ಬ್ರೇಕಿಂಗ್ ನ್ಯೂಸ್
11-03-22 03:15 pm HK Desk news ದೇಶ - ವಿದೇಶ
ಲಕ್ನೋ, ಮಾ.11 : ಉತ್ತರ ಪ್ರದೇಶ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಗಳಿಸಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಈ ಫಲಿತಾಂಶದಿಂದ ಕಾರ್ಯಕರ್ತರು ಕುಗ್ಗುವುದು ಬೇಡ. ನಾವು ಮುಂದಿನ ದಿನಗಳಲ್ಲಿ ಮತ್ತೆ ತಿರುಗಿ ಬೀಳಲಿದ್ದೇವೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿರುವ ಮಾಯಾವತಿ, ನಾವು ನಿರೀಕ್ಷೆ ಮಾಡದ ರೀತಿ ಫಲಿತಾಂಶ ಬಂದಿದೆ. ಹಾಗೆಂದು ನಾವು ಇದರಿಂದ ಧೃತಿಗೆಡಬಾರದು. ನಾವು ಈ ಫಲಿತಾಂಶದಿಂದ ಪಾಠ ಕಲಿಯಬೇಕು. ಫಲಿತಾಂಶವನ್ನು ಸವಾಲಾಗಿ ಸ್ವೀಕರಿಸಿ, ಪಕ್ಷ ಸಂಘಟನೆಗೆ ಮತ್ತಷ್ಟು ಪ್ರಯತ್ನ ಪಡಬೇಕು. ಮುಂದೆ ಅಧಿಕಾರಕ್ಕೆ ಬರುವಂತೆ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಪಕ್ಷವು ಕಠಿಣ ದಿನಗಳನ್ನು ಎದುರಿಸುತ್ತಿದೆ. ಹಿಂದೆ ಬಿಜೆಪಿ ಕೂಡ ಕಠಿಣ ಪರಿಸ್ಥಿತಿಯಲ್ಲೇ ಇತ್ತು. ಆದರೆ ಹಂತ ಹಂತವಾಗಿ ಮೇಲೆದ್ದು ಬಂದಿದೆ. 2017ರ ಮೊದಲು ಬಿಜೆಪಿಗೂ ಉತ್ತಮ ಸ್ಥಿತಿ ಇರಲಿಲ್ಲ. ಬಿಜೆಪಿಗೆ ಆಗ ಯಾವ ಸ್ಥಿತಿಯಿತ್ತೋ ಅದೇ ಸ್ಥಿತಿ ಈಗ ಕಾಂಗ್ರೆಸಿನದ್ದಾಗಿದೆ. ಉತ್ತರ ಪ್ರದೇಶದ ಫಲಿತಾಂಶ ನಮಗೆಲ್ಲ ಪಾಠ ಆಗಬೇಕು. ಹೇಗೆ ಸವಾಲನ್ನು ಸ್ವೀಕರಿಸಿ ಮುಂದೆ ಬರಬೇಕು ಅನ್ನುವುದನ್ನು ಕಲಿಯಬೇಕು ಎಂದು ಮಾಯಾವತಿ ಸಲಹೆ ಮಾಡಿದ್ದಾರೆ.
ನಮ್ಮ ಬಗ್ಗೆ ವಿರೋಧ ಪಕ್ಷಗಳು ನೆಗೆಟಿವ್ ಕ್ಯಾಂಪೇನ್ ಮಾಡಿದ್ದು ಮುಳುವಾಯ್ತು ಎಂದು ಹೇಳಿದ ಮಾಯಾವತಿ, ಬಿಎಸ್ಪಿ ಎಂದರೆ ಬಿಜೆಪಿಯ ಬೀ ಟೀಮ್ ಎಂದು ಅಪಪ್ರಚಾರ ನಡೆಸಿದರು. ಆದರೆ ಸತ್ಯ ತದ್ವಿರುದ್ಧವಾಗಿತ್ತು. ಬಿಜೆಪಿ ಮತ್ತು ಬಿಎಸ್ಪಿ ನಡುವಿನ ಹೋರಾಟ ಕೇವಲ ರಾಜಕೀಯವಾಗಿ ಮಾತ್ರ ಅಲ್ಲ. ಸೈದ್ಧಾಂತಿಕವಾಗಿ ಅಷ್ಟೇ ಮುಖ್ಯ. ಜನರು ಬಿಎಸ್ಪಿಯನ್ನು ದೂರವಿಡಲು ಬಿಜೆಪಿ ಮತ ಕೊಟ್ಟಿದ್ದಾರೆ. ಬಿಎಸ್ಪಿ ಪಕ್ಷದ ಬಗ್ಗೆ ವಿರೋಧದಿಂದಾಗಿ ಬಿಜೆಪಿಗೆ ಓಟು ಕೊಟ್ಟಿಲ್ಲ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂದು ಮತ ನೀಡಿದ್ದಾರೆ. ಆದರೆ ರಾಜಕಾರಣದಲ್ಲಿ ಸೋಲು- ಗೆಲುವು ಸಹಜ. ಪಕ್ಷದ ನಾಯಕರು ಸಂದರ್ಭಕ್ಕೆ ತಕ್ಕಂತೆ ಒಗ್ಗಿಕೊಂಡು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವತ್ತ ಕೆಲಸ ಮಾಡಬೇಕಿದೆ ಎಂದು ಮಾಯಾವತಿ ಹೇಳಿದ್ದಾರೆ.
The Bahujan Samaj Party managed to win only one of the 403 assembly seats in Uttar Pradesh. Following the party’s dismal performance in the UP polls, BSP chief Mayawati urged party workers to not feel discouraged and promised a comeback in the future.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am