರಿಗೆ 9.5 ರೂ. ಹಾಗೂ ಡೀಸೆಲ್ ಲೀಟರಿಗೆ 7 ರೂ. ದರ ಇಳಿಕೆಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರ ಬಡವರು ಮತ್ತು ಜನಸಾಮಾನ್ಯರಿಗೆ ಸಹಾಯ ಮಾಡಲು ಬದ್ಧವಿದ್ದು, ಇನ್ನಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಕಟಿಸಲಿದೆ. ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸಲು ಎಲ್ಲ ರೀತಿಯ ನೆರವುಗಳನ್ನು ನೀಡಲಿದೆ. ಈಗ ಅಬಕಾರಿ ಸುಂಕ ಕಡಿತ ಮಾಡಿರುವುದರ ಪ್ರಯೋಜನವನ್ನು ಎಲ್ಲ ರಾಜ್ಯಗಳು ಜನರಿಗೆ ತಲುಪಿಸಬೇಕು. ಕಳೆದ ಬಾರಿ ನವೆಂಬರ್ ತಿಂಗಳಲ್ಲಿ ತೆರಿಗೆ ಇಳಿಸದ ರಾಜ್ಯಗಳು ಕೂಡ ಈಗ ತೆರಿಗೆ ಇಳಿಕೆಯನ್ನು ಮಾಡಬೇಕೆಂದು ನಿರ್ಮಲಾ ಸೀತಾರಾಮನ್ ಮನವಿ ಮಾಡಿದ್ದಾರೆ. ಅಬಕಾರಿ ಸುಂಕ ಇಳಿಕೆಯಿಂದಾಗಿ ಕೇಂದ್ರ ಸರಕಾರಕ್ಕೆ ವರ್ಷದಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಹೊರೆ ಬೀಳಲಿದೆ.
ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಕೇಂದ್ರ ಸರಕಾರ ದೇಶದ 90 ಲಕ್ಷ ಗ್ರಾಹಕರಿಗೆ ಪ್ರತೀ ಸಿಲಿಂಡರಿಗೆ 200 ರೂಪಾಯಿ ಸಬ್ಸಿಡಿ ನೀಡುತ್ತಿದೆ. ಇದಕ್ಕಾಗಿ 6100 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಇದಲ್ಲದೆ, ಪ್ಲಾಸ್ಟಿಕ್ ಉತ್ಪನ್ನಗಳಿಗೆ ಬಳಸುವ ಕಚ್ಚಾ ವಸ್ತುಗಳು ಮತ್ತು ಸ್ಟೀಲ್ ಹಾಗೂ ಕಬ್ಬಿಣದ ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಇಳಿಸಲಾಗಿದೆ. ಇದರಿಂದ ಉತ್ಪನ್ನಗಳ ಬೆಲೆಗಳು ಇಳಿಕೆಯಾಗಿ ಜನರಿಗೆ ಲಾಭ ದೊರಕಲಿದೆ ಎಂದು ಸಚಿವೆ ನಿರ್ಮಲಾ ತಿಳಿಸಿದ್ದಾರೆ.
ಜಗತ್ತು ಕಷ್ಟದ ದಿನಗಳನ್ನು ಎದುರಿಸುತ್ತಿದೆ. ಕೋವಿಡ್ ಸೋಂಕಿನ ಬಳಿಕ ಚೇತರಿಕೆ ಹಾದಿಯಲ್ಲಿದೆ. ಉಕ್ರೇನ್ ಯುದ್ಧದಿಂದಾಗಿ ಕೆಲವು ವಸ್ತುಗಳ ಪೂರೈಕೆ ಮತ್ತು ಸರಬರಾಜಿನಲ್ಲಿ ಸಮಸ್ಯೆ ಆಗಿತ್ತು. ಇದರ ಕಾರಣದಿಂದಾಗಿ ಹಲವು ರಾಷ್ಟ್ರಗಳ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
Prime Minister Narendra modi Saturday said the slew of economic measures, especially the cut in excise duty on fuel prices, taken by the government will provide relief to the citizens and further ‘Ease of Living’. Soon after Union Finance Minister Nirmala sitharaman announced the steps, PM Modi took to Twitter, saying: “It is always people first for us! Today’s decisions, especially the one relating to a significant drop in petrol and diesel prices will positively impact various sectors, provide relief to our citizens and further ‘Ease of Living.’”
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm