ಬ್ರೇಕಿಂಗ್ ನ್ಯೂಸ್
23-03-22 05:32 pm HK Desk news ದೇಶ - ವಿದೇಶ
ನವದೆಹಲಿ, ಮಾ.23: ದೆಹಲಿ ಪಾಲಿಕೆ ಚುನಾವಣೆಯನ್ನು ಸಕಾಲದಲ್ಲಿ ನಡೆಸಿ, ಬಿಜೆಪಿ ಗೆದ್ದರೆ ಆಮ್ ಆದ್ಮಿ ಪಕ್ಷವು ರಾಜಕೀಯವನ್ನೇ ತ್ಯಜಿಸಲಿದೆ. ಜಗತ್ತಿನ ಅತಿದೊಡ್ಡ ಪಕ್ಷ ಎನ್ನುತ್ತಿರುವ ಬಿಜೆಪಿಗೆ ಸವಾಲು ಹಾಕುತ್ತೇನೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹೊಸ ಸವಾಲು ಹಾಕಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ಬಿಜೆಪಿ ಸರಕಾರವು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರಿಗೆ ಅವಮಾನ ಮಾಡಿದೆ. ತಾವು ಸೋಲುತ್ತೇವೆಂಬ ಭಯದಲ್ಲಿ ಬಿಜೆಪಿ ದೆಹಲಿ ಪಾಲಿಕೆಯ ಚುನಾವಣೆಯನ್ನು ಮುಂದೂಡುತ್ತೆ ಅಂದಾದಲ್ಲಿ ಮುಂದೆ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನೂ ಇದೇ ರೀತಿ ಸೋಲುವ ಭಯದಲ್ಲಿ ಮುಂದೂಡಬಹುದು ಎಂದು ಹೇಳಿದ್ದಾರೆ.
ದೆಹಲಿ ಪಾಲಿಕೆಯ ಚುನಾವಣೆಯನ್ನು ಏಕೀಕರಣದ ನೆಪದಲ್ಲಿ ಬಿಜೆಪಿ ಮುಂದೂಡುತ್ತಿದೆ ಎಂದು ಹೇಳಿದ ಕೇಜ್ರಿವಾಲ್, ಗುಜರಾತಿನಲ್ಲಿ ಚುನಾವಣೆ ಸೋಲುತ್ತೇವೆಂದು ಭಯದಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರವನ್ನು ಒಂದಾಗಿಸುತ್ತೇವೆಂದು ಹೇಳಿ ಅಲ್ಲಿಯ ಚುನಾವಣೆಯನ್ನೂ ಇದೇ ರೀತಿ ಮುಂದೂಡುತ್ತೀರಾ.. ಲೋಕಸಭೆ ಚುನಾವಣೆಯನ್ನೂ ಇದೇ ರೀತಿ ಮುಂದೂಡಿಕೆ ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ದೆಹಲಿಯಲ್ಲಿ ಉತ್ತರ, ದಕ್ಷಿಣ, ಪೂರ್ವ ಹೀಗೆ ಮೂರು ಪ್ರತ್ಯೇಕ ಮಹಾನಗರ ಪಾಲಿಕೆಗಳಿದ್ದು ಅವನ್ನು ಒಂದಾಗಿಸಲು ಕೇಂದ್ರ ಸಚಿವ ಸಂಪುಟ ನಿರ್ಧಾರಕ್ಕೆ ಬಂದಿದ್ದು, ಅದಕ್ಕಾಗಿ ಪ್ರತ್ಯೇಕ ಮಸೂದೆಯನ್ನು ತರಲು ಮುಂದಾಗಿದೆ. ಇದಕ್ಕಾಗಿ ಸದ್ಯಕ್ಕೆ ಚುನಾವಣೆ ನಡೆಸದಿರಲು ದೆಹಲಿ ಚುನಾವಣೆ ಆಯೋಗಕ್ಕೆ ಕೇಂದ್ರ ತಿಳಿಸಿದೆ. ಇದರಿಂದಾಗಿ ಮಹಾನಗರ ಪಾಲಿಕೆಯ ಚುನಾವಣೆ ಮುಂದೂಡಿಕೆ ಆಗಿದ್ದು ಆಮ್ ಆದ್ಮಿ ಪಕ್ಷವು ಬಿಜೆಪಿ ನಡೆಗೆ ಕಿಡಿಕಾರಿದೆ.
Delhi Chief Minister Arvind Kejriwal on Wednesday said the Aam Aadmi Party (AAP) will quit politics if the Bharatiya Janata Party (BJP) gets the civic polls conducted on time and wins them.“I dare BJP to conduct elections on time and win. If BJP wins the civic elections, we will leave politics,” Kejriwal told reporters at Delhi Vidhan Sabha.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm