ಬ್ರೇಕಿಂಗ್ ನ್ಯೂಸ್
02-05-22 09:40 pm HK Desk News ದೇಶ - ವಿದೇಶ
ನವದೆಹಲಿ, ಮೇ 2: ಮಕ್ಕಳಿಗೆ ಕಾಗದ ಕೊಟ್ಟು ಶನಿ ಗ್ರಹದ ಚಿತ್ರ ಬಿಡಿಸಲು ಹೇಳಿದರೆ, ಗೋಲಾಕಾರದ ಜೊತೆಗೆ ಅದರ ಸುತ್ತ ಸುತ್ತು ಹೊಡೆಯುವ ಉಪಗ್ರಹಗಳನ್ನು ತೋರಿಸುವುದಕ್ಕಾಗಿ ಅತ್ತಿತ್ತ ರೌಂಡ್ಸ್ ಗಳನ್ನು ಬಿಡಿಸುತ್ತಾರೆ. ಯಾಕಂದ್ರೆ, ಶನಿ ಗ್ರಹದ ಸುತ್ತ 82 ಮಾದರಿಯ ಚಂದ್ರನ ರೀತಿಯ ಉಪಗ್ರಹಗಳು ಸುತ್ತುತ್ತಿವೆ. ಆದರೆ ಈ ಪೈಕಿ ಅತಿ ದೊಡ್ಡದು ಎನ್ನಲಾಗಿರುವ ಟೈಟಾನ್ ಎನ್ನುವ ಗ್ರಹದಲ್ಲಿ ಭೂಮಿಯ ರೀತಿಯಲ್ಲೇ ನದಿ, ಸರೋವರಗಳು, ನೀರು ಆವಿಯಾಗಿ ಮಳೆ ಬರುತ್ತಿರುವ ಪರಿಸರ ಇರುವುದನ್ನು ಪತ್ತೆ ಮಾಡಲಾಗಿದೆ.
ಸೌರವ್ಯೂಹದ ರೀತಿಯಲ್ಲೇ ಶನಿಗ್ರಹದ ಸುತ್ತಲೂ ವೃತ್ತಾಕಾರದಲ್ಲಿ ಹಲವಾರು ಉಪ ಗ್ರಹಗಳು ಸುತ್ತುತ್ತಿರುತ್ತವೆ. ಈ ಪೈಕಿ ಅತಿ ದೊಡ್ಡದು ಎನ್ನಲಾಗಿರುವ ಟೈಟಾನ್ ಎಂಬುದು ಭೂಮಿಯ ಮಾದರಿಯಲ್ಲೇ ಇದ್ದು, ಅಲ್ಲಿ ನದಿ, ಸರೋವರಗಳಿದ್ದು ನೀರು ಆವಿಯಾಗಿ ಮಳೆ ಬರುವುದನ್ನೂ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಆದರೆ ಭೂಮಿಗಿಂತ ವಿಭಿನ್ನವಾಗಿರುವ ಪರಿಸರ ಅಲ್ಲಿದೆ ಎನ್ನುವುದನ್ನು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ದ್ರವ ರೂಪದ ಮೀಥೇನ್ ಪರಿಸರದಲ್ಲಿ ಹರಡಿಕೊಂಡಿದ್ದು, ಈ ಕಾರಣದಿಂದಾಗಿ ನೆಲದ ಮೇಲಿನ ಮಂಜುಗಡ್ಡೆಯ ಮೇಲೆ ಹೆಚ್ಚಾಗಿ ಮೀಥೇನ್ ಪದರ ಇದೆ. ನೈಟ್ರಜನ್ ಮತ್ತು ಕಾರ್ಬನ್ ಡೈ ಆಕ್ಸೈಡ್ ಗಾಳಿ ಬೀಸುವಿಕೆಯ ಪರಿಣಾಮ ಕೆಲವು ಕಡೆ ಮರಳು ಮತ್ತು ಗಟ್ಟಿ ಪದಾರ್ಥಗಳು ದಿಬ್ಬದ ರೀತಿಯಲ್ಲಿವೆ ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಅಮೆರಿಕದ ಸ್ಟಾನ್ ಫೋರ್ಡ್ ಯುನಿವರ್ಸಿಟಿಯ ಜೀಯೋಲಜಿಸ್ಟ್ ಮ್ಯಾಥ್ಯೂ ಲ್ಯಾಪೋಟ್ರ್ ಮತ್ತವರ ತಂಡ ಈ ಬಗ್ಗೆ ಅಧ್ಯಯನ ಮಾಡಿದ್ದು, ಸೌರವ್ಯೂಹದಲ್ಲಿಯೇ ಮತ್ತೊಂದು ಭೂಮಿ ಮಾದರಿಯ ಗ್ರಹ ಇರುವ ಬಗ್ಗೆ ಪ್ರಬಲ ಶಂಕೆ ವ್ಯಕ್ತಪಡಿಸಿದ್ದಾರೆ.
ಬಹುಕಾಲದಿಂದ ವಿಜ್ಞಾನಿಗಳು ಭೂಮಿಯ ರೀತಿಯಲ್ಲೇ ಬೇರೆ ಗ್ರಹಗಳಲ್ಲಿ ವಾತಾವರಣ ಇದೆಯೇ, ನೀರಿನ ಪ್ರಮಾಣ ಇದೆಯೇ ಎನ್ನುವ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ್ದರು. ಇದೀಗ ಶನಿಯ ಸುತ್ತ ತಿರುಗುವ ಗ್ರಹಗಳಲ್ಲಿ ಭೂಮಿಯ ರೀತಿಯದ್ದೇ ಪರಿಸರ ಇರುವುದನ್ನು ಪತ್ತೆ ಮಾಡಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಗಾಳಿಯ ಕಾರಣದಿಂದಾಗಿ ಭೂಮಿಯಲ್ಲಿ ದಿಣ್ಣೆ, ದಿಬ್ಬಗಳು ಉಂಟಾಗಿದ್ದರೆ, ಅದೇ ರೀತಿಯ ಲಕ್ಷಣಗಳನ್ನು ಟೈಟಾನ್ ಗ್ರಹದಲ್ಲಿ ಪತ್ತೆ ಮಾಡಲಾಗಿದೆ. ಅಲ್ಲಿಯೂ ನೆಲ ಪದರದಲ್ಲಿ ದಿಬ್ಬಗಳು, ಎತ್ತರ, ತಗ್ಗುಗಳಿದ್ದು ಗಾಳಿಯ ಚಲನೆಯಿಂದಾಗಿ ಈ ರೀತಿಯ ಗಟ್ಟಿ ಪದರಗಳು ಉಂಟಾಗಿವೆ ಎನ್ನುವ ಅಂದಾಜನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
Ask someone to draw a planet on paper, odds are they will draw Saturn with its majestic rings. Surrounded by 82 moons, the Saturnian system in itself is like a mini solar system. Among these 82 moons, the most interesting is Titan, which looks similar to Earth.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm