ಬ್ರೇಕಿಂಗ್ ನ್ಯೂಸ್
24-03-22 02:00 pm HK Desk news ದೇಶ - ವಿದೇಶ
ಜೈಪುರ, ಮಾ.24 : ನಾವು ನೆಹರು -ಗಾಂಧಿ ಕುಟುಂಬದ ಗುಲಾಮರು. ಕೊನೆಯ ಉಸಿರು ಇರುವವರೆಗೂ ಗುಲಾಮರಾಗಿಯೇ ಇರುತ್ತೇವೆ. ಹೀಗೆ ಹೇಳಿಕೊಳ್ಳಲು ನಾಚಿಕೆ ಪಡುವುದಿಲ್ಲ ಎಂದು ರಾಜಸ್ಥಾನದ ಸಿರೋಹಿ ಶಾಸಕ ಸನ್ಯಾಮ್ ಲೋಧಾ ಅವರು ಅಲ್ಲಿನ ವಿಧಾನಸಭೆಯಲ್ಲಿ ಹೇಳಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಶಾಸಕ ಲೋಧಾ, ರಾಜಸ್ಥಾನ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನದ ವೇಳೆ ಮಾತನಾಡಿದ್ದಾರೆ. ಹರಿದೇವ್ ಜೋಶಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ತಿದ್ದುಪಡಿ ಮಸೂದೆ ಕುರಿತು ಮಾತನಾಡಿದ ಲೋಧಾ, ಬಿಜೆಪಿಯವರು ನಮ್ಮ ಬಗ್ಗೆ ಗಾಂಧಿ ಕುಟುಂಬದ ಗುಲಾಮರು ಎಂದು ದೂರುತ್ತಾರೆ. ಹೌದು.. ನಾವು ನೆಹರು - ಗಾಂಧಿ ಕುಟುಂಬದ ಗುಲಾಮರು. ನಾವು ಅವರ ಇಶಾರೆಯಡಿಯಲ್ಲೇ ಇರಬೇಕಾಗುತ್ತದೆ. ನಾವು ಯಾವಾಗಲೂ ಹಾಗೆಯೇ ಇರಲು ಬಯಸುತ್ತೇವೆ ಎಂದಿದ್ದಾರೆ.
ನಾವು ಗಾಂಧಿ ಕುಟುಂಬದ ಕೊಡುಗೆಯನ್ನು ನಿರಾಕರಿಸುವಂತಿಲ್ಲ. ಸ್ವಾತಂತ್ರ್ಯ ಕಾಲದಲ್ಲಿ ಗಾಂಧಿ ಕುಟುಂಬ ಇರದೇ ಇರುತ್ತಿದ್ದರೆ ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ. ಹಾಗಾಗಿ ನಾವು ಅವರಿಗೆ ಋಣಿಯಾಗಿರಲೇಬೇಕು ಎಂದು ಲೋಧಾ ಹೇಳಿದ್ದಾರೆ. ಇವರ ಮಾತು ಕೇಳಿ ಪ್ರತಿಪಕ್ಷ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನು ಛೇಡಿಸಿದ್ದಾರೆ. ಅಸೆಂಬ್ಲಿಯಲ್ಲಿ ಎದ್ದು ನಿಂತು ಮಾತನಾಡಿದ ಪ್ರತಿಪಕ್ಷದ ನಾಯಕ ರಾಜೇಂದ್ರ ರಾಥೋಡ್, ನನ್ನ ಮಿತ್ರರಾದ ಓ ಗುಲಾಮರೇ! ಗುಲಾಮಗಿರಿ ಒಪ್ಪಿಕೊಂಡಿರುವುದಕ್ಕೆ ನಿಮಗೆ ಅಭಿನಂದನೆಗಳು. ನಿಮ್ಮ ಮಾತಿನ ಪ್ರಕಾರ ರಾಜಸ್ಥಾನದ ಎಲ್ಲ ಕಾಂಗ್ರೆಸ್ ಶಾಸಕರು ಕೂಡ ಗುಲಾಮರು ತಾನೇ ಎಂದು ವ್ಯಂಗ್ಯವಾಗಿ ಕೇಳಿದರು
ಗುಲಾಮರು ಎಂದ ಮೇಲೆ ಇವರು ಸಮಾಜಕ್ಕೆ ಯಾವ ಸಂದೇಶ ಕೊಡುತ್ತಾರೆ. ಗುಲಾಮರು ತಮ್ಮ ಮನಸ್ಸಿನಿಂದ ಮಾತನಾಡಲು ಸಾಧ್ಯವಿಲ್ಲ. ಲೋಧಾ ಈ ಪರಿಯ ಗುಲಾಮಿತನಕ್ಕಾಗಿ ಎರಡು ಬಾರಿ ಕಾಂಗ್ರೆಸ್ನಲ್ಲಿಯೇ ಟಿಕೆಟ್ ನಿರಾಕರಣೆಗೆ ಒಳಗಾಗಿದ್ದಾರೆ. ನಿಮ್ಮ ಗುಲಾಮಿತನಕ್ಕೆ ಸಿಕ್ಕ ಭಿಕ್ಷೆಯೇ ಅದು ಎಂದು ರಾಥೋಡ್ ಲೇವಡಿ ಮಾಡಿದ್ದಾರೆ.
Rajasthan Minister and Congress MLA Pratap Khachariyawas on Wednesday slammed Sirohi MLA Sanyam Lodha over his “slaves of the Nehru-Gandhi family” remark saying that the family which itself fought for the country’s freedom, will never ask anyone to do its slavery.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm